ಬಂಗಾರಪೇಟೆ: ವಿದ್ಯರ್ಥಿಗಳು ಕ್ರೀಡೆಗಳನ್ನು ಕ್ರೀಡಾಮನೋಭಾವದಿಂದ ನೋಡಬೇಕು, ಕ್ರೀಡೆಗಳಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ರ್ಕಾರಿ ಪದವಿಪರ್ವ ಕಾಲೇಜಿನ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಮಾನ್ಯತಾ ಪದವಿ ಪರ್ವ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಾಲೂಕು ಪದವಿಪರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯರ್ಥಿಗಳು ಶಾಲಾ ಹಂತದಿಂದ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜಯಶೀಲರಾಗುವ ಮೂಲಕ ತಾಲೂಕಿಗೆ ಜಿಲ್ಲೆಗೆ ಹೆಸರು ತರಬೇಕೆಂದು ಆಶಿಸಿದರು.
ವಿಧ್ಯರ್ಥಿಗಳಿಗೆ ವ್ಯಾಯಾಮ ಇಲ್ಲದಂತಾಗಿದೆ: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ವ್ಯಾಯಾಮ ಹಾಗೂ ಚಟುವಟಿಕೆಗಳು ಇಲ್ಲದಂತಾಗಿದೆ. ಮಕ್ಕಳಿಗೆ ದೈಹಿಕ ಚಟುವಟಿಕೆ ಬಗ್ಗೆ ಪೋಷಕರು ಗಮನ ಹರಿಸಬೇಕಾಗಿದೆ, ಮಕ್ಕಳಿಗೆ ಮೊಬೈಲ್ ಮತ್ತು ಟಿವಿ ವ್ಯಾಮೋಹ ಹೆಚ್ಚಾಗಿದ್ದು, ಆಟ ಪಾಠ ಓದಿನ ಕಡೆ ಗಮನ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಮಕ್ಕಳನ್ನು ಆಟವಾಡಲು ಬಿಡಬೇಕು: ಗ್ರಾಮೀಣ ಮಕ್ಕಳು ಮಣ್ಣಿನಲ್ಲಿ ಕಲ್ಲುಗಳಲ್ಲಿ ಆಟವಾಡುತ್ತಾರೆ, ಆದರೆ ಪಟ್ಟಣದ ಮಕ್ಕಳು ಆಟವಾಡಲು ಪೋಷಕರು ಬಿಡುವುದಿಲ್ಲ, ಆಟ ಆಡುವುದರಿಂದ ಆರೋಗ್ಯ ಅಭಿವೃದ್ಧಿಯಾಗುತ್ತದೆ, ಮಕ್ಕಳಿಗೆ ಜಿಂಕ್ ಫುಡ್, ಮ್ಯಾಗಿ, ಬೇಕರಿ ತಿಂಡಿ ತಿನಿಸುಗಳನ್ನು ಕೊಡುವುದರಿಂದ ವಿದ್ಯರ್ಥಿಗಳಿಗೆ ಆರೋಗ್ಯ ಕುಂಠಿತವಾಗುತ್ತದೆ, ವ್ಯಾಯಾಮ ಇಲ್ಲದಂತಾಗಿದೆ. ಸೂಕ್ಷ್ಮತೆ ಹೆಚ್ಚಾಗಿದೆ ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಬೇಕೆಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ತಹಸೀಲ್ದಾರ್ ಕೆ.ಎನ್.ಸುಜಾತ, ಪ್ರಾಂಶುಪಾಲರ ಸಂಘದ ಕರ್ಯರ್ಶಿ ಎಚ್.ಸುಬ್ರಹ್ಮಣ್ಯಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೆ.ಶಶಿಕಲಾ, ಪುರಸಭೆ ಅಧ್ಯಕ್ಷ ಗೋವಿಂದ, ರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್.ರವಿ, ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಚೌಡರೆಡ್ಡಿ, ಪ್ರಾಂಶುಪಾಲರು ನಾಗಾನಂದ ಕೆಂಪರಾಜು, ದೈಹಿಕ ಶಿಕ್ಷಕಿ ಪ್ರೇಮಕುಮಾರಿ, ಸೇರಿದಂತೆ ಇನ್ನು ಮೊದಲಾದವರು ಹಾಜರಿದ್ದರು.