ಕನಕಪುರ: ವಿಶ್ವಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಆದರ್ಶ ದಾಯಕ ವ್ಯಕ್ತಿತ್ವ ಸಮಾಜಕ್ಕೆ ಮಾದರಿ ಯಾಗಿದೆ ಎಂದು ತಹಶೀಲ್ದಾರ್ ಸ್ಮಿತಾ ರಾಮು ತಿಳಿಸಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ಒಬ್ಬ ವ್ಯಕ್ತಿಯ ಸಾಧನೆ ಯ ಹಿಂದೆ ನೋವು, ಅವಮಾನ, ಸವಾಲು ಎಲ್ಲವೂ ಇರುತ್ತದೆ ಹಾಗೆ ಕುವೆಂಪು ಅವರ ಪ್ರತಿಯೊಂದು ಸಾಧನೆಯ ಹಿಂದೆ ಕೆಲವು ಘಟನೆಗಳು ಸಂದರ್ಭಗಳು ನಡೆದಿವೆ ಕುವೆಂಪು ಅವರು ಅಗಾಧವಾದ ಜ್ಞಾನವನ್ನು ಹೊಂದಿದ್ದರು ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಅವರ ಆದರ್ಶ ದಾಯಕ ವ್ಯಕ್ತಿತ್ವ ವನ್ನು ನಮ್ಮ ಮಕ್ಕಳಿಗೂ ತುಂಬಬೇಕು ಎಂದರು.
ಧಮ್ಮ ದೀವಿಗೆ ಟ್ರಸ್ಟ್ ಮಲ್ಲಿಕಾರ್ಜುನ್ ಮಾತನಾಡಿ ಬ್ರಾಹ್ಮಣ್ಯ ಸಂಸ್ಕೃತಿಯಿಂದ ಅವಮಾನಿಸಲ್ಪಟ್ಟು ಬ್ರಾಹ್ಮಣ್ಯ ವಿರುದ್ಧ ತಮ್ಮ ಬರಹಗಳ ಮೂಲಕ ಕುವೆಂಪು ಅವರು ಹೋರಾಟವನ್ನು ಆರಂಭಿಸಿದರು ಸಂಸ್ಕೃತ ವಿದ್ಯಾರ್ಥಿಯಾಗಿದ್ದ ಕುವೆಂಪು ಅವರು ಕಾಲೇಜಿನಲ್ಲಿ ದಾಖಲಾದಾಗ ಅವರ ಹಣೆಯ ಮೇಲೆ ನಾಮ ಇಲ್ಲ ಇವನು ಶೂದ್ರ ಎಂದು ಬ್ರಾಹ್ಮಣ ಶಿಕ್ಷಕ ಕುವೆಂಪು ಅವರನ್ನು ಕಾಲೇಜಿನಿಂದ ಹೊರ ಹಾಕಿದ್ದರು ಹಾಗಾಗಿ ಬ್ರಾಹ್ಮಣ್ಯ ಸಂಸ್ಕೃತಿ ವಿರುದ್ಧ ಅವರ ಬರಹಗಳ ಮೂಲಕ ಹೋರಾಟ ಆರಂಭಿಸಿದರು ಎಂದರು.
ಶಿವರಾಮ ಕಾರಂತರು ಬರೆದ ಮೂಕಜ್ಜಿಯ ಕನಸುಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಆದರೆ ಕುವೆಂಪು ಅವರು ಬರೆದ ರಾಮಾಯಣ ದರ್ಶನಂ ಕೃತಿಗೆ ಏಳು ಬಾರಿ ಜ್ಞಾನಪೀಠ ಪ್ರಶಸ್ತಿಯಿಂದ ತಿರಸ್ಕೃತವಾಗಿದೆ ಎಂಟನೇ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಇಬ್ಬರಿಗೆ ಹಂಚಿಕೆ ಮಾಡಿ ಕೊಟ್ಟಿದ್ದಾರೆ ಬಹುಷಃ ಯಾವ ದೇಶದಲ್ಲೂ ಇಂತಹ ಪ್ರಶಸ್ತಿ ದೊರೆತಿರಲಾರದು ಅ?ರ್ ಪ್ರಶಸ್ತಿ ಪಡೆದ ಅರೇ ಜ್ಞಾನ ಪಿಟಿ ಎಂದು ಕೂಡ ಕೆಲವರು ಕುವೆಂಪು ಅವರನ್ನು ಅವಮಾನಿಸಿದ್ದಾರೆ ಇಂತಹ ಸಂಸ್ಕೃತಿಯನ್ನು ವಿರೋಧಿಸಿ ಬೆರಳಿಗೆ ಕೊರಳ್,ಶೂದ್ರ ತಪಸ್ವಿ ಎಂಬ ಕೃತಿಯನ್ನು ಕುವೆಂಪು ಅವರು ರಚಿಸಿದರು ಎಂದರು.
