ಬ್ರಿಸ್ಪೇನ್: ಭಾರತ ಮತ್ತು ಆಸ್ಟೆçÃಲಿಯಾ ನಡುವೆ ನ. ೮ರಂದು ನಡೆದ ಟಿ೨೦ ಪಂದ್ಯ ಮಳೆಯಿAದಾಗಿ ರದ್ದಾಗಿದೆ. ಇದರ ಹೊರತಾಗಿಯೂ ಐದು ಪಂದ್ಯಗಳ ಈ ಸರಣಿಯನ್ನು ಭಾರತ ೨-೧ ಅಂತರದಲ್ಲಿ ಗೆದ್ದುಕೊAಡಿದೆ. ಮೊದಲ ಹಾಗೂ ಕಡೆಯ ಪಂದ್ಯವು ಮಳೆಯಿಂದಾಗಿ ಫಲಿತಾAಶ ರಹಿತವಾಗಿತ್ತು. ಉಳಿದ ಮೂರು ಪಂದ್ಯಗಳಲ್ಲಿ ಆಸ್ಟೆçÃಲಿಯಾ ಒಂದು ಗೆದ್ದಿದ್ದರೆ ಮತ್ತೆರಡನ್ನು ಭಾರತ ಗೆದ್ದಿದೆ.ಹಾಗಾಗಿ, ತಂಡವು ೨-೧ ಅಂತರದಲ್ಲಿ ಈ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಸರಣಿಯ ಫಲಿತಾಂಶವು ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಆತ್ಮವಿಶ್ವಾಸವನ್ನು ತಂದಿದೆ. ಇದು ಮುಂಬರುವ ಟಿ೨೦ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೊಸ ಉತ್ಸಾಹದಿಂದ ಭಾಗವಹಿಸಲು ಶಕ್ತಿ ತುಂಬಿದAತಾಗಿದೆ. ಅAದಹಾಗೆ, ಬ್ರಿಸ್ಪೇನ್ ನ ಗಬ್ಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಐದನೇ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ೪.೫ ಓವರ್ ಗಳವರೆಗೆ ೪೨ ರನ್ ಗಳಿಸಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ (೧೬ ಎಸೆತಗಳಲ್ಲಿ ೨೩ ರನ್) ಹಾಗೂ ಶುಭ್ಮನ್ ಗಿಲ್ (೧೬ ಎಸೆತಗಳಲ್ಲಿ ೨೯) ರನ್ ಗಳಿಸಿ ಆಡುತ್ತಿದ್ದರು. ಅಷ್ಟರಲ್ಲಿ ಮಳೆ ಬಂದ ಕಾರಣದಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ನಿಯಮಗಳ ಪ್ರಕಾರಮಳೆ ನಿಲ್ಲುವವರೆಗೆ ಕಾಯಲು ನಿರ್ಧರಿಸಲಾಗಿತ್ತಾದರೂ ಮಳೆರಾಯ ತನ್ನ ಲೀಲೆಯನ್ನು ಮುಂದುವರಿಸಿದ್ದ. ಅAತಿಮವಾಗಿ, ಎರಡು ಗಂಟೆಗಳ ಕಾಲ ಕಾಯ್ದರೂ ಮಳೆ ನಿಲ್ಲದ ಕಾರಣ, ಪಂದ್ಯವನ್ನು ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಪಂದ್ಯದ ನಂತರ ಮಾಧ್ಯಮಗಳೊAದಿಗೆ ಮಾತನಾಡಿದಅವರು, ಹವಾಮಾನ ಎಂಬುದು ನಮ್ಮ
ನಿಯಂತ್ರಣದಲ್ಲಿ ಇರೋದಿಲ್ಲ. ಪ್ರತಿಕೂಲ ಹವಾಮಾನದ ಹೊರತಾಗಿಯೂ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದಾಗಿ ನಾವು ಗೆಲುವು ಸಾಧಿಸಿದರು. ಬೌಲರ್ ಗಳು ವೇಗವಾಗಿ, ಸ್ಪಿನ್ ಮಾಡಿ ತಮ್ಮ ಕೈಚಳಕ ತೋರಿದ್ದರಿಂದಾಗಿ ನಾವು ಎರಡು ಪಂದ್ಯಗಳಲ್ಲಿ ಗೆದ್ದೆವು ಎಂದು ಹೇಳಿದರು.
ಭಾರತ ಟಿ೨೦ ತಂಡದ ನಾಯಕ
ಸೂರ್ಯಕುಮಾರ್ ಯಾದವ್ ಅವರು ಮೈದಾನದಲ್ಲಿ ಸಾಮಾನ್ಯವಾಗಿ ನಗುನಗುತ್ತಾ, ಸದಾ ಕೂಲ್ ಆಗಿ ಇರುತ್ತಾರೆ. ಅವರು ಸಿಟ್ಟು ಮಾಡಿಕೊಂಡು ಸಹ ಆಟಗಾರರನ್ನು ಬೈದಿದ್ದು ಅಪರೂಪ. ಆದರೆ, ಗುರುವಾರ ಆಸ್ಟೆçÃಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಶಿವA ದುಬೆ ಅವರನ್ನು ದಬಾಯಿಸಿದ್ದು ಎಲ್ಲರಲ್ಲೂ ಅಚ್ಚರಿ ತಂದಿದೆ. ಆತಿಥೇಯ ಆಸ್ಟೆçÃಲಿಯಾ ತಂಡದ ಇನ್ನಿಂಗ್ಸ್ನ ೧೨ನೇ ಓವರ್ನಲ್ಲಿ ನಡೆದ ಈ ಅನಿರೀಕ್ಷಿತ ಘಟನೆಯು ತೀವ್ರ ಚರ್ಚೆಗೆ ಕಾರಣವಾಗಿದೆ.



