ಕನಕಪುರ: ಇಡೀ ದೇಶದ ಜನರ ಬಹುದಿನಗಳ ಕನಸು ಜ. 22 ರಂದು ನನಸಾಗುತ್ತಿದ್ದು ಈ ಮಧುರ ಕ್ಷಣಗಳಿಗೆ ದೇಶದ ಪ್ರತಿಯೊಬ್ಬ ಹಿಂದೂ ಕುಟುಂಬವು ಭಾಗಿಯಾಗ ಬೇಕೆಂಬ ಉದ್ದೇಶದಿಂದ ಶ್ರೀ ರಾಮ ಭಕ್ತರು ಮನೆ ಮನೆಗೆ ಅಯೋಧ್ಯೆ ಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ಯನ್ನು ತಲುಪಿಸುವಂತಹ ಕೆಲಸ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ನಾಗನಂದ್ ತಿಳಿಸಿದರು.
ನಗರದ ಎ. ವಿ. ಆರ್. ರಸ್ತೆಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಪವಿತ್ರ ಮಂತ್ರಾಕ್ಷತೆಗೆ ಪೂಜೆ ನೇರವೇರಿಸಿ ಜೆ.ಸಿ ಬಡಾವಣೆ ವ್ಯಾಪ್ತಿಯ ಮನೆ-ಮನೆ ಗಳಿಗೆ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹಿಂದೂಗಳ ಆರಾಧ್ಯದೈವ ವಾಗಿರುವ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣಕ್ಕಾಗಿ ಹಲವಾರು ಮಹನೀಯರು ದಶಕಗಳಿಂದ ನಡೆಸಿದ ಹೋರಾಟಕ್ಕೆ ತಕ್ಕ ಪ್ರತಿಫಲ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ ಯವರಿಂದ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರಭು ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುವ ಮೂಲಕ ಕೋಟ್ಯಾಂತರ ಹಿಂದೂ ಜನರ ಆಶಯ ಈಡೇರುತ್ತಿದ್ದು ಅಂದೇ ದೇಶದ ಜನರಿಗೆ ದೀಪಾವಳಿ, ಯುಗಾದಿ ಹಬ್ಬದ ರೀತಿ ಆಚರಿಸಲು ಸಿದ್ಧವಾಗುತ್ತಿದೆ, ಈ ಐತಿಹಾಸಿಕ ಕ್ಷಣ ವಾದ ಜ. 22 ರಂದು ಪ್ರತಿಯೊಂದು ಹಿಂದು ಕುಟುಂಬ ಹಬ್ಬದ ರೀತಿ ಆಚರಿಸುವಂತೆ ಮನವಿ ಮಾಡಿದರು.
ಹಿಂದೂ ಸಂಘಟನೆಯ ಮುಖಂಡ ದರ್ಶನ್, ರಾಜು, ರಂಗಸ್ವಾಮಿ, ಮಹಿಳಾ ಕಾರ್ಯಕರ್ತರು ಹಾಗೂ ಜೆ. ಸಿ. ಬಡಾವಣೆಯ ಯುವಕ-ಯುವತಿಯರು, ಪ್ರಭು ಶ್ರೀ ರಾಮನ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.