ಯಲಹಂಕ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ ಚಾಲಕ ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ಮಂಗಳವಾರ ಮಧ್ಯಾಹ್ನ 3:00 ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ತುಮಕೂರು ರಸ್ತೆಯ ಅಂಚೆ ಪಾಳ್ಯದ ಬಳಿ ಜರುಗಿದೆ.
ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ KA 04 NB 5879 ನಂಬರಿನ ಮಾರುತಿ xl6 ಕಾರನ್ನು ಕಾರಿನ ಮಾಲೀಕ ಕೇರಳ ಮೂಲದ ಬೆಂಗಳೂರಿನ ಜಾಲಹಳ್ಳಿ ಬಳಿಯ ಶೆಟ್ಟಿಹಳ್ಳಿ ನಿವಾಸಿ ಅನಿಲ್ ಕುಮಾರ್ ಅಯ್ಯರ್ (48) ಸ್ವತಃ ಚಲಾಯಿಸಿಕೊಂಡು ಬೆಂಗಳೂರಿನ ಕಡೆ ಬರುತ್ತಿರುವಾಗ ಮಾದವರ ನೈಸ್ ರಸ್ತೆಯ ಸಮೀಪವಿರುವ ಅಂಚೆಪಾಳ್ಯ ಟೋಲ್ ಬಳಿ ಬೆಂಕಿ ಕಾಣಿಸಿಕೊಂಡಿದೆ ಕೂಡಲೆ ಕಾರ್ ನಿಲ್ಲಿಸಿದ ಚಾಲಕ ಅನಿಲ್ ಕುಮಾರ್ ಕಾರ್ ನಿಂದ ಹೊರಗೆ ಇಳಿಯಲು ಪ್ರಯತ್ನಿಸಿದ್ದರು ಕಾರ್ ಲಾಕ್ ಆಗಿದ್ದರಿಂದ ಸಾಧ್ಯವಾಗಿಲ್ಲ ಕಾರ್ ನಿಂದ ಇಳಿಯಲು ಪ್ರಯತ್ನಿಸುತ್ತಿರುವಾಗ ಬೆಂಕಿಯ ಕೆನ್ನಾಲಿಗೆ ಕಾರ್ ನ ತುಂಬಾ ಆವರಿಸಿಕೊಂಡಿದ್ದು ದಗದಗನೆ ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನ ವಾಗಿದ್ದಾರೆ.
ಬೆಂಕಿನೊಂದಿಸಲು ಸ್ಥಳೀಯರ ಪ್ರಯತ್ನ ಹೆದ್ದಾರಿಯಲ್ಲಿ ಬೆಂಕಿ ಇಂದಾಗಿ ಉರಿಯುತ್ತಿದ್ದ ಕಾರನ್ನು ನೋಡಿದ ಸ್ಥಳೀಯರು ಕಾರ್ ಬಾಗಿಲು ತೆಗೆದು ಚಾಲಕನನ್ನು ಹೊರಗೆ ತೆಗೆಯುವ ಪ್ರಯತ್ನ ಮಾಡಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ಬೆಂಕಿಯು ಸಂಪೂರ್ಣವಾಗಿ ಕಾರಿಗೆ ಆವರಿಸಿಕೊಂಡಿದ್ದು ಅದು ಸಾಧ್ಯವಾಗಿಲ್ಲ ಬಳಿಕ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರು ಅದು ಕೂಡ ಸಾಧ್ಯವಾಗಿಲ್ಲ ಹೀಗಾಗಿ ಕಾರು ಮತ್ತು ಚಾಲಕ ಸಂಪೂರ್ಣವಾಗಿ ದಹನಗೊಂಡಿದ್ದು ಏನು ಮಾಡಲಾಗದೆ ಸಾರ್ವಜನಿಕರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದು ಕೆಲ ಹೊತ್ತಿನ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಭೇಟಿ ಪರಿಶೀಲನೆ ವಿಷಯ ತಿಳಿಯುತ್ತಿದ್ದಂತೆ ದುರ್ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೆÇಲೀಸ್ ಹಿರಿಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡಿ ಕಾರಿಗೆ ಬೆಂಕಿ ಹತ್ತಿಕೊಂಡ ಮೂಲ ಕಾರಣವೇನೆಂದು ಹುಡುಕಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೆಲವು ವಸ್ತುಗಳನ್ನು ರವಾನಿಸಿದ್ದಾರೆ.
ರುಬಿನ. ಪ್ರತ್ಯಕ್ಷ ದರ್ಶಿ . ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು ಕೂಡಲೇ ಚಾಲಕ ಕಾರನ್ನು ನಿಲ್ಲಿಸಿ ಕೆಳಗಿಳಿಯಲು ಪ್ರಯತ್ನಿಸುತ್ತಿರುವಾಗಲೇ ಕಾರಿನ ಮುಂಭಾಗದಿಂದ ಬೆಂಕಿ ಜೋರಾಗಿ ಚಾಲಕನ ಹಿಂಬದಿಯ ಸೀಟುವರೆಗೂ ಹವರಿಸಿಕೊಂಡಿತ್ತು ಸ್ಥಳೀಯರು ಕಾರ್ ನ ಡೋರ್ ತೆಗೆಯಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ ಬಳಿಕ ಗ್ಲಾಸ್ ಗಳನ್ನು ಹೊಡೆದು ಚಾಲಕನ್ನು ಹೊರಗೆ ಎಳೆಯುವ ಪ್ರಯತ್ನ ನಡೆಸಿದರು ಬೆಂಕಿ ಹೆಚ್ಚು ಆಗಿದ್ದರಿಂದ ಅದು ಸಾಧ್ಯವಾಗಲಿಲ್ಲ ಚಾಲಕ ಜೋರಾಗಿ ಕೂಗಿಕೊಳ್ಳುತ್ತಿದ್ದು ಕಣ್ಣೆದುರೆ ದುರ್ಘಟನೆ ಸಂಭವಿಸಿದರು ಏನು ಮಾಡಲಾಗದ ಪರಿಸ್ಥಿತಿ.
ಸಾವಿನ ಸುತ್ತ ಹಲವು ಅನುಮಾನ. ಮೊದಲಿಗೆ ಕಾರು ಅಪಘಾತವಾಗಿಲ್ಲ ಆದರೂ ಬೆಂಕಿ ಹತ್ತಿಕೊಂಡಿದ್ದು ಹೇಗೆ?ಕಾರ್ ಡೋರ್ ಲಾಕ್ ತೆಗೆದುಕೊಂಡಿಲ್ಲ ಏಕೆ? ಕಾರ್ ನಲ್ಲಿ ಉಂಟಾದ ತಾಂತ್ರಿಕ ದೋಷವೇನು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದಲೇ ನಿಖರ ಕಾರಣ ಏನೆಂಬುದು ಹೊರಬರಬೇಕಿದೆ.
ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ . ಮಧ್ಯಾಹ್ನ ಸುಮಾರು 3:00ಗಂಟೆ ಗೆ ಈ ಅವಘಡ ಸಂಭವಿಸಿದ್ದು ಸದಾ ವಾಹನ ದಟಣೆಯಿಂದ ಕೂಡಿರುವ ಬೆಂಗಳೂರು ತುಮಕೂರು ಹೆದ್ದಾರಿ ಯಲ್ಲಿ ಕಿಲೋ ಮೀಟರ್ ಗತ್ತಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಯಿತು ಸ್ಥಳಕ್ಕಾಗಮಿಸಿದ ಮಾದನಾಯಕನಹಳ್ಳಿ ಮತ್ತು ಪೀಣ್ಯ ಪೊಲೀಸ್ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.