ಸಾಹಿತಿ ಕೂ.ಗಿ.ಗಿರಿಯಪ್ಪ ಮಾತನಾಡಿ. ಜಾತಿಭೇದ ಬೇಡ ಮನುಷ್ಯ ಮನುಷ್ಯರಾಗಿ ಬದುಕಬೇಕು ಎಂಬ ಸಂದೇಶವನ್ನು ಸಾರಿದ ಕುವೆಂಪು ಅವರು 1930 ರಲ್ಲಿ ಮೊಟ್ಟಮೊದಲಿಗೆ ಕನ್ನಡದಲ್ಲಿ ಕೊಳಲು ಎಂಬ ಕವನ ಸಂಕಲವನ್ನು ರಚಿಸಿದರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಮೈಸೂರು ವಿವಿಯಲ್ಲಿ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ ಕನ್ನಡ ಸಾಹಿತ್ಯಕ್ಕೆ 65 ಕೃತಿಗಳು,25 ಕವನ ಸಂಕಲನಗಳು, ಕಥೆ, ನಾಟಕಗಳು ಸೇರಿದಂತೆ ಹಲವು ಕಾದಂಬರಿಗಳನ್ನು ಬರೆದ ಇವರು ಮನುಜ ಮತ ವಿಶ್ವ ಪಥ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದರು.
ಕುವೆಂಪು ಅವರಿಗೆ 1958ರಲ್ಲಿ ಪದ್ಮಭೂಷಣ,, 1988ರಲ್ಲಿ ಪದ್ಮವಿಭೂಷಣ, 1966 ರಲ್ಲಿ ರಾಷ್ಟ್ರಕವಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿವಿ, ಗುಲ್ಬರ್ಗ, ಧಾರವಾಡ ,ಬೆಂಗಳೂರು ಸೇರಿದಂತೆ ಐದು ವಿವಿಗಳಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ 20ನೇ ಶತಮಾನದ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ರಚಿಸಿದ ರಸ ಋಷಿ, ಜಗದ ಕವಿ ಕುವೆಂಪು ಅವರು ನಾಡಗೀತೆ, ರೈತ ಗೀತೆಗಳನ್ನು ಕೊಟ್ಟ ಮಹಾಕವಿ ಕರ್ನಾಟಕದ ಏಕೀಕರಣದ ಪೂರ್ವದಲ್ಲಿ ಬಾರಿಸು ಕನ್ನಡ ಡಿಂಡಿಮ ಎಂಬ ಗೀತೆಯನ್ನು ಬರೆದು ಕನ್ನಡಿಗರನ್ನು ಜಾಗೃತಿಗೊಳಿಸಿದ್ದಾರೆಂದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್, ಎ ಡಿ ಎಲ್ ಆರ್ ನಂದೀಶ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಯು.ಸಿ. ಕುಮಾರ್, ಮುಖಂಡ ಕುಮಾರಸ್ವಾಮಿ, ನೀಲಿ ರಮೇಶ್, ಗೋಪಿ, ಗಬ್ಬಾಡಿ ಕಾಡೇಗೌಡ, ಪುಟ್ಟಸ್ವಾಮಿ, ರೈತ ಮುಖಂಡ ಶಿವರಾಜು ಸೇರಿದಂತೆ ವಿವಿಧಇಲಾಖೆ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.