ಬೆಂಗಳೂರು; ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಆಂದ್ರ ಪ್ರದೇಶದ ತೆಲುಗು ದ ಸೂರ್ಯ ದಿನಪತ್ರಿಕೆಯ ಅಂಕಣಕಾರ್ತಿ ವಿದ್ಯಾವಾರಿದಿ ಜೋತಿಷ್ಯ ಶಾಸ್ತ್ರದಲ್ಲಿ ಡಾ.ಪದ್ಮ ಶೇಖರ್ ಚಿನ್ನದ ಪದಕ ಗಳಿಸಿದ್ದಾರೆ.
ಜೋತಿಷ್ಯ ಹಾಗೂ ವಾಸ್ತು ಶಾಸ್ತ್ರದಲ್ಲಿ ಆಂದ್ರ ಪ್ರದೇಶದ ಹೈದರಾಬಾದ್ನ ತೆಲುಗು ವಿಶ್ವವಿದ್ಯಾಲಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.ಅದೇ ರೀತಿ ಕರ್ನಾಟಕದ ಸಿದ್ದೇಶ್ವರ ದೇವರು ಮತ್ತು ಶಿವಾನಂದ್ ಸಂಸ್ಕೃತ ವಿಷಯದಲ್ಲಿ ಪಿ. ಎಚ್. ಡಿ ಪದವಿಯನ್ನು ಸ್ವೀಕರಿಸಿದರು.ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯಾದ ನಾಗರತ್ನ, ಮುಖ್ಯ ಶಿಕ್ಷಕಿಯಾದ ಆನಂದ ಕುಮಾರಿ ಸಿದ್ದೇಶ್ವರ ದೇವರನ್ನು ಸನ್ಮಾನಿಸಿದರು.