ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಮೀರ್ ಅಹಮದ್ ಖಾನ್ ಅವರು ವಸತಿ ಇಲಾಖೆ ಹೊಣೆ ಗಾರಿಕೆ ವಹಿಸಿಕೊಂಡ ನಂತರ ಬಡವರಿಗೆ ಸೂರು ಕಲ್ಪಿಸುವ ವಿಚಾರ ದಲ್ಲಿ ದಿಟ್ಟ ತೀರ್ಮಾನ ಕೈಗೊಳ್ಳಲಾಗಿದೆ.
ವರ್ಷಗಳ ಕಾಲ ಸ್ವಂತ ಮನೆಯ ಬಡವರ ಕನಸು ನನಸಾಗಿದೆಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಆರಂಭಿಸಲಾದ ಈ ಯೋಜನೆ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿ ಮಾಡಲು ಸಾಧ್ಯವಾಗದೆ ನೆನೆಗುದಿಗೆ ಬಿದ್ದಿತ್ತು. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿರಂತರ ಪ್ರಯತ್ನ ದಿಂದ ಬಡ ಕುಟುಂಬಗಳು ಪಾವತಿಸಬೇಕಿದ್ದ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸುತ್ತಿದೆ.
ಬಡ ಕುಟುಂಬಗಳ ಆರ್ಥಿಕ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ವಸ್ತು ಸ್ಥಿತಿ ಮನವರಿಕೆ ಮಾಡಿಕೊಟ್ಟು ಹತ್ತಾರು ಬಾರಿ ಅಧಿಕಾರಿಗಳ ಸಭೆ ನಡೆಸಿ ಫಲಾನುಭವಿಗಳ ಪಾಲಿನ ವಂತಿಗೆ ಮೊತ್ತ 6170 ಕೋಟಿ ರೂ.ಸಂಪೂರ್ಣ ವಾಗಿ ಸರ್ಕಾರವೇ ಭರಿಸುವ ಮಹತ್ವದ ತೀರ್ಮಾನ ಸಂಪುಟ ಸಭೆ ಕೈಗೊಳ್ಳುವಂತೆ ಮಾಡುವಲ್ಲಿ ಜಮೀರ್ ಅಹಮದ್ ಖಾನ್ ಯಶಸ್ವಿ ಆಗಿದ್ದಾರೆ.
1,80,253 ಮನೆಗಳ ಕಾಮಗಾರಿ ಪೂರ್ಣ ಗೊಳಿಸಲು ಮೊದಲನೇ ಕಂತು 500 ಕೋಟಿ ರೂ. ಬಿಡುಗಡೆ ಆಗಿದ್ದು ಮೊದಲ ಹಂತದಲ್ಲಿ 36, 789 ಮನೆ ಗಳನ್ನು ಇಂದು ಹಂಚಿಕೆ ಮಾಡಲಾಗುತ್ತಿದೆ.ಕೆ ಆರ್ ಪುರದ ನಗರೇಶ್ವರ ನಾಗೇನಹಳ್ಳಿ ಯಲ್ಲಿ 1047 ಮನೆ ನಿರ್ಮಿಸಿದ್ದು ಇಂದು 480 ಮನೆ ಹಂಚಿಕೆ ಮಾಡಲಾಗುತ್ತಿದೆ.
ಇದೇ ರೀತಿ ರಾಜ್ಯಾದ್ಯಂತ ನಿರ್ಮಿಸಿರುವ ಮನೆಗಳನ್ನು ಏಕ ಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಂಚಿಕೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ತಮ್ಮ ಕ್ಷೇತ್ರ ದಲ್ಲಿದ್ದು ಕಾರ್ಯಕ್ರಮ ಕ್ಕೆ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿಯಲ್ಲಿ ಫಲಾನುಭವಿಗಳು ತಲಾ 4.50 ಲಕ್ಷ ರೂ. ಪಾವತಿಸಬೇಕಿತ್ತಾದರೂ ಇದೀಗ 1 ಲಕ್ಷ ರೂ. ಪಾವತಿಸಿದರೆ ಉಳಿದ ಮೊತ್ತ ಸರ್ಕಾರವೇ ಭರಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 7.50 ಲಕ್ಷ ರೂ. ವೆಚ್ಚ ವಾಗಲಿದ್ದು 3 ಲಕ್ಷ ಸಬ್ಸಿಡಿ ಹೊರತು ಪಡಿಸಿದರೆ ಉಳಿದ ಮೊತ್ತ ಫಲಾನುಭವಿ ಕೊಡಬೇಕಿತ್ತು. ಬ್ಯಾಂಕ್ ಸಾಲವೂ ದೊರೆಯದೆ ಅಷ್ಟು ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದವು.ಇದೀಗ ಸರ್ಕಾರ ದ ತೀರ್ಮಾನ ದಿಂದ 1,80,253 ಕುಟುಂಬಗಳಿಗೆ ನೆಮ್ಮದಿ ಸಿಕ್ಕಂತಾಗಿದೆ.
ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ತೀರ್ಮಾನ ನಮ್ಮ ಅವಧಿಯಲ್ಲಿ ಕೈಗೊಂಡಿದ್ದು ಸಂತೋಷ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ನಮ್ಮ ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾಳಜಿ, ಹಣಕಾಸು ಇಲಾಖೆ ಅಧಿಕಾರಿಗಳ ಸಹಕಾರ ದಿಂದ ಬಡವರು ಶಾಶ್ವತ ಸೂರು ಪಡೆದಂತಾಗಿದೆ
ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳುತ್ತಾರೆ.