ಚಿಕ್ಕಬಳ್ಳಾಪುರ: ಬಹಳ ನಿರೀಕ್ಷೆಗಳ ಮಧ್ಯೆ ಅಚ್ಚರಿ ಗೆಲುವು ಸಾದಿಸಿ ಶಾಸಕರಾದ ಪ್ರದೀಪ್ ಈಶ್ವರ್ ತಮ್ಮ ಅವಧಿಯಲ್ಲಿ ಅಧಿಕಾರಿಗಳು ಹೇಗಿರಬೇಕು ಸಾರ್ವಜನಿಕರಿಗೆ ಸೌಕರ್ಯಗಳ ತಲುಪಿಸುವ ಜವಾಬ್ದಾರಿ ಹೇಗೆ ನಿರ್ವಹಿಸಬೇಕು,ಪೊಲೀಸರು ನಾಗರೀಕರೊಟ್ಟಿಗೆ ನಡೆದುಕೊಳ್ಳ ಬೇಕಾದ ಕೆಲವು ಬದಲಾವಣೆಗೆ ತಮ್ಮದೆ ಆದ ಸ್ಟೈಲಲ್ಲಿ ಆಡಳಿತ ನಡೆಸಲು ಮುಂದಾಗಿದ್ದಾರೆ ಅಧಿಕಾರಿಗಳ ಮೊದಲ ಸಭೆಯಲ್ಲೆ ನಾನು ಶಾಸಕನಾಗಿ ಏನಾದ್ರೂ ತಪ್ಪು ಮಾಡಿದ್ರೆ ಪ್ರಶ್ನೆ ಮಾಡಿ ವಿಮರ್ಷಿಸಿ ತಿದ್ದಿ ಬುದ್ದಿ ಹೇಳಲು ನಿಮಗೆ ಅಧಿಕಾರವಿದೆ ಎಂದು ನೇರವಾಗಿಯೇ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನೂತನ ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳ ಮೊದಲ ಸಭೆ ನಡೆಯಿತು.ಈ ವೇಳೆ ನಗರದಲ್ಲಿ ಪ್ಲೆಕ್ಸ್ ಸಂಸ್ಕೃತಿಕೆ ತಿಲಾಂಜಲಿ ಹಾಡಿ ನನ್ನ ಪೋಟೋ ಇದ್ರೂ ತೆಗೆದಾಕಿ ನಗರಸಭೆ ನಿಗದಿಗೊಳಿಸಿರುವ 16 ಬೋರ್ಡಗಳಲ್ಲಿ ಮಾತ್ರ ಟ್ಯಾಕ್ಸ್ ಕಟ್ಟಿ ಜಾಹಿರಾತು ಹಾಕಿಕೊಳ್ಳಿ,
ಪೊಲೀಸರು ಪಾರದರ್ಶ ಕವಾಗಿ ಕೆಲಸಮಾಡಿ 99% ಎಫ್ ಐ ಅರ್ ಹಾಕೋದು ನಿಲ್ಲಿಸಿ ಸ್ಟೇಷನ್ ಗೆ ಬಂದ ಎಲ್ಲರ ಮೇಲೂ ಕೇಸ್ ಹಾಕಬೇಡಿ,ಕ್ಷೇತ್ರದಲ್ಲಿ 22 ಸಾವಿರ ನಿವೇಶನ ಹಂಚಿಕೆ ಬೋಗಸ್ ಆಗಿದೆ. ಈ ಬಗ್ಗೆ ವಿಧಾನಸೌದ ಶೆಷನ್ ಲ್ಲಿ ರೈಸ್ ಮಾಡುತ್ತೇನೆ ಸಚಿವರ ಗಮನ ಸೆಳೆಯುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೆಗೂ ದೂರು ಸಲ್ಲಿಸಿ ತನಿಖೆ ಮಾಡಿಸುತ್ತೇನೆ ಇದರಲ್ಲಿ ಅಧಿಕಾರಿಗಳು ಬಾಗಿಯಾಗಿದ್ರು ಬಿಡೊಲ್ಲ ಮಾಜಿ ಸಚಿವರನ್ನೂ ಬಿಡೊಲ್ಲ,
ಅರೂರು ಬಳಿ ನಿರ್ಮಾಣ ಆಗಿರೋ ನಂದಿ ಮೆಡಿಕಲ್ ಕಾಲೇಜು ಇನ್ನೂ ಉದ್ಘಾಟನೆ ಆಗಿಲ್ಲ ಕಾಮಗಾರಿ ಪ್ರಗತಿಯಲ್ಲಿದೆ ಮೂರನೆ ಪ್ಲೋರ್ ಕಾಮಗಾರಿ ಇನ್ನೂ ನಡೀತಿದೆ ಇನ್ನೂ 400 ಕೋಟಿ ಅನುಧಾನ ಬಿಡುಗಡೆ ಆಗಬೇಕಿದೆ ಕಾಮಗಾರಿ ಮುಕ್ತಾಯಕ್ಕೆಇನ್ನೂ ಎರಡು ತಿಂಗಳಾಗ ಬಹುದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಕರೆಸಿ ಉದ್ಘಾಟನೆ ಮಾಡುಸುತ್ತೇವೆ.
