ಚಂದನವನದ ಅನುಭವಿ ತಂತ್ರಜ್ಘ ರಮೇಶ್ ಕಾಮತ್ ಗ್ಯಾಪ್ ನಂತರ ನಗ್ನಸತ್ಯ ಎಂಬ ಕೊಂಕಣಿ ಸಿನಿಮಾಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಿರಣ್ಮಯಿ ಪತಿಗೆ ಬೆಂಗಾವಲಾಗಿ ಆದಿತ್ಯ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಬನ್ನೇರುಘಟ್ಟದಲ್ಲಿರುವ ಗೋಡಂಬಿ ತಯಾರಿಕಾ ಕಾರ್ಖಾನೆಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಮೊದಲ ದೃಶ್ಯಕ್ಕೆ ಪರಿಸರವಾದಿ ಮತ್