ಬೆಂಗಳೂರು: ಮಾಲೀಕನ ಮನೆಯಲ್ಲಿ ಕಾರು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂದಿಸಿರುತ್ತಾರೆ.ಬಂಟ್ವಾಳ ನಿವಾಸಿಯಾದ ಜಮಾಲುದ್ದೀನ್ 30 ವರ್ಷ ಎಂಬ ಆರೋಪಿಯು ಇತ್ತೀಚೆಗೆ ಬೆಳ್ಳಂದೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರೀನ್ವುಡ್ ಅಪಾಟ್ರ್ಮೆಂಟ್ ನಲ್ಲಿರುವ ವಾಸವಾಗಿರುವ ವ್ಯಕ್ತಿಯೋವರ ಮನೆಯಲ್ಲಿ ಕಾರು ಚಾಲಕನಾಗಿದ್ದ.
ಈತನು ಕಾರನ್ನು ಕಳವು ಮಾಡಿ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡುವ ಸಮಯದಲ್ಲಿ ಪೊಲೀಸರು ಬ್ಯಾಂಕ್ ಮೂಲಕ ಈತನನ್ನು ಪತ್ತೆ ಹಚ್ಚಿ ಬಂಧಿಸಿರುತ್ತಾರೆ.
ಮಾರುತಿ ಸ್ವಿಫ್ಟ್ ಕಾರ್ 6 ಲಕ್ಷ ರೂಪಾಯಿ ಮೌಲ್ಯದಾಗಿರುತ್ತದೆ.