ಕನಕಪುರ: ಗ್ರಾಮಸ್ಥರ ದೂರಿನ ಮೇರೆಗೆ ಸರ್ವೆ ಇಲಾಖೆ ಅಧಿಕಾರಿಗಳು ಒತ್ತುವರಿಯಾಗಿದ್ದ ಸರ್ಕಾರಿ ಗೋಮಾಳ ದಲ್ಲಿದ ಕೆರೆಯ ಒತ್ತುವರಿ ತೆರವುಗೊಳಿಸಲು ಗಡಿ ಗುರುತಿಸಿದರು.
ತಾಲೂಕಿನ ಕಸಬಾ ಹೋಬಳಿ ತೊಪ್ಪಗಾನಹಳ್ಳಿ ಗ್ರಾಮದ ರಾಯಸಂದ್ರ ಸರ್ವೇ ನಂ. 196 ರಲ್ಲಿ ಸರ್ಕಾರಿ ಗೋಮಾಳದಲ್ಲಿ ಇದ್ದ ಸರ್ಕಾರಿ ಕೆರೆಯನ್ನು ಅಕ್ಕ ಪಕ್ಕದಲ್ಲಿ ಇದ್ದವರು ಮುಚ್ಚಿ ಒತ್ತುವರಿ ಮಾಡಿಕೊಂಡು ಕೃಷಿ ಭೂಮಿ ಯನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದರು ಇತ್ತೀಚಿಗೆ ಒತ್ತುವರಿ ಮಾಡಿಕೊಂಡಿರುವ ಕೆರೆ ಜಾಗಕ್ಕೆ ರಕ್ಷಣಾ ಬೇಲಿ (ಫೆನ್ಸಿಂಗ್) ಹಾಕಿಕೊಳ್ಳಲು ಮುಂದಾಗಿದ್ದರು.
ಎಚ್ಚೆತ್ತುಕೊಂಡ ತೊಪ್ಪಗಾನಹಳ್ಳಿ ಗ್ರಾಮದ ಗ್ರಾಮಸ್ಥರು ರಕ್ಷಣಾ ಬೇಲಿ ಹಾಕದಂತೆ ಒತ್ತುವರಿದಾರರಿಗೆ ತಡೆಯೊಡ್ಡಿ ದರು, ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಕೆರೆ ಜಾಗವನ್ನು ತೆರವುಗೊಳಿಸಿ ಅದನ್ನು ರಕ್ಷಣೆ ಮಾಡಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ತೊಪ್ಪಗಾನಹಳ್ಳಿ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸರ್ವೆ ಇಲಾಖೆ ಮಹೇಶ್ ಮತ್ತು ಸಿಬ್ಬಂದಿ ಸರ್ವೆ ಕಾರ್ಯ ನಡೆಸಿದರು.
ರಾಯಸಂದ್ರ ಸರ್ವೇ ನಂ.196 ರಲ್ಲಿ ಸುಮಾರು 30 ಗುಂಟೆ ಸರ್ಕಾರಿ ಕೆರೆ ಜಾಗ ಒತ್ತುವರಿಯಾಗಿದ್ದ ಸರ್ವೆ ಯಲ್ಲಿ ಬೆಳಕಿಗೆ ಬಂದಿತ್ತು ಅಧಿಕಾರಿಗಳು ಸರ್ವೇ ನಡೆಸಿ ಸರ್ಕಾರಿ ಕೆರೆ ಜಾಗದ ಗಡಿ ಗುರುತಿಸಿದ್ದು ಗುರುತಿಸಿರುವ ಸರ್ಕಾರಿ ಕೆರೆಯ ಗಡಿಗೆ ಗ್ರಾಮಸ್ಥರೇ ಕಲ್ಲುಗಳನ್ನು ಗುರುತಿಗೆ ಹಾಕುವ ಕೆಲಸ ಮಾಡಿದರು.
ಗ್ರಾಮಸ್ತರಾದ ರಾಮಚಂದ್ರ, ರಾಜಣ್ಣ, ಶ್ರೀನಿವಾಸ್ ಸೇರಿದಂತೆ ಹಲವರು ಮಾತನಾಡಿ ನಮ್ಮ ಗ್ರಾಮದಲ್ಲಿ ಸರ್ಕಾರಿ ಗೋಮಾಳದಲ್ಲಿದ್ದ ಕೆರೆಯನ್ನು ಬಾಜುದಾರರು ಒತ್ತುವರಿ ಮಾಡಿಕೊಂಡು,
ತಂತಿ ಬೇಲಿ ಹಾಕಿಕೊಳ್ಳುತ್ತಿ ದ್ದರು ಅದನ್ನು ತಡೆದು ಕೆರೆಯನ್ನು ಸರ್ವೆ ನಡೆಸಿ ರಕ್ಷಣೆ ಮಾಡುವಂತೆ ತಾಲೂಕು ಆಡಳಿತಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ದೂರು ಸಲ್ಲಿಸಲಾಗಿತ್ತು ಸರ್ವೆ ಅಧಿಕಾರಿಗಳು ಬಂದು ಸರ್ವೆ ನಡೆಸಿ ಒತ್ತುವರಿಯಾಗಿರುವ ಸರ್ಕಾರಿ ಕೆರೆಯ ಜಾಗದ ಗಡಿಯನ್ನು ಗುರುತಿಸಿ ಕೊಟ್ಟಿದ್ದಾರೆ ಇನ್ನು ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಯಲ್ಲಿ ಕೆರೆಯನ್ನು ಗ್ರಾಮ ಪಂಚಾಯತಿಯಿಂದ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೇವೆ ಗ್ರಾಮ ಪಂಚಾಯತಿ ಅಧಿಕಾರಗಳು ಇದಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.ಈ ಸಂದಭರ್ದಲ್ಲಿ ತೊಪ್ಪಗಾನಳ್ಳಿ ಗ್ರಾಮದ ರಾಮಚಂದ್ರ ದೊಡ್ಡರಾಜು, ನಾಗರಾಜು, ವೆಂಕಟರಾಜು, ರಾಜಣ್ಣ, ರಾಜು ಪುಟ್ಟರಾಮು, ಶ್ರೀನಿವಾಸ್, ಸುನಿಲ್, ಗೋವಿಂದಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.