ಬೆಂಗಳೂರು: ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರರಂಗದ ಗಣ್ಯರಾದ ರವಿಚಂದ್ರನ್, ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ದರ್ಶನ್, ಕಿಚ್ಚ ಸುದೀಪ್, ಶೃತಿ, ಸುಧಾರಾಣಿ, ಚರಣ್ರಾಜ್, ಯಶ್, ದ್ರುವ ಸರ್ಜ, ಉಮೇಶ್, ಸೇರಿದಂತೆ ಅನೇಕ ಕಲಾವಿದರು ನಿರ್ಮಾಪಕರು ಅಂತಿಮ ದರ್ಶನ ಪಡೆದು ತಮ್ಮ ಗೌರವ ನಮನ ಸಲ್ಲಿಸಿದ್ದಾರೆ.
ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಸರ್ಕಾರದ ಪೊಲೀಸ್ ಗೌರವದೊಂದಿಗೆ ಅವರ ಅಂತ್ಯ ಸಂಸ್ಕಾರ ನಡೆದಿದೆ.ನೇತ್ರ ದಾನ: ದ್ವಾರಕೀಶ್ರವರು ತಮ್ಮ ನಿಧನದ ನಂತರ ತಮ್ಮ ಕಣ್ಣುಗಳು ಮತ್ತೊಬ್ಬ ಕಣ್ಣು ಕಾಣದ ವ್ಯಕ್ತಿಗೆ ಬೆಳಕಾಗಲಿ ಎಂದು ತಮ್ಮ ಕಣ್ಣಿನ ದಾನವನ್ನು ಮಾಡಿದ್ದಾರೆ.