ಬೇಲೂರು: ದೇಶದ ಪವಿತ್ರವಾದ ಗ್ರಂಥವೆಂದರೆ ನಮ್ಮ ಸಂವಿಧಾನ ಎಂದು ಶಾಸಕ ಹೆಚ್ ಕೆ ಸುರೇಶ್ ಹೇಳಿದರು.ನಗರದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಯತಿ ಮತ್ತು ಪುರಸಭೆ ವತಿಯಿಂದ ರಥಕ್ಕೆ ಸ್ವಾಗತ ಕೋರಿನಂತರ ಸಂವಿಧಾನ ಜಾಗೃತಿ ಅಭಿಯಾನ ರಥಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು 75 ನೆ ವರ್ಷದ ಸಂಭ್ರಮಾಚಾರಣೆಯ ಸಂಭ್ರಮದಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಸಂವಿಧಾನದ ಜಾತಕ ಕಾರ್ಯಕ್ರಮ ಅರ್ಥಪೂರ್ಣವಾದದ್ದು,
ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಲು ಕಾರಣ ಡಾ ಬಿ ಆರ್ ಅಂಬೇಡ್ಕರ್ ಕಾರಣ, ಎಲ್ಲರಿಗೂ ಸಮಾನತೆ ಸಿಗಲೆಂದು ಕರಡು ಪಟ್ಟಿ ಸಿದ್ದಪಡಿಸಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ, ಭಾಷವಾರು ಪ್ರಾಂತ್ಯ ಗಳನ್ನು ವಿಂಗಡಣೆ ಮಾಡಿದ್ದು ಅವರೇ, ಇಂದು ದೇಶವು ಸುಬಿಕ್ಷವಾಗಿದೆ ಎಂದರೆ ಅಂಬೇಡ್ಕರ್ ಅವರ ಶ್ರಮದಿಂದ, ಸಂವಿಧಾನದ ಬಗ್ಗೆ ಪ್ರತಿಯೊಬ್ಬ ಭಾರತೀಯನು ಅರಿತಿರಬೇಕು, ಎಲ್ಲಾ ಜಾತಿ ಜನಾಂಗದವರು ಸಂವಿಧಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು, ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತಿರಬೇಕಂಡರು,
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ ದೇಶಕ್ಕೆ ಸ್ವತಂತ್ರ ಬಂದ ತಕ್ಷಣ ನಮ್ಮದೇ ಆದ ಕಾನೂನನ್ನು ರಚಿಸಲು ಅಂಬೇಡ್ಕರ್ ಅವರ ನಿಯಮಗಳನ್ನೇ ಅಳವಡಿಸಲಾಗಿದೆ, ಸಂವಿಧಾನ ಪಿತಾಮಹ ದಾದ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ತಿಳಿದುಕೊಂಡಿದ್ದಾರೆ, ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ಸೀಮಿತ ಎಂದು ಅವರ ಅನುಕೂಲಕ್ಕಾಗಿ ಮಾತ್ರ ಇದೆ ಎಂದು ಅಪ ಪ್ರಚಾರ ಮಾಡಿದ್ದರೆ ಅದು ತಪ್ಪು ಕಲ್ಪನೆ,
ದೇಶದ ಪ್ರತಿಯೊಬ್ಬ ನಾಗರಿಕ ಪ್ರಜೆಯು ಒಂದಲ್ಲ ಒಂದು ರೀತಿಯಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ, ಅದನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಸಂವಿಧಾನ ಜೀವಂತವಾಗಿರಬೇಕಂದರೆ ನಮ್ಮ ದೇಶದ ಸಂಸ್ಕೃತಿ ಉಳಿಸುವ ಕಾರ್ಯ ಮಾಡಬೇಕು, ಒಳಗೆ ತಮ್ಮ ಜಾತಿ ಪಾಲಿಸಲಿ ಹೊರಗಡೆ ಸಂವಿಧಾನದ ನಿಯಮ ಪಾಲನೆ ಮಾಡಲೇ ಬೇಕು, ಯಾರೊಬ್ಬ ಜಾತಿಗೆ ಅಥವಾ ಒಬ್ಬನಿಗೆ ಸಂವಿಧಾನ ರಚಿಸಿಲ್ಲ, ದೇಶದ ಹಿತಕ್ಕಾಗಿ ರಚಿಸಿದ್ದಾರೆ ಎಂದರು.
ಡಾ ಅಂಬೇಡ್ಕರ್ ಬಗ್ಗೆ ಹಾಗೂ ಸಂವಿಧಾನದ ಆಸೋತ್ತರಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸಕ ಮಂಜುನಾಥ್, ಪೂರ್ಣಚಂದ್ರ ವಿವರಿಸಿದರು,ಇದೆ ವೇಳೆ ಅಂಬೇಡ್ಕರ್ ವೃತ್ತದಿಂದ ಪುರಸಭೆ ವರೆಗೆ ವಿವಿಧ ಶಾಲಾ ಮಕ್ಕಳಿಂದ ಜಾಥ ನಡೆಸಲಾಯಿತು,
ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯರುಗಳು, ಇತರರು ಇದ್ದರು.