ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಟ್ರೇಲರ್ ಮೂಲಕ ಭಾರತ ಮಾತ್ರವಲ್ಲದೆ, ಜಗತ್ತಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಫಿಕ್ಷನ್ ಕಥೆಯ ಬಗೆಗಿನ ಕುತೂಹಲ ಪ್ರಭಾಸ್ ಅಭಿಮಾನಿಗಳಲ್ಲಿಯೂ ಹೆಚ್ಚಾಗಿದೆ. ಈ ನಡುವೆ ಇದೇ ಚಿತ್ರದ ಬಿಡುಗಡೆ ಬಗ್ಗೆ ಗಾಸಿಪ್ ಹರಿದಾಡ್ತಿದೆ. ಜನವರಿ ೯ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಿ ರಾಜಾಸಾಬ್ ಸಿನಿಮಾ ತೆರೆಗೆ ಬರುವುದು ಖಚಿತ ಎಂದು ಚಿತ್ರತAಡ ಹೇಳಿದೆ. ಯಾವುದೇ ವಿಳಂಬವಿಲ್ಲದೆ, ಅತ್ಯುನ್ನತ ತಾಂತ್ರಿಕ ಗುಣಮಟ್ಟವನ್ನು ಕಾಪಾಡಿಕೊಂಡು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿವೆ. `ಚಿತ್ರವು ಅತ್ಯಂತ ಅದ್ದೂರಿ ರೂಪದಲ್ಲಿ ಪ್ರೇಕ್ಷಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ವಿಭಾಗವು ಪರಿಪೂರ್ಣ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
`ಈ ‘ಲಾರ್ಜರ್ ದ್ಯಾನ್ ಲೈಫ್’ ರೀತಿಯಲ್ಲಿ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಪ್ರಪಂಚದಾದ್ಯAತದ ಪ್ರೇಕ್ಷಕರಿಗೆ ಒಂದು ಅತ್ಯುತ್ತಮ ಥಿಯೇಟರ್ ಅನುಭವ ನೀಡಲೆಂದೇ ಈ ಸಿನಿಮಾ
ನಿರ್ಮಾಣಮಾಡಲಾಗಿದೆ ಎಂದಿದೆ.ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ.



