ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ಪಕ್ಷಗಳನಿಷ್ಟಾವಂತ ಕಾರ್ಯಕರ್ತರು ಒಬ್ಬರಿಗೊಬ್ಬರೂ ಸಮನ್ವಯ ಸಾಧಿಸಿ ಗೆಲುವಿನ ಕಡೆ ಜೊತೆ ಜೊತೆಯಾಗಿ ನಡೆಯಬೇಕು ಎಂದು ಯುವ ಜನತಾದಳ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದರು.
ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೇಗೇಟ್ ನಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ “ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ -ಜೆಡಿಎಸ್ ನೇತೃತ್ವದ ಎನ್ ಡಿ ಎ ಕಾರ್ಯಕರ್ತರ ಸಮನ್ವಯ ಸಭೆ”ಯಲ್ಲಿ ಮಾತಾಡಿದರು.ಬಿಜೆಪಿಯಲ್ಲಿ ಭಿನ್ನಮತ ಹೊಂದಿರುವರನ್ನು ಸುಧಾಕರ್ ಅವರು ಎಲ್ಲರನ್ನೂ ಒಗ್ಗೂಡಿಸಿ ಯಾವೂದೇ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಲ್ಲದೇ ಮುನ್ನಡೆಸಿಕೊಂಡು ಗೆಲುವು ಸಾಧಿಸಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಡಾ.ಸುಧಾಕರ್ ಮಾತನಾಡಿ ಕಾಂಗ್ರೇಸ್ ಸರ್ಕಾರದ ಯೋಜನೆಗಳು ಹಬ್ಬಕ್ಕೆ ಊಟ ಹಾಕುವ ಸಂಪ್ರದಾಯವಷ್ಟೇ ಆದರೆ ಮೋದಿಯವರ ಕೇಂದ್ರ ಸರ್ಕಾರದಿಂದ ದಿನನಿತ್ಯ ಊಟದ ಸವಲತ್ತು ಒದಿಸುವ ಸರ್ಕಾರವಾಗಿದೆ ಅಂತವರಿಗೆ ನಿಮ್ಮ ಅಮೂಲ್ಯವಾದ ಮತದಾನದ ಮೂಲಕ ಉತ್ತರ ನೀಡುವ ಸಮಯ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ನಿಸರ್ಗ ನಾರಾಯಣಸ್ವಾಮಿ ಎಲ್. ಎನ್, ಪಿಳ್ಳ ಮುನಿಶಾಮಪ್ಪ ಮತ್ತು ಜಿ.ಚಂದ್ರಣ್ಣ, ಜಿಲ್ಲಾಧ್ಯಕ್ಷರಾದ ರಾಮಕೃಷ್ಣ, ಬಿ. ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೆಚ್.ಎಂ, ಜಿ.ಎ ರವೀಂದ್ರ, ತಾಲೂಕು ಅಧ್ಯಕ್ಷ ಆರ್. ಮುನೇಗೌಡ ಮತ್ತು ಸುಂದರೇಶ್, ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಪ್ರಧಾನ ಸಂಚಾಲಕ ಅಂಬರೀಶ್ ಗೌಡ ಮುಖಂಡರುಗಳಾದ ಎಕೆಪಿ ನಾಗೇಶ್, ಸೀತಾರಾಮಯ್ಯ, ಯುವ ಘಟಕದ ಅಧ್ಯಕ್ಷ ಹೊಸಳ್ಳಿ ಟಿ. ರವಿ, ಸಂದೀಪ್ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಮತ್ತಿತರರು ಇದ್ದರು.