ಬೆಂಗಳೂರು: ಇದುವರೆಗೂ ರಾಜ್ಯಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ಕ್ರಾಂತಿಯಾಗುತ್ತದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕುತ್ತಿದ್ದ ನಾಯಕರು ಇದೀಗ ಕ್ರಾಂತಿಯ ಕಿಡಿ ಹೊತ್ತಿಕೊಂಡಿದೆ. ಮುಖ್ಯಮಂತ್ರಿ ಬದಲಾವಣೆಗಾಗಿ ಒತ್ತಡ ಹೆಚ್ಚಾಗುವ ಹಾಗೂ ಹೊರ ರಾಜಕೀಯ ಆರಂಭವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದುವರೆಗೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಧಾರ್ಮಿಕ ಕ್ಷೇತ್ರಗಳ ಸುತ್ತಾಟ ನಡೆಸಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ಮುಖ್ಯಮಂತ್ರಿ ಪದವಿಗಾಗಿ ಹಕ್ಕು ಮಂಡಿಸುವ ಲಕ್ಷಣಗಳು ಸ್ಪಷ್ಟವಾಗಿಕಾಣುತ್ತಿವೆ.
ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಬಹುತೇಕರುತಲಿತ ನಾಯಕ್ರ ಹೆಸರಿನಲ್ಲಿ ಏರ್ಪಡಿಸುತ್ತಿದ್ದ ಔತಣಕೂಟ ನಿನ್ನೆರಾತ್ರಿಯೂ ನಡೆದಿದೆ. ತೆರೆಮರೆಯಲ್ಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವರಿಷ್ಠರ ಮುಂದೆ ನಾಯಕತ್ವಕ್ಕಾಗಿ ಒತ್ತಾಯ ಮಾಡುತ್ತಿದ್ದರು. ಅಂದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಆಪ್ತರೆನ್ನಲಾದವರು ನಾಯಕತ್ವ ಬದಲಾವಣೆಗಾಗಿ ವರಿಷ್ಠರನ್ನು ಒತ್ತಾಯಿಸುವ ಹಂತಕ್ಕೆ ಹೋಗಿದ್ದಾರೆ. ನಿನ್ನೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಲವು ಶಾಸಕರುದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಮನವಿ ಮಾಡುವ ಬಗ್ಗೆ ಮುಂದಾಗಿದ್ದಾರೆ. ಇಂದು ಸಹ ಹಲವು ಶಾಸಕರುದೆಹಲಿಗೆ ತೆರಳಲು ಮುಂದಾಗಿದ್ದಾರೆ.
ನಿನ್ನೆರಾತ್ರಿ ಕೆಲ ಸಚಿವರು, ಶಾಸಕರು, ದಲಿತ ನಾಯಕರ ಹೆಸರಿನಲ್ಲಿ ಔತಣಕೂಟ ನಡೆಸಿದ್ದಾರೆ.ಮುಖ್ಯಮಂತ್ರಿ ಡಿ.ಕೆಶಿವಕುಮಾರ್ ಪರ ಹೇಳಿಕೆ ನೀಡಲು ಮತ್ತು ಅವರಿಗೆ ಮುಖ್ಯಮಂತ್ರಿ ಪದವಿ ನೀಡಿ ಎಂದು ಹೇಳಲು ಮುಂದಾಗಿದ್ದಾರೆ. ನಿನ್ನೆ ದೆಹಲಿಗೆ ತೆರಳಿದ್ದ ಸಚಿವ ಚಲುವ ರಾಯಸ್ವಾಮಿ ಅವರನ್ನು ಇಂದು ಖುದ್ದಾಗಿ ಮುಖ್ಯಮಂತ್ರಿಯವರೇ ದೂರವಾಣಿ ಮೂಲಕ ಮಾತನಾಡಿ, ದೆಹಲಿಗೆ ತೆರಳಿದ್ದ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೆತಾವುದೆಹಲಿಗೆ ತೆರಳಿದ್ದ ವಿಚಾರವನ್ನು ಚಲುವರಾಯ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ರಾಮನಗರದಲ್ಲಿಂದು ಮಾತನಾಡಿ, ತಾವು ರಾಕೀಯದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಯಾವುದೇ ವಿಷಯದ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುತ್ತದೆ. ಅದೇ ಅಂತಿಮ ಎಂದು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಕೆಲವು ಶಾಸಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡರೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ನವೆಂಬರ್ನಲ್ಲಿ ಕ್ರಾಂತಿಯಾಗುತ್ತದೆ ಎಂದು ನೀಡುತ್ತಿದ್ದ ಹೇಳಿಕೆಗಳಿಗೆ ಇಂದು ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಇಂಬು ಸಿಕ್ಕಂತಾಗಿದೆ.



