ಹಾಸನ: ಜಿಲ್ಲೆಯಲ್ಲಿ ಎಟಿಎಂಗೆ ಹಣ ತುಂಬುವ ಖಾಸಗಿ ಸಂಸ್ಥೆಯಲ್ಲಿ ಭಾರೀ ಹಣ ದುರುಪಯೋಗ ಪ್ರಕರಣ ಬಯಲಾಗಿದ್ದು, ಮೂರು ಕೋಟಿಗೂ ಹೆಚ್ಚು ಹಣ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಫೆಬ್ರವರಿ ೧೮ ಮತ್ತು ೧೯ರಂದು ಸಂಸ್ಥೆಯಲ್ಲಿ ನಡೆಸಿದ ಮಾಸಿಕ ಆಡಿಟ್ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಹಾಸನ ಬಡಾವಣೆ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿಯಲ್ಲಿದ್ದ ಖಾಸಗಿ ಸಂಸ್ಥೆಯ ಸಿಬ್ಬಂದಿಗಳಾದ ನಂದೀಶ್ ಬಿ.ಎಲ್ ಹಾಗೂ ಮಧುಕುಮಾರ್ ಎಂ.ಪಿ ವಿರುದ್ಧ ಸುಮಾರು ೩ ಕೋಟಿ ೪೦ ಲಕ್ಷ ೨೮ ಸಾವಿರ ರೂ. ಲಪಟಾಯಿಸಿದ ಆರೋಪ ಕೇಳಿಬಂದಿದೆ. ೧೧ ಕೆನರಾ ಬ್ಯಾಂಕ್ ಎಟಿಎಂ,೩ ಎಸ್ ಬಿ ಐ ಎಟಿಎಂ ಮತ್ತು ೧ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಸೇರಿ ಒಟ್ಟೂ ೧೮ ಎಟಿಎಂಗಳಿಗೆ ಹಣ ಜಮಾ ಮಾಡಿದಂತೆ ಕೃತಕ ದಾಖಲೆ ಸೃಷ್ಟಿಸಿ, ವಾಸ್ತವವಾಗಿ ಹಣ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಾಸನ ನಗರ ವ್ಯಾಪ್ತಿಯ ವಿವಿಧ ಎಟಿಎಂ ಗೆ ಹಣವನ್ನೇ ಹಾಕದೆ ಹಣ ಹಾಕಿರೊದಾಗಿ ರೆಸಿಪ್ಟ್ ತೆಗೆದು ವಂಚನೆ ಆರೋಪ ಹಿನ್ನೆಲೆ ಸಿಎಂಎಸ್ ಸಂಸ್ಥೆಯ ಹಾಸನ ಶಾಖೆ ವ್ಯವಸ್ಥಾಪಕ ರಾಜು ಹಾಸನ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಎಟಿಎಂಗೆ ತುಂಬಬೇಕಿದ್ದ ಹಣ ನಾಪತ್ತೆ



