ಬೆಂಗಳೂರು: ಬೆಂಗಳೂರು ಗ್ರಾಮಾಂತರದ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡು ಹಗಲೇ ಮನೆ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಕಳವಾಗಿರೋ ಘಟನೆ ಸಂಭವಿಸಿದೆ.
ದೇವನಹಳ್ಳಿ ತಾಲೂಕಿನ ಕೊಮ್ಮವಾರದಲ್ಲಿರುವ ನಾಗೇಶ್ ಎಂಬುವರ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಬೀಗ ಮುರಿದು 20 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಮತ್ತು 6 ಲಕ್ಷ ರೂ ನಗದು ಕಳವಾಗಿರುತ್ತದೆ.
ನಾಗೇಶ್ ರವರು ಸೋಲೂರ್ ನಲ್ಲಿರುವ ತಮ ಪಿತ್ರಾರ್ಜಿತ ಜಮೀನನ್ನು ಮಾರಾಟ ಮಾಡಿ ಹಣವನ್ನು ತಂದು ಬೀರುನಲ್ಲಿ ಇಟ್ಟು ದೇವನಹಳ್ಳಿಗೆ ಹೋಗಿ ಬಂದ ಸಮಯದಲ್ಲಿ ಕಳ್ಳತನ ವಾಗಿರುತ್ತದೆ ಎಂದು ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ.