ಗುಂಡ್ಲುಪೇಟೆ: ಬುಧವಾರ ಬೆಳಿಗ್ಗೆ ಸ್ವಾಮೀಜಿಗಳ ಸಮ್ಮುಖದಲ್ಲಿ ದಿ.ಮಹದೇವಪ್ರಸಾದ್ ಕುಟುಂಬವರ್ಗ ಸಮಾದಿಗೆ ಪುಜೆ ಸಲ್ಲಿಸಿ ದಿ.ಮಹದೇವ ಪ್ರಸಾದ್ರನ್ನು ಸ್ಮರಿಸಿಕೊಂಡರು.ಪತಿ ನೆನೆದು ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಭಾವುಕ: ಪತಿ ಸಮಾಧಿಗೆ ಪೂಜೆ ಸಲ್ಲಿಸಲು ತೆರಳಿದ ಸಂದರ್ಭದಲ್ಲಿ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಪತಿಯನ್ನು ನೆನೆದು ಕಣ್ಣೀರು ಹಾಕಿದರು, ಈ ಸಂದರ್ಭದಲ್ಲಿ ಕುಟುಂಬಸ್ಥರು ಸಂತೈಸಿದರು.
ಪೂಜೆ ಪುನಸ್ಕಾರ ಬಳಿಕ ವೇದಿಕೆ ಕಾರ್ಯಕ್ರಮ:
ಪಡುಗೂರು ಶ್ರೀಮಠದ ಸ್ವಾಮೀಜಿಗಳಾದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಲ್ಲವನು ಏನಾದರೂ ಸಾಧಿಸಬಹುದು ಕೊಂಡುಕೊಳ್ಳಬಹುದು ಎಂಬುವುದು ಜಗತ್ತಿನ ಭ್ರಮೆಯಾಗಿದ್ದು, ಸರ್ವರು ಸಮ ಎಂಬ ಮನಸ್ಥಿತಿಯ ಜನಬಲ ಉಳ್ಳವನು ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳುವ ಮೂಲಕ ಜನನಾಯಕ ಎಂಬ ಹೆಸರು ಗಳಿಸುತ್ತಾನೆ.
ಈ ಒಂದು ಸಾಲಿನಲ್ಲಿ ಎಚ್ಎಸ್ ಮಾದೇವ ಪ್ರಸಾದ್ ರವರು ಸಹ ಓರ್ವ ಉತ್ತಮ ಜನನಾಯಕ ತಮ್ಮ ಸ್ವಾರ್ಥಕ್ಕಾಗಿ ಆಲೋಚಿಸಿದೆ ಜಿಲ್ಲೆಯ ಸರ್ವನೋತ್ತಮಕ ಅಭಿವೃದ್ಧಿಗಾಗಿ ಜನರ ಹೇಳಿಕೆಗಾಗಿ ಶ್ರಮಿಸಿದ ಉತ್ತಮ ರಾಜಕಾರಣಿ ಎಂದು ತಿಳಿಸಿದರು.
ಪುತ್ರ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ ನಮ್ಮ ತಂದೆಯವರಾದ ದಿ.ಮಹದೇವ ಪ್ರಸಾದ್ ರವರು ಸತತ 25 ವರ್ಷಗಳ ಕಾಲ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ / ಸಚಿವರಾಗಿ ಕರ್ತವ್ಯ ನೆರವೇರಿಸಿದರು.
ಅವರ ಕಾಲಾನಂತರ ನಮ್ಮ ತಾಯಿ ಕೂಡ ಕ್ಷೇತ್ರದ ಶಾಸಕರಾಗಿ/ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ . ಇಂದು ಕ್ಷೇತ್ರದ ಮತದಾರರು ನಮ್ಮ ಕುಟುಂಬದ ಮೇಲೆ ವಿಶ್ವಾಸ ಇಟ್ಟು ಮತ್ತೊಮ್ಮೆ ನಮ್ಮ ಕುಟುಂಬದಿಂದ ನನ್ನನ್ನು ಅಧಿಕ ಬಹು ಮತಗಳಿಂದ ಈ ಬಾರಿ ಅಯ್ಕೆಮಾಡಿದ್ದಾರೆ.
