೨೦೨೬ ರ ಟಿ೨೦ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಇಟಲಿ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿರಬಹುದು. ಆದರೆ ಎಲ್ಲಾ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿದೆ. ಚೊಚ್ಚಲ ವಿಶ್ವಕಪ್ನಲ್ಲೇ ತನ್ನ ಪ್ರದರ್ಶನದಿಂದ ವಿಶ್ವ ಕ್ರಿಕೆಟ್ನ ಗಮನ ಸೆಳೆದಿರುವ ಇಟಲಿ ಸೋಮವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಇಂಗ್ಲೆAಡ್ ವಿರುದ್ಧದ ಪಂದ್ಯದಲ್ಲೂ ಕೆಚ್ಚೆದೆಯ ಹೋರಾಟ ನೀಡಿತು. ಅದರಲ್ಲೂ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಬೆನ್ ಮಾನೆಂಟಿ ಕೇವಲ ೨೫ ಎಸೆತಗಳಲ್ಲಿ ೬೦ ರನ್ಗಳ
ಸ್ಫೋಟಕ ಇನ್ನಿಂಗ್ಸ್ ಆಡಿದರು.
ಇಂಗ್ಲೆAಡ್ ನೀಡಿದ ೨೦೩ ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಟಲಿ ಆರಂಭದಲ್ಲೇ ಎಡವಿದರೂ, ಮಧ್ಯಮ ಕ್ರಮಾಂಕದಲ್ಲಿ ಬಂದ ಮಾನೆಂಟಿ ತಮ್ಮ ವೀರೋಚಿತ ಪ್ರದರ್ಶನದಿಂದ ಇಂಗ್ಲೆಂಡ್ ಬೌಲರ್ಗಳನ್ನು ಭಯಭೀತಗೊಳಿಸಿದರು. ಕೇವಲ ೨೫ ಎಸೆತಗಳಲ್ಲಿ ೬೦ ರನ್ ಬಾರಿಸಿ ಇಂಗ್ಲೆಂಡ್ ತಂಡವನ್ನು ಬಹುತೇಕ ಸೋಲಿನ ಅಂಚಿಗೆ ಕೊಂಡೊಯ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಬೆನ್ ಮಾನೆಂಟಿ ಕೇವಲ ೨೨ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಇನ್ನಿಂಗ್ಸ್ನಲ್ಲಿ ೬ ಬೃಹತ್ ಸಿಕ್ಸರ್ಗಳು ಮತ್ತು ೪ ಬೌಂಡರಿಗಳು ಸೇರಿದ್ದವು. ಇದರ ಜೊತೆಗೆ ಜಸ್ಟಿನ್ ಮಾಸ್ಕೋ ಜೊತೆ ೯೨ ರನ್ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು.
ಮಾನೆAಟಿ ಕ್ರೀಸ್ನಲ್ಲಿರುವವರೆಗೂ ಇಟಲಿ ತಂಡಡ ಗೆಲ್ಲುವುದು ಖಚಿತವೆನಿಸಿತ್ತು. ಆದಾಗ್ಯೂ, ವಿಲ್ ಜ್ಯಾಕ್ಸ್ ಅವರ ಬೌಲಿಂಗ್ನಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಯತ್ನಿಸಿದ ಮಾನೆಂಟಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮಾನೆಂಟಿ ವಿಕೆಟ್ ಪತನದ ಬಳಿಕ ಇಟಲಿ ಇನ್ನಿಂಗ್ಸ್ ಹಳಿ ತಪ್ಪಿತು. ಆದಾಗ್ಯೂ, ವಿಶ್ವ ಚಾಂಪಿಯನ್ ಇಂಗ್ಲೆAಡ್ಗೆ ತಮ್ಮ ಚೊಚ್ಚಲ ವಿಶ್ವಕಪ್ನಲ್ಲೇ ಈ ಮಟ್ಟದಲ್ಲಿ ಸ್ಪರ್ಧೆಯನ್ನು ನೀಡಿದ್ದ ಇಟಲಿ ತಂಡವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ.
ಇಟಲಿಯ ಗಮನಾರ್ಹ ಪ್ರದರ್ಶನ
ಮೊದಲ ಬಾರಿಗೆ ಟಿ೨೦ ವಿಶ್ವಕಪ್ ಆಡುತ್ತಿರುವ ಇಟಲಿ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋತರೂ, ನೇಪಾಳವನ್ನು ೧೦ ವಿಕೆಟ್ಗಳಿಂದ ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಮಾಸ್ಕೊ ಸಹೋದರರು ಮತ್ತು ಬೆನ್ ಮಾನೆಂಟಿಯಂತಹ ಹಿಟರ್ಗಳ ಸ್ಥಿರ ಆಟದೊಂದಿಗೆ, ಈ ತಂಡವು ಗ್ರೂಪ್-ಸಿಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಇಂಗ್ಲೆಂಡ್ ವಿರುದ್ಧ ಮಾನೆಂಟಿಯ ಇನ್ನಿಂಗ್ಸ್ ಇಟಾಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಉಳಿಯುತ್ತದೆ.
ಆಂಗ್ಲರ ವಿರುದ್ಧ ೨೫ ಎಸೆತಗಳಲ್ಲಿ ೬೦ ರನ್ ಚಚ್ಚಿದ ಇಟಲಿ ಬ್ಯಾಟರ್



