ಆಕೆ ಭಾರತ ತಂಡಕ್ಕೆ ಮರಳಿದ್ದು ೨೦೧೮ರಲ್ಲಿ ಅಲ್ಲಿಯವರೆಗೂ ಅತ್ಯಂತ ಸರಳವಾಗಿ ನಡೆದು ಬಂದ ಆಕೆಯ ಪ್ರಯಾಣ ಇದೀಗ ಹತ್ತು ಹಲವು ಏರಿಳಿತಗಳನ್ನು ಹೊಂದಿತ್ತು. ೨೦೨೨ ರಲ್ಲಿ ಆಕೆ ವರ್ಲ್್ಡ ಕಪ್ ನ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.ನಿತ್ಯ ಹಸನ್ಮುಖಿಯಾದ ಆಕೆ ಉದ್ವೇಗದ ತೊಂದರೆಗೆ ಈಡಾಗಿದ್ದಳು. ಮಾನಸಿಕ ಉದ್ವೇಗದ ಜೊತೆಯಲ್ಲಿ ಹೋರಾಡುತ್ತಲೇ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದ ಆಕೆಯ ಮೇಲೆ ನಿರೀಕ್ಷೆಯ ಭಾರ ಹೆಚ್ಚುತ್ತಲೆ ಇತ್ತು. ನಿದ್ದೆ ಇಲ್ಲದ ರಾತ್ರಿಗಳಲ್ಲಿ ಆಕೆ ಸುರಿಸಿದ ಕಣ್ಣೀರಿನಿಂದ ದಿಂಬು ತೋಯುತ್ತಿತ್ತು, ಆದರೂ ಆಕೆ ತನ್ನ ನಿರಂತರ ಛಲದಿಂದ ಮುಂದೆ ಬಂದಳು.
ಪ್ರಸ್ತುತ ನಡೆದ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಕೂಡ ಆರಂಭದಲ್ಲಿ ಆಕೆ ತನ್ನ ಉತ್ತಮವಾದ ಆಟವನ್ನು ತೋರುವಲ್ಲಿ ವಿಫಲಳಾದ ಕಾರಣ ಆಕೆಯನ್ನು ಮತ್ತೆ ತಂಡದಿAದ ಕೈ ಬಿಡಲಾಯಿತು, ಆದರೆ ಆಕೆ ತನ್ನ ನಂಬಿಕೆಯನ್ನು ಕೈ ಬಿಡಲಿಲ್ಲ. ಚಾಂಪಿಯನ್ಗಳು ತಮ್ಮ ಸೋಲುಗಳಿಂದ ಈ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ ಬದಲಾಗಿ ತಮ್ಮ ನಿರಂತರ ಹೋರಾಟದಿಂದ ಫೀನಿಕ್ಸ್ ನಂತೆ ಮತ್ತೆ ಉದಯಿಸುತ್ತಾರೆ. ಹಾಗೆ ಭಾರತ ದೇಶದ ಮಹಿಳಾ ಕ್ರಿಕೆಟ್ ತಂಡಕ್ಕೆ ಬೇಕಾದ ಅತ್ಯವಶ್ಯಕ ಸಮಯದಲ್ಲಿ ಆಕೆ ಉದಯಿಸಿ ಬಂದಳು …. ಬೃಹತ್ ರನ್ಗಳ ಮೊತ್ತವನ್ನು ಬೆನ್ನಟ್ಟಿ ನಡೆದಳು. ತನ್ನ ವೈಯುಕ್ತಿಕ ಬೃಹತ್ ಮೊತ್ತವನ್ನು ಸೇರಿಸುವ ಮೂಲಕ ತಂಡದ ಬೆನ್ನೆಲುಬಾಗಿ, ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದಳು. ತನ್ನ ಅಸ್ಮಿತೆಯನ್ನು ಜಗತ್ತಿಗೆ ತೋರಿದಳು…. ಆಕೆಯೇ ಜೆಮೀಮಾ ರೋಡ್ರಿಗ್ಸ್.
