This is the title of the web page
This is the title of the web page

ಜನರು ಹೆಚ್ಡಿಡಿ ಮೇಲೆ ಇಟ್ಟಿರುವ ಪ್ರೀತಿ ವ್ಯಾಮೋಹ ಕಡಿಮೆ ಆಗುವುದಿಲ್ಲ ಮಾಗಡಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಹೇಳಿಕೆ

ರಾಮನಗರ: ಹಳೇ ಮೈಸೂರು ಭಾಗಕ್ಕೆ ಪ್ರಧಾನಿ ಮೋದಿ ಮಾತ್ರವಲ್ಲ ಯಾರೇ ಬಂದು ಹೋದರು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಜನರು ಇಟ್ಟಿರುವ ಪ್ರೀತಿ ವ್ಯಾಮೋಹವನ್ನು ಕಡಿಮೆ ಮಾಡಲು ಆಗುವುದಿಲ್ಲ ಎಂದು ಮಾಗಡಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪ್ರತಿಕ್ರಿಯಿಸಿದರು.

ವೀರೂಪಸಂದ್ರ ಹಾಗೂ ಅಕ್ಕೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರು ಭಾಗದ ಜನರು 1994ರಲ್ಲಿಯೇ ಪ್ರಧಾನಿಯನ್ನು ಹತ್ತಿರದಿಂದ ನೋಡಿದ್ದಾರೆ. ಆದ್ದರಿಂದ ಮೋದಿರವರ ಮೋಡಿ ಏನು ನಡೆಯುವುದಿಲ್ಲ. ಅವರ ಭೇಟಿಯಿಂದ ಸಣ್ಣ ಬದಲಾವಣೆಯೂ ಆಗುವುದಿಲ್ಲ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ನವರು ಪ್ರಣಾಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ. ಎರಡೂ ಪಕ್ಷಗಳು ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಹೊಡೆದು ಕೇಂದ್ರಕ್ಕೆ ಕಳುಹಿಸುತ್ತಾರೆ. ಆ ಪಕ್ಷಗಳ ಹೈಕಮಾಂಡ್ ದೆಹಲಿಯಲ್ಲಿದ್ದರೆ, ನಮ್ಮ ಹೈಕಮಾಂಡ್ ಬೆಂಗಳೂರಿನಲ್ಲಿ ಸಿಗುತ್ತಾರೆ. ಹೀಗಾಗಿ ನಾವು ಪರ್ಸೆಂಟೇಜ್ ಪಡೆಯುವುದಿಲ್ಲ ಎಂದರು. ಕಳೆದ 5 ವರ್ಷಗಳಲ್ಲಿ ಮಾಡಿರುವ ಶಾಶ್ವತವಾದ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ.

ಜನರಿಂದಲು ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಮ 4 ಬಾರಿ ಮತ್ತು ಅವರ ತಂದೆಯವರು 3 ಬಾರಿ ಶಾಸಕರಾಗಿದ್ದರು. ಈ ಅವ„ಯಲ್ಲಿ ಅವರು ಏನು ಶಾಶ್ವತವಾದ ಕೆಲಸ ಮಾಡಿ, ಬದಲಾವಣೆ ತಂದಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ಪಕ್ಷ ಅ„ಕಾರದಲ್ಲಿ ಇಲ್ಲದಿದ್ದರೂ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು ಸಾವಿರಾರು ಕೋಟಿ ರುಪಾಯಿಗಳನ್ನು ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇದರಿಂದ ಜನರಲ್ಲಿಯೂ ನನ್ನ ಬಗ್ಗೆ ನಂಬಿಕೆ ಬಂದಿದೆ. ಆ ನಂಬಿಕೆ ಮತವಾಗಿ ಪರಿವರ್ತನೆಯಾಗುತ್ತಿದೆ. ಎ.ಮಂಜುನನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಜನರು ನಿರ್ಧರಿಸಿದ್ದಾರೆ ಎಂದರು. ನನಗೆ ಕಾರ್ಯಕರ್ತರೇ ಎಂಪಿ, ಎಂಎಲ್ ಸಿ ಎಲ್ಲವೂ ಆಗಿದ್ದಾರೆ.

ಚುನಾವಣೆ ಬಂದಾಕ್ಷಣ ಎಲ್ಲರೂ ಒಂದಾಗಿದ್ದಾರೆ. ಬೆಂಕಿ ಇಟ್ಟವರು, ಬೆಂಕಿ ಇಟ್ಟಿಸಿಕೊಂಡವರು ಕೈ ಮಿಲಾಯಿಸಿದ್ದಾರೆ. ಆದರೆ, ನಿಷ್ಠಾವಂತ ಕಾರ್ಯಕರ್ತರು ಎಂದೂ ನಮ್ಮ ಕೈಬಿಡುವುದಿಲ್ಲ. ಕಳೆದ ಬಾರಿಯಂತೆ ಈ ಚುನಾವಣೆಯನ್ನು ಕಾರ್ಯಕರ್ತರೇ ನಡೆಸಿ ಗೆಲುವು ತಂದುಕೊಡುತ್ತಾರೆ ಎಂದು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡರಾದ ಸುಬ್ಬಾಶಾಸ್ತ್ರಿ, ಸುಮಿತ್ರಮ್ಮ, ಶಿವಣ್ಣ, ಅಜಯ್ ದೇವೇಗೌಡ, ಪುಟ್ಟರಾಮಣ್ಣ, ಶಿವುಗೌಡ, ವೆಂಕಟರಂಗಯ್ಯ, ರಾಜಶೇಖರ್, ಜಯಕುಮಾರ್ ಮತ್ತಿತರರು ಹಾಜರಿದ್ದರು.