ಹನೂರು: ತಾಲ್ಲೂಕಿನ ಭದ್ರಳ್ಳಿ ಗ್ರಾಮದ ಸಣ್ಣಕಾಳ ಶೆಟ್ಟಿ ಎಂಬಾತನು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಉಡ ಬೇಟೆಯಾಡಿ ಕೊಂಡೊಯ್ಯುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಜರುಗಿದೆ.
ಕೌದಳ್ಳಿ ವನ್ಯಜೀವಿ ವಲಯ ವ್ಯಾಪ್ತಿಯ ವಲಯ ಅರಣ್ಯಾಧಿಕಾರಿ ಲೋಕೇಶ್ ಚೌಹಾಣ್, ಉಪವಲಯ ಅರಣ್ಯ ಅಧಿಕಾರಿ ಅನಂತರಾಮು .ಬಿ, ಗಸ್ತು ವನಫಲಕರಾದ ಭೀಮಪ್ಪ ಎಚ್ ದಾಸರ, ಶಿವರಾಜ್ ಡಿ, ಮಲ್ಲಿಕಾರ್ಜುನ ಭೀಮಪ್ಪ ಹಂಗರಗಿ, ಬಾಬು ಮತ್ತು ಕಳ್ಳ ಬೇಟೆ ಶಿಬಿರದ ಸಿಬ್ಬಂದಿಗಳಾದ ಬೆಟ್ಟಪ್ಪ, ಸಿದ್ದಪ್ಪಾಜಿ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವನ್ಯಜೀವಿ ವಲಯ ವ್ಯಾಪ್ತಿಯ ಕೌದಳ್ಳಿ ಗಸ್ತಿನ ಮುನಿಗುಡಿ ಬಯಲು ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ಮಾಡುತ್ತಿದ್ದ .
ಸಂದರ್ಭದಲ್ಲಿ ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಸಣ್ಣಕಾಳ ಶೆಟ್ಟಿ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಉಡ ಬೇಟೆಯಾಡಿ, ಕೊಂಡೊಯ್ಯುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಂದ್ರ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಕರಾಜುರವರ ಮಾರ್ಗದರ್ಶನದಲ್ಲಿ ಸದರಿಯವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯಿದೆಯಂತೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.