ನಂಬಿಕೆ, ಧೈರ್ಯ ಮತ್ತು ಹೃದಯದಲ್ಲಿ ಆರದ ಉತ್ಸಾಹದ ಬೆಂಕಿಯನ್ನು ಹೊತ್ತು ಆಕೆ ತನ್ನ ಜೀವನದ ಬಹುದೊಡ್ಡ ಇನ್ನಿಂಗ್ಸ್ ನ್ನು ಆಸ್ಟೆçÃಲಿಯಾ ವಿರುದ್ಧದ ಸೆಮಿಫೈನಲ್ ನಲ್ಲಿ ಕಟ್ಟಿದಳು. ತನ್ನ ಮತ್ತು ತನ್ನ ಕುಟುಂಬದ ವಿರುದ್ಧದ ಎಲ್ಲ ಟೀಕೆಗಳ ಬೌಲಿಂಗ್ ಪ್ರಹಾರಗಳಿಗೆ ತನ್ನ ನಿಶ್ಚಲ ನಿಲುವಿನ ಮನಸ್ಥಿತಿಯ ಮೂಲಕ ಬ್ಯಾಟ್ ನಿಂದಲೇ ಉತ್ತರಿಸಿದಳು. ಜಗತ್ತು ಎಂದೂ ಮರೆಯಲಾಗದ ಅತ್ಯದ್ಭುತವಾದ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ದಾಖಲಾದ ಆ ಪಂದ್ಯ ದಲ್ಲಿ ಆಕೆಯ ಅದ್ಭುತವಾದ ಪ್ರದರ್ಶನ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಅಂತಿಮ ಹಣಾಹಣಿಯತ್ತ ಕೊಂಡೊಯ್ಯಿತು, ವಿಜಯದ ಕಿರೀಟವನ್ನು ತೊಡಿಸಿತು ಎಂದರೆ ತಪ್ಪಿಲ್ಲ.
ಹಾಗೆ ಇಡೀ ಜಗತ್ತನ್ನು ವಿಸ್ಮತಗೊಳಿಸಿ ಅತ್ಯಂತ ಸರಳವಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಂಡ ಜೆಮೀಮಾಳನ್ನು ಭಾರತದ ಮಾಜಿ ಕ್ರಿಕೆಟ್ ಕಪ್ತಾನ ಎಮ್. ಎಸ್. ಧೋನಿ ನಿಜವಾದ ಆಟಗಾರರ ಲಕ್ಷಣ ಆಕೆಯಲ್ಲಿದೆ. ತನ್ನ ಶತಕವನ್ನು ಸಂಭ್ರಮಿಸುವುದಕ್ಕಿAತ ಹೆಚ್ಚಾಗಿ ಆಕೆ ತನ್ನ ತಂಡದ ಗೆಲುವಿಗಾಗಿ ಪ್ರಯತ್ನಿಸಿದಳು ಎಂಬುದರಲಿದೆ. ಇದು ಆಕೆಯ ಹಿರಿಮೆ ಎಂದೂ ಇದುವೇ ಆಟದ ಮಹಿಮೆ” ಎಂದು ಹೊಗಳಿದರು. ದೇವರು ಬರೆದ ಹಣೆಯ ಬರಹ ಎಂದು ನಾವು ಇದನ್ನು ಹೇಳುವುದಾದರೆ ನಮ್ಮ ಬದುಕಿನ ಪ್ರತಿ ಸೋಲುಗಳು ಕೂಡ ಮುಂದಿನ ಗೆಲುವುಗಳನ್ನಾಗಿ ಪರಿವರ್ತಿಸುವ ಸೋಪಾನಗಳು ಅಲ್ಲವೇ. ಉತ್ತರ ಪ್ರದೇಶದ ಆಗ್ರಾದ ಬಳಿಯ ಅವಧಪುರಿ ಎಂಬ ಹಳ್ಳಿಯ ಬಾಲಕಿ ತನ್ನ ಅಣ್ಣನ ಪ್ರೇರಣೆಯಿಂದ
ಕ್ರಿಕೆಟ್ ಲೋಕಕ್ಕೆ ಕಾಲಿಟ್ಟು ಅಲ್ಲಿ ಯಶಸ್ವಿಯಾಗಿ ಇದೀಗ ವರ್ಲ್್ಡ ಕಪ್ ನ ಟ್ರೋಫಿ ಗೆ ಮುತ್ತಿಟ್ಟಿದ್ದಾಳೆ.
