ಬೆಂಗಳೂರು: ಸತ್ಯಾನ್ವೇಷಣೆಯೇ ವಿಜ್ಞಾನದ ಗುರಿ. ರಾಹು, ಕೇತು, ಗ್ರಹಗತಿಯೆಂದು ಫಲ ಜ್ಯೋತಿಷ್ಯ ಎಂದು ಹೇಳಿಕೊಂಡು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಪದ್ಮಶ್ರೀಪ್ರಶಸ್ತಿ ಪುರಸ್ಕೃತ, ಮನೋವೈಧ್ಯರಾದ ಡಾ. ಸಿಆರ್.ಚಂದ್ರಶೇಖರ ನುಡಿದರು.
ಅವರು ಆರ್.ವಿ.ಟೀಚರ್ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆ ಮತ್ತು ಆರ್.ವಿ.ಟೀಚರ್ ಕಾಲೇಜು ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಣೆ ಉದ್ಘಾಟನಾಭಾಷಣದಲ್ಲಿ ನುಡಿದರು. ಮಕ್ಕಳಾಗದವರಿಗೆ ಪೊಜೆ ಮಾಡುವ ಮೂಲಕ ಮಕ್ಕಳಾಗುತ್ತವೆ ಎಂದು ಹಣ ಕೇಳುತ್ತಾರೆ.
ಹಾಗಾದರೆ ಇಷ್ಟೋಂದು ಇ.ವಿ.ಕೇಂದ್ರಗಳು ಏಕೆ ಹುಟ್ಟಿ ಕೊಂಡಿದೆ ಎಂದು ಪ್ರಶ್ನಿಸಿದ ಅವರು, ಜನರು ವೈಜ್ಞಾನಿಕ ಚಿಂತನೆ ಬೆಳಸಿಕೊಳ್ಳಬೇಕು ಪ್ರಶ್ನಿಸುವಮನೋ ಧರ್ಮವನ್ನು ಬಳಸಿಕೊಂಡು ಮೋಸ ಮಾಡುವವರಿಂದ ದೂರವಿರಬೇಕೆಂದು ಸಲಹೆ ನೀಡಿದರುಅಂದಿನ ಸಮಾರಂಭದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾರ್ತಿಯಾಯಿನಿ ವಹಿಸಿದ್ದರು. ಪ್ರೊ ಎಂ ಆರ್ ನಾಗರಾಜ್, ಈ ಬಸವರಾಜು ಸಭೆಯಲ್ಲಿ ಮಾತನಾಡಿದರು.ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ನಾ.ಶ್ರೀಧರ ಅವರುಸಭೆಗೆ ವಂದನಾರ್ಪಣೆ ಮಾಡಿದರು.