ನಾನು ಕೂಡ ನಮ್ಮ ತಂದೆ ಮತ್ತು ತಾಯಿ ರೀತಿಯಲ್ಲಿ ಅವರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಮಾರ್ಗದರ್ಶನದಲ್ಲಿ ಶಾಸಕನಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಮತದಾರರ ಅಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ನಮ್ಮ ಆಡಳಿತ ಅವಧಿಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವಣ್ಣ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ನಂಜುಂಡಸ್ವಾಮಿ, ಕಾಡ ಮಾಜಿ ಅಧ್ಯಕ್ಷರಾದ ಎಚ್ಎಸ್ ನಂಜಪ್ಪ, ಚಾಮುಲ್ ನಿರ್ದೇಶಕ ಸಹೋದರ ನಂಜುಂಡ ಪ್ರಸಾದ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಬ್ಬಹಳ್ಳಿ ಮಹೇಶ್ ಸೇರಿದಂತೆ ಹಲವು ಗಣ್ಯರು ದಿ. ಮಾದೇವ ಪ್ರಸಾದ್ ಪುಣ್ಯಸ್ಮರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರನ್ನು ಸ್ಮರಿಸುತ್ತಾ ಅವರು ಮಾಡಿದಂತ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಾ ಮತ್ತು ಸರಳತೆ ಬಗ್ಗೆ ಮಾತನಾಡಿದರು.
ಮಧ್ಯಾಹ್ನ ಗ್ರಾಮದ ಹೆಚ್.ಎನ್.ಎಸ್. ಸಮುದಾಯ ಭವನದಲ್ಲಿ ಪುಣ್ಯರಾಧನೆಯಂದು ಸಾವಿರಾರು ಜನರಿಗೆ ಪ್ರಸಾದ್ ಕುಟುಂಬಸ್ಥರು ಅನ್ನಸಂತರ್ಪಣೆ ನಡೆಸಿದರು. ಬೆಳಿಗ್ಗೆ ತಿಂಡಿ ಮದ್ಯಾಹ್ನ ಶುಚಿ ಹಾಗೂ ರುಚಿಯಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಒಂದು ಬಾರಿಗೆ 2000 ಜನ ಊಟಕ್ಕೆ ಕೂರುವಂತ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹದೇವಪ್ರಸಾದ್ ಬದುಕಿದ್ದಾಗ ನಡೆದುಕೊಳ್ಳುತ್ತಿದ್ದ ಹಾಗೇನೆ ಶಿಸ್ತಿನಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ ನೆರೆದಿದ್ದ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಯಿತು.
ಈ ಒಂದು ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಸಚಿವೆ ಗೀತಾ ಮಾದೇವಿ ಪ್ರಸಾದ್, ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕ ನಂಜುಂಡಸ್ವಾಮಿ, ಕೆ.ಎಂ. ವೈ.ಎಫ್ ಸಂಸ್ಥೆಯ ನಿರ್ದೇಶಕರು ಪದಾಧಿಕಾರಿಗಳು, ಮಾಜಿ ಕಾಡ ಅಧ್ಯಕ್ಷರಾದ ನಂಜಪ್ಪ, ಚಾಮುಲ್ ನಿರ್ದೇಶಕ ನಂಜುಂಡ ಪ್ರಸಾದ್, ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರುಗಳಾದ ಮುನಿರಾಜು, ರಾಜಶೇಖರ್, ಸೇರಿದಂತೆ ಪಕ್ಷದ ಮುಖಂಡರು ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಕುಟುಂಬಸ್ಥರು ಗ್ರಾಮಸ್ಥರು ಇತರರು ಭಾಗವಹಿಸಿದ್ದರು.