ಈಗಾಗಲೇ ತನ್ನ ರಾಜ್ಯದ ಕ್ರಿಕೆಟ್ ನಲ್ಲಿ ಹೆಚ್ಚಿನ ಸಾಧನೆ ಮಾಡಿದ ಅರ್ಜುನ ಪ್ರಶಸ್ತಿ ಪುರಸ್ಕöÈತ ದೀಪ್ತಿ ಶರ್ಮಳೇ ಈ ಬಾಲೆ. ಆಕೆಯ ಹಳ್ಳಿಯ ರಸ್ತೆಗೆ ಆಕೆಯ ಹೆಸರೇ ಲ್ಯಾಂಡ್ ಮಾರ್ಕ್ ಎನ್ನುವಂತೆ “ಅರ್ಜುನ ಅವಾರ್ಡಿ ಕ್ರಿಕೆಟರ್ ದೀಪ್ತಿ ಶರ್ಮ ಮಾರ್ಗ” ಎಂಬ ರಸ್ತೆ ಇದೆ ಎಂಬುದು ಆಕೆಯ ಸಾಧನೆಗೆ ಸಿಕ್ಕ ಅರ್ಹ ಪುರಸ್ಕಾರ. ಮಧ್ಯಮ ವೇಗದ ಬೌಲರ್ ಆಗಿದ್ದ ಅಣ್ಣ ಸುಮಿತ್ ಶರ್ಮಾ ತನ್ನ ತಂಗಿಯ ಸಾಧನೆಗೆ ಬೆಂಬಲವಾಗಿ ನಿಲ್ಲಲು ತನ್ನ ನೌಕರಿಯನ್ನು ಬಿಟ್ಟು ಆಕೆಯ ತರಬೇತಿಗಾಗಿ ನಿಂತ. ಅಣ್ಣನ ತ್ಯಾಗ ಮತ್ತು ಶ್ರಮಕ್ಕೆ ಉತ್ತರವಾಗಿ ತಂಗಿ ದೀಪ್ತಿ ಇದೀಗ ಫೈನಲ್ ಪಂದ್ಯಾವಳಿಯಲ್ಲಿ ೫೮ ರನ್ ಐದು ವಿಕೆಟ್ ಮತ್ತು ೧ ರನ್ ಔಟ್ ಪಡೆದಿದ್ದು ಮಾತ್ರವಲ್ಲದೆ ವಿಶ್ವಕಪ್ ಸೀರೀಸ್ ನ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಅಣ್ಣ ಸುಮಂತ್ ಶರ್ಮ ಮತ್ತು ಆತನ ಸ್ನೇಹಿತರ ಜೊತೆ ಕ್ರಿಕೆಟ್ ಅಭ್ಯಾಸಕ್ಕೆ ತೆರಳುತ್ತಿದ್ದ ದೀಪ್ತಿ ಅವರಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಅದೊಂದು ಬಾರಿ ಈಕೆ ಅವರಿಗೆ ಕ್ಷೇತ್ರರಕ್ಷಕಿಯಾಗಿ ೫೦ ಮೀಟರ್ ದೂರದಿಂದ ಎಸೆದ ಚೆಂಡೊAದು ನೇರವಾಗಿ ಸ್ಟಂಪ್?ಗೆ ಬಂದಪ್ಪಳಿಸಿದ್ದುದನ್ನು ನೋಡಿದ ಹೇಮಲತಾ ಅವರಿಗೆ ಅಚ್ಚರಿ.
ಹುಡುಗಿಯ ಕೌಶಲ್ಯವನ್ನು ಆರಂಭದಲ್ಲೇ ಗುರುತಿಸಿದ ಹೇಮಲತ ಅವರು ದೀಪ್ತಿಯನ್ನು ತನ್ನ ಗರಡಿಗೆ ಸೇರಿಸಿಕೊಳ್ಳುತ್ತಾರೆ. ದೀಪ್ತಿ ಶರ್ಮಾಳ ಕ್ರಿಕೆಟ್ ಆಸಕ್ತಿಗೆ ಬೆಂಬಲವಾಗಿ ನಿಲ್ಲುವಂತೆ ಅಣ್ಣ ಸುಮಿತ್ ಶರ್ಮಾಗೆ ಸೂಚಿಸುತ್ತಾರೆ. ತನ್ನ ಕನಸನ್ನು ಬದಿಗೊತ್ತಿದ ಅಣ್ಣ ಉದ್ಯೋಗವನ್ನು ತ್ಯಜಿಸಿ ತಂಗಿಯ ಕ್ರಿಕೆಟ್ ಬದುಕಿಗೆ ಬೆನ್ನೆಲುಬಾಗಿ ನಿಂತು ಬಿಡುತ್ತಾನೆ. ಆಕೆಯ ಪಾಲಿಗೆ ಅಣ್ಣನೇ ಮೊದಲ ಕ್ರಿಕೆಟ್ ಗುರು. ೧೩ನೇ ವಯಸ್ಸಿಗೆ ಉತ್ತರ ಪ್ರದೇಶ ಅಂಡರ್-೧೯ ತಂಡ.. ೧೭ನೇ ವಯಸ್ಸಿಗೆ ಭಾರತ ತಂಡಕ್ಕೆ ಪದಾರ್ಪಣೆ. ಅದೇ ಹುಡುಗಿ ಈಗ ಭಾರತದ ವಿಶ್ವಕಪ್ ಗೆಲುವಿನ ವಿಜಯಶಿಲ್ಪಿ. ಹೌದು.. ಸಹೋದರನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ ದೇಶಕ್ಕೆ ವಿಶ್ವಕಪ್ ತಂದು ಕೊಡುವಲ್ಲಿ ಅಗ್ರ ಪಾತ್ರವನ್ನು ವಹಿಸಿದ್ದಾಳೆ.
೨೦೧೨ರ ಮಹಿಳಾ ಟಿ-೨೦ ವಿಶ್ವಕಪ್ ಪಂದ್ಯಾವಳಿಗೆ ಮುನ್ನ ಅಂದಿನ ಮಹಿಳಾ ತಂಡದ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ “ವಿಮೆನ್ ಇನ್ ಬ್ಲೂ÷್ಯ” ಖ್ಯಾತಿಯ ಮಿಥಾಲಿ ರಾಜ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಸುಮಾರು ೧೫ರಿಂದ ೨೦ ನಿಮಿಷಗಳವರೆಗೂ ಕಾದರೂ ಕೂಡ ಒಬ್ಬ ಪತ್ರಕರ್ತನೂ ಅಲ್ಲಿಗೆ ಬರಲಿಲ್ಲ. ಹತಾಶರಾದರೂ ಕೂಡ ಅದನ್ನು ತೋರಿಸಿಕೊಳ್ಳದೆ ಮಿಥಾಲಿ ಅಲ್ಲಿಂದ ಹೊರಟು ಹೋದರು, ಆದರೆ ಅದೇ ದಿನ ಸಂಜೆ ಭಾರತದ ಪುರುಷರ ಕ್ರಿಕೆಟ್ ಟೀಮ್ ನ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಕರೆದಿದ್ದ ವರ್ಲ್್ಡ ಕಪ್ ನ ಪತ್ರಿಕಾಗೋಷ್ಠಿಯಲ್ಲಿ ಇಡೀ ಕೋಣೆ ಪತ್ರಕರ್ತರಿಂದ ತುಂಬಿತ್ತು.
ಕ್ರಿಕೆಟ್ ಟೀಮ್ನ ಪುರುಷ ಕ್ರೀಡಾಳುಗಳಿಗೆ ದೊರೆಯುತ್ತಿದ್ದ ಗೌರವದಲ್ಲಿ ಬಿಡಿಗಾಸಿನಷ್ಟು ಕಿಮ್ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಇರಲಿಲ್ಲ. ಅವರಿಗೆ ಉತ್ತಮ ಆಟದ ಸಲಕರಣೆಗಳು, ಬಟ್ಟೆಗಳು ಕೂಡ ಕೇಳಿ ಪಡೆಯುವ ಸ್ಥಿತಿಯಿತ್ತು. ಇನ್ನು ಸಹಜವಾಗಿಯೇ ಮಹಿಳೆಯರಿಗೆ ನಿಸರ್ಗದ ಕರೆಗೆ ಓಗೊಡಲು ಕೂಡ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಕೇವಲ ೨೦ ವರ್ಷಗಳ ಹಿಂದೆ ಮಹಿಳೆಯರ ಕ್ರಿಕೆಟ್ ತಂಡವನ್ನು ಈ ರೀತಿ ನೋಡಿಯೂ ನೋಡದವರಂತೆ ನಿರ್ಲಕ್ಷಿಸಲಾಗುತ್ತಿತ್ತು. ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿ ಅವರ ತಂಡದ ಮಾಹಿತಿ ಇರುತ್ತಿತ್ತು. ಮೊದಲ ಮೂರು ಲೀಗ್ ಮ್ಯಾಚ್ ಗಳನ್ನು ಸೋತ ನಂತರ ಮತ್ತೊಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಕೇವಲ ಒಬ್ಬ ಪತ್ರಕರ್ತ ಮಾತ್ರ ಈ ಗೋಷ್ಠಿಗೆ ಹಾಜರಾಗಿದ್ದರು. ಇದೆಲ್ಲಕ್ಕಿಂತಲೂ ಹೆಚ್ಚು ಅವಮಾನಕರ ವಿಷಯವೆಂದರೆ ಅಂದಿನ ಪತ್ರಿಕಾಗೋಷ್ಠಿಯಲ್ಲಿ ಬಹಳಷ್ಟು ಜನ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಜನರು ಭಾವಿಸಲಿ ಎಂಬ ದೃಷ್ಟಿಯಿಂದ ಅತ್ತ ಇತ್ತ ನೋಡಿ ಮಾತನಾಡುವ ಹಾಗೆ ಮಿಥಾಲಿ ರಾಜ್ ಅವರಿಗೆ ಹೇಳಲಾಗುತ್ತಿತ್ತು. ಗೋಷ್ಠಿಯ ನಂತರ ಮಿಥಾಲಿ ಹೊರಬಂದು ಅತ್ಯಂತ ತಣ್ಣಗಿನ ಆದರೆ ಸ್ಪಷ್ಟವಾದ ದ್ವನಿಯಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಮಹಿಳಾ ಆಟಗಾರರ ಗೋಷ್ಠಿಗಳು ಕೂಡ ಪತ್ರಕರ್ತರಿಂದ ತುಂಬಿರುತ್ತವೆ. ಹಾಗೆ ಬದಲಾಯಿಸುವ ಶಕ್ತಿ ನಾವು ಮಹಿಳೆಯರಿಗೆ ಇದೆ ಎಂದು ಹೇಳಿದ್ದರು. ಆ ಮಾತಿಗೆ ಇದೀಗ ೧೩ ವರ್ಷಗಳೇ ಕಳೆದು ಹೋಗಿವೆ . ನಿಧಾನವಾಗಿಯಾದರೂ ಇದೀಗ ಹೆಣ್ಣು ಮಕ್ಕಳ ಕ್ರೀಡಾ ಸುದ್ದಿಗಳು ಪ್ರಕಟವಾಗುತ್ತಿವೆ.
ಮಹಿಳಾ ಕ್ರಿಕೆಟ್ ಆಟಗಾರರಿಗೆ ಸಮಾನ ವೇತನವನ್ನು ನೀಡಿದಾಗ ಅಂತರ್ಜಾಲದಲ್ಲಿ ಪ್ರಶ್ನೆಗಳ ಸರಮಾಲೆಗಳು, ಜೋಕುಗಳು ಹುಟ್ಟಿಕೊಂಡವು. ಅಂದು ಆ ಎಲ್ಲ ಅವಮಾನ ಅಸಹನೆಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡ ಹೆಣ್ಣು ಮಕ್ಕಳು ಇದೀಗ ವಿಶ್ವಕಪ್ ಟೋಪಿಯನ್ನು ಎತ್ತಿ ಹಿಡಿದಿದ್ದಾರೆ.
ಕ್ರಿಕೆಟ್ ಕೇವಲ ಪುರುಷರ ಕ್ರೀಡೆ, ಹೆಣ್ಣು ಮಕ್ಕಳು ಈ ರೀತಿ ಕ್ರಿಕೆಟ್ ಆಡಬಾರದು ಎಂಬ ಜನರ ಹೀಯಾಳಿಕೆಗೆ ಈ ಹೆಣ್ಣು ಮಕ್ಕಳು ಯಾವ ರೀತಿ ಕ್ರಿಕೆಟ್ ಆಡಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ . ಕೇವಲ ಕ್ರಿಕೆಟ್ನಲ್ಲಿ ಮಾತ್ರ ಹೆಣ್ಣು ಮಕ್ಕಳನ್ನು ಅವಹೇಳನ ಮಾಡುವುದಿಲ್ಲ… ಜಗತ್ತಿನ ಪುರುಷಸ್ವಾಮ್ಯದ ಎಲ್ಲ ರಂಗಗಳಲ್ಲಿ ಹೆಣ್ಣು ಮಕ್ಕಳು ಕಾಲಿಡುವ ಮುನ್ನ ಇಂತಹ ಟೀಕೆ, ಅವಮಾನ, ಗದಾ ಪ್ರಹಾರಗಳಿಗೆ ತಲೆಯೊಡ್ಡಲೇಬೇಕು. ಹೆಣ್ಣು ಮಕ್ಕಳಿಗೆ ಸಲ್ಲದ ಆಟವನ್ನು ಆಡಿ, ಗೆಲುವನ್ನು ಸಾಧಿಸುವ ಮೂಲಕ ಇದೀಗ ಭಾರತದ ಪುತ್ರಿಯರು ಇತಿಹಾಸವನ್ನು ಪುರ್ರಚಿಸಿದ್ದಾರೆ. ತಮ್ಮ ಅಮ್ಮಂದಿರ ಕನಸುಗಳನ್ನು ತಮ್ಮ ಊಟದ ಡಬ್ಬಿಗಳಲ್ಲಿ ಮುಚ್ಚಿಟ್ಟು ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಯಲ್ಲಿರಬೇಕು ಎಂಬ ಮಾತುಗಳನ್ನು ಹಿಂದಿಕ್ಕಿ ಜಗದ ಅಂಗಳದಲ್ಲಿ ಕಾಲಿಟ್ಟು ಯಶಸ್ವಿಯಾಗಿದ್ದಾರೆ.
ಈ ೧೩ ವರ್ಷಗಳಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಗಣಿತ ಬೆಳವಣಿಗೆಯನ್ನು ಕಂಡಿದೆ. ವುಮನ್ಸ್ ಪ್ರಿಮಿಯರ್ ಲೀಗ್ ಆರಂಭವಾಗಿ ಹೆಣ್ಣು ಮಕ್ಕಳಿಗೆ ಅವಕಾಶದ ಹೆಬ್ಬಾಗಿಲು ತೆರೆಯಿತು…. ಮಹಿಳಾ ಕ್ರಿಕೆಟ್ ಆಟಗಾರರು ಗುರುತಿಸಲ್ಪಟ್ಟರು. ಮೊನ್ನೆ ನಡೆದ ವಿಶ್ವಕಪ್ ಫೈನಲ್ ಪಂದ್ಯಾವಳಿಯ ದಿನ ಇಡೀ ಸ್ಟೇಡಿಯಂ ವೀಕ್ಷಕರಿಂದ ತುಂಬಿದ್ದು, ವಿಶ್ವದಾದ್ಯಂತ ೨೬ ಕೋಟಿಗೂ ಹೆಚ್ಚು ಜನ ದೂರದರ್ಶನಗಳಲ್ಲಿ ಪಂದ್ಯವನ್ನು ವೀಕ್ಷಿಸಿದ್ದಾರೆ…. ಎಲ್ಲಕ್ಕಿಂತ ಮುಖ್ಯವಾಗಿ ‘ಕ್ರಿಕೆಟ್ ನ ದೇವರು’ ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್ ಮತ್ತು ಈ ಸಲದ ವಿಶ್ವಕಪ್ ಎತ್ತಿ ಹಿಡಿದ ರೋಹಿತ್ ಶರ್ಮ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ನಮ್ಮ ಮಹಿಳಾ ತಂಡವನ್ನು ಹುರಿದುಂಬಿಸಿದ್ದಾರೆ.
ಆದ್ದರಿAದ ಸ್ನೇಹಿತರೆ! ನಮ್ಮ ಮನೆಯ ಹೆಣ್ಣು ಮಕ್ಕಳು ತಮ್ಮ ಬದುಕಿನ ಆಟವನ್ನು ಆಡುವಾಗ ಕೇವಲ ಅವರ ಆಟವನ್ನು ನೋಡಬೇಡಿ ಬದಲಾಗಿ ಅವರಲ್ಲಿರುವ ಜಾಣ್ಮೆಯನ್ನು, ಕ್ರಿಯಾಶೀಲತೆಯನ್ನು, ಬದ್ಧತೆಯನ್ನು ವೀಕ್ಷಿಸಿ. ಗೆದ್ದ ನಂತರ ಚಪ್ಪಾಳೆ ತಟ್ಟುವುದಕ್ಕೆ ನಿಮ್ಮ ಕೈಗಳನ್ನು ಮೀಸಲಾಗಿರಿಸಬೇಡಿ ಆಕೆಯ ಬೆಂಬಲಕ್ಕೆ ನಿಮ್ಮ ಕೈಗಳಿರಲಿ… ಆಕೆಗಾಗಿ ಎದ್ದು ನಿಲ್ಲಲು ನಿಮ್ಮ ಕಾಲುಗಳು ಸಶಕ್ತವಾಗಿರಲಿ. ಅವರು ಕೇವಲ ಹಣ, ಮತ್ತು ಯಶಸ್ವಿಗಾಗಿ ಆಡುವುದಿಲ್ಲ ಬದಲಾಗಿ ತಮ್ಮ ಅಸ್ಮಿತೆಯನ್ನು ಜಗತ್ತಿಗೆ ತೋರಿಸಲು ತಾವು ಕೂಡ ಎಲ್ಲ ರಂಗಗಳಲ್ಲಿ ಬೆಳೆದು ನಿಲ್ಲಲು ಸಾಧ್ಯ ಎಂಬುದನ್ನು ತೋರಿಸಿಕೊಳ್ಳಲು ಎದ್ದು ನಿಲ್ಲುತ್ತಾರೆ. ಅಕಸ್ಮಾತ್ ಪುರುಷರು ಸೋತರೆ , ಮುಂದಿನ ಬಾರಿ ಖಂಡಿತ ಗೆಲ್ಲುತ್ತೇವೆ ಎಂಬ ಭರವಸೆ ತುಂಬುವ ಇದೇ ಸಮಾಜ ಹೆಣ್ಣು ಮಕ್ಕಳು ಸೋತರೆ ಅಯ್ಯೋ! ಪುರುಷರಿಗೇ ಆಗದ ಕೆಲಸ ಹೆಣ್ಣು ಮಕ್ಕಳಿಂದ ಸಾಧ್ಯವಾದೀತೇ? ಎಂದು ಕೊಂಕನ್ನಾಡದೆ ಇರಲಿ.
ಮಿಥಾಲಿಯಿಂದ ಹಿಡಿದು ಇಲ್ಲಿಯವರೆಗೆ ಟ್ರೋಫಿ ಹಿಡಿಯುವ ಕನಸು ಕಂಡ ಎಲ್ಲಾ ಮಹಿಳಾ ಕ್ರೀಡಾಪಟುಗಳು ಬೆಂಕಿಯಲ್ಲಿ ಅರಳಿದ ಹೂಗಳು. ಚಿನ್ನ ಬೆಂಕಿಯಲ್ಲಿ ಬೆಂದು ಅಪರಂಜಿಯಾಗಿ ಹೊರಹೊಮ್ಮುವ ರೀತಿಯಲ್ಲಿಯೇ ಈ ಎಲ್ಲಾ ಕ್ರೀಡಾಪಟುಗಳು ತಂತಮ್ಮ ಕ್ರೀಡಾ ಬದುಕಿನ ಅಗ್ನಿ ಕುಂಡದಲ್ಲಿ ಹಾಯ್ದು ಅಪರಂಜಿ ಚಿನ್ನವಾಗಿ ಹೊರಹೊಮ್ಮಿದ್ದಾರೆ. ಭವಿಷ್ಯದ ಕ್ರೀಡಾಪಟುಗಳಿಗೆ ಹೊಸ ದಾರಿಯನ್ನು, ನವ ಆಶಯಗಳ ತೇರನ್ನೆಳೆಯಲು ಬೆಳಕು ತೋರಿದ್ದಾರೆ. ಅವರೆಲ್ಲರಿಗೂ ಅಭಿನಂದನಾಪೂರ್ವಕ ಶುಭ ಹಾರೈಕೆಗಳು



