ಚಳ್ಳಕೆರೆ: ಮಳೆ ಬಾರದೆ ತಾಲೂಕಿನ ರೈತರು ಸಂಕಷ್ಟದಲ್ಲಿ ಸಿಲುಕಿದ್ದು. ಬೆಳೆ ಪರಿಹಾರ ಹಾಗೂ ಬೆಳೆ ವಿಮೆಯನ್ನು ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು. ಇಂದು ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿದೆ. ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಬೂತಯ್ಯನವರು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ. ರೈತರು ಹಾಗೂ ವಿಮಾ ಕಂಪನಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು. ಬರಪೀಡಿತ ಪ್ರದೇಶ ಎಂದು ಸರ್ಕಾರವು ಘೋಷಣೆ ಮಾಡಿ ಆರು ತಿಂಗಳು ಕಳೆದರೂ ಸಹ. ರಾಜ್ಯ ಸರ್ಕಾರದಿಂದ ಬರಬೇಕಾದ ಬೆಳೆ ಪರಿಹಾರ ಹಾಗೂ ಕಂಪನಿಗಳಿಂದ ಬರಬೇಕಾದ ಬೆಳೆವಿಮೆ ಹಣ ರೈತರಿಗೆ ತಲುಪಿಲ್ಲ.
ಸಕಾಲಕ್ಕೆ ವಿಮೆ ಕಂಪನಿಗಳು ಬೆಳೆ ವಿಮೆ ನೀಡದೆ. ರೈತರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ವಿಮೆ ಕಂಪನಿಗಳು ಇನ್ನಾದರೂ ರೈತರ ಬೆಳೆ ವಿಮೆಯನ್ನು ಪಾವತಿ ಮಾಡಬೇಕು. ಇನ್ನು ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡಿ. ರೈತರ ರಕ್ಷಣೆಗೆ ಧಾವಿಸಬೇಕುಎಂದು ಒತ್ತಾಯಿಸಿದರು.
ತಾಲೂಕು ಕೃಷಿ ಅಧಿಕಾರಿ ಅಶೋಕ್ ಮಾತನಾಡಿ.ಸರ್ಕಾರಕ್ಕೆ ತಾಲೂಕಿನ ಬರ ಪರಿಸ್ಥಿತಿಯನ್ನು ಹಾಗೂ ಬೆಳೆ ನಷ್ಟದ ಬಗ್ಗೆ ಸಂಪೂರ್ಣ ವರ್ದಿಯನ್ನು ಸಲ್ಲಿಸಿದ್ದು. ವಿಮೆ ಕಂಪನಿಗಳು ನೆಪ ಹೇಳದೆ ಬೆಳೆ ವಿಮೆಯ ಮೊತ್ತವನ್ನು ನೀಡಬೇಕು.ವಿಮಾ ಕಂಪನಿಗಳು ರಾಜ್ಯಮಟ್ಟದಲ್ಲಿ ಸಭೆ ಮಾಡಿ. ಬೆಳೆ ನಷ್ಟವಾದ ರೈತರಿಗೆ ಶೀಘ್ರ ಪರಿಹಾರವನ್ನು ನೀಡಬೇಕು.
ಇದಕ್ಕೆ ಸಂಬಂಧಿಸಿದ ರೈತರ ಬೆಳೆನಷ್ಟದ ಸಂಪೂರ್ಣ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ವಿಮೆ ಕಂಪನಿಗಳಿಗೆ ನಾವು ನೀಡುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಿರಿಸ್ತೇ ದಾರ್ ಸದಾಶಿವಯ್ಯ, ತಾಂತ್ರಿಕ ಕೃಷಿ ಅಧಿಕಾರಿ ಮೇಘನ, ಬೆಳೆ ವಿಮೆ ಕಂಪನಿಯ ಜಿಲ್ಲಾ ಪ್ರತಿನಿಧಿ ತೇಜಸ್ವಿನಿ, ರಾಜ್ಯ ಪ್ರತಿನಿಧಿ ಅಮಿತ್, ಕೃಷಿ ಅಧಿಕಾರಿ ಎಂ.ತಿಪ್ಪೇಸ್ವಾಮಿ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿ ಹಳ್ಳಿ ವೀರಣ್ಣ,ರೈತ ಮುಖಂಡರಾದ ಶ್ರೀಕಂಠಪ್ಪ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.