ಎಂ ಜಿ ರಸ್ತೆ ಅಗಲೀಕರಣ ವಿಚಾರ ರಾಷ್ಟ್ರೀಯ ಹೆದ್ದಾರಿ ಅಥಾರಿಟಿಹೆಸೇರಿದ್ದ ಅದರಲ್ಲಿ ಶಾಸಕರ ಕೈವಾಡ ಇರೋಲ್ಲ ಆದ್ರೂ ಅವರಿಗೆ ನಾನು 50 ಅಡಿಯಿಂದ 40 ಅಡಿಗೆ ಇಳಿಸಲು ಒತ್ತಾಯಿಸುತ್ತೇನೆ.ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಗಂಗಮ್ಮಗುಡಿ ರಸ್ತೆ ,ಬಜಾರ್ ರಸ್ತೆ ವಿಸ್ತರಣೆಗೆ ಯಾವುದೆ ಕಾರಣಕ್ಕೂ ನಾನು ಅನುಮತಿ ನೀಡೊಲ್ಲ,
ಸಾವಿರಾರು ಜನ ಜೀವನ ಕಟ್ಟಿಕೊಂಡಿರೋ ರಸ್ತೆಗಳಿಗೆ ಕೈ ಹಾಕೊಲ್ಲ ಇದು ನಾನು ಆ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಳ್ತಿರೋ ಜನರಿಗೆ ಕೊಡೋ ಬರವಸೆ. ಕ್ಷೇತ್ರದಲ್ಲಿ ಕೆಲವು ಅಧಿಕಾರಿಗಳು ಇಲ್ಲೆ ಥಿಕಾಣೆ ಹೂಡಿದ್ದಾರೆಂಬ ಆರೋಪ ಇದೆ ಅವರ ವರ್ಗಾವಣೆಗೂ ಕ್ರಮ ತೆಗೆದುಕೊಳ್ಳುತ್ತೇನೆ. ಮುಖ್ಯವಾಗಿ ಕೆಲವು ಟೀಚರ್ಸ್ ಸಂಘ, ರಾಜಕೀಯ ಹೆಸರಲ್ಲಿ ಪಾಠ ಪ್ರವಚನಗಳನ್ನ ಮರೆತಿದ್ದಾರೆ ಇನ್ಮುಂದೆ ಅದಕ್ಕೆ ಅವಕಾಶ ನೀಡೊಲ್ಲ ಎಂದು ಪ್ರದೀಪ್ ಈಶ್ವರ್ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಮಂಚೇನಹಳ್ಳಿ ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್,ಬಿಇಒ ಶೋಭ, ಸರ್ಕಲ್ ಇನ್ಸಪೆಕ್ಟರ್ ರಾಜು,ನರಸಭೆ ಆಯುಕ್ತೆ ಪಂಪಶ್ರಿ,ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ರು.
Leave a Review