ಛಾಯಾಗ್ರಾಹಕ ಸುಧಾಕರ್ ರಾಜ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿಕ್ಕಣ್ಣ ಹಾಗೂ ಸುನಿಲ್ ನಟನೆಯ ‘ಜೋಡೆತ್ತು’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೇ.೫೦ ರಷ್ಟು ಸಿನಿಮಾ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆ ಎಂಬ ಹಳ್ಳಿಯಲ್ಲಿ ೨ನೇ ಹಂತದ ಚಿತ್ರೀಕರಣ ಮುಗಿಸಲಾಗಿದೆ. ೨ನೇ ಹಂತದ ಚಿತ್ರೀಕರಣದ ಕೊನೆ ದಿನ ರಂಗಾಯಣ ರಘು, ರಮೇಶ್ ಭಟ್ ನಟನೆಯ ಕೆಲ ದೃಶ್ಯಗಳನ್ನು ಸೆರೆ ಹಿಡಿದರು.
‘ಜೋಡೆತ್ತು’ ಚಿತ್ರದ ಮೊದಲ ಷೆಡ್ಯೂಲ್ ಚಿಕ್ಕಮಂಗಳೂರಿನಲ್ಲಿ ಆರಂಭವಾಗಿತ್ತು. ಬಳಿಕ ಕನಕಪುರದ ಬಳಿ ಒಂದು ಫೈಟ್ ಚಿತ್ರೀಕರಣ ಮಾಡಲಾಗಿತ್ತು. ೨೫ ದಿನಗಳ ಕಾಲ ಒಂದೇ ಷೆಡ್ಯೂಲ್ ಪ್ಲಾನ್ ಮಾಡಿ ಎಲ್ಲಾ ಕಲಾವಿದರ ಡೇಟ್ಸ್ ಪಡೆದು ಅದ್ದೂರಿಯಾಗಿ ಚಿತ್ರೀಕರಣ ನಡೆಸಿದೆವು. ೧೮೦ ಜನ ಪ್ರತಿದಿನ ಸೆಟ್ನಲ್ಲಿದ್ದರು. ೧೦೦೦ ಜನ ಜ್ಯೂನಿರ್ರ್÷್ಸ ಇಟ್ಟು ಕೊಂಡು ೫ ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ . ನನಗಾಗಿ ಎಲ್ಲಾ ಕಲಾವಿದರು ತಂತ್ರಜ್ಞರು ಎಲ್ಲರೂ ಒಂದೇ ಫ್ಯಾಮಿಲಿಯಂತೆ ಸಹಕರಿಸಿದರು ಎಂದು ನಿರ್ದೇಶಕ ಸುಧಾಕರ್ ರಾಜ್ ಮಾಹಿತಿ ನೀಡಿದ್ದಾರೆ.
ಇದೊಂದು ಹಳ್ಳಿಸೊಗಡಿನ ಫ್ಯಾಮಿಲಿ ಡ್ರಾಮಾ ಸಿನಿಮಾ. ಮಹೇಶ್ ದೇವ್ ಡಿ. ಎನ್. ಪುರ ಅವರ ಕಥೆಗೆ ಸುಧಾಕರ್. ಎಸ್. ರಾಜ್ ತಮ್ಮ ತಂಡದೊAದಿಗೆ ಚಿತ್ರಕಥೆ ಬರೆಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿರುವ ೩ನೇ ಸಿನಿಮಾ ಇದು. ತೆಲುಗು ನಟ ಸುನಿಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಕಾಶ್ ಎಂಟರ್ಟೆÊನ್ಮೆAಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಕೆ.ಸೋಮಶೇಖರ್ (ಕಟ್ಟಿಗೇನಹಳ್ಳಿ ) ಅಂದಾಜು ೧೦ ಕೋಟಿ ಬಜೆಟ್ನಲ್ಲಿ ‘ಜೋಡೆತ್ತು’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
‘ಜೋಡೆತ್ತು’ ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಕೆ.ಎಲ್. ರಾಜಶೇಖರ್ ಹಾಗೂ ರಘು ನೀಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ದರ್ಶಿನಿ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಜಾಕಿ (ಬಿ. ತಿಮ್ಮೇಗೌಡ ) ಸಹ -ನಿರ್ದೇಶಕರಾಗಿ ಸುಧಾಕರ್ ರಾಜ್ ಅವರಿಗೆ ಸಾಥ್ ಕೊಟ್ಟಿದ್ದಾರೆ.
`ಜೋಡೆತ್ತು’ ಚಿತ್ರ ತಂಡದಿಂದ ೨ನೇ ಹಂತದ ಚಿತ್ರೀಕರಣ ಪೂರ್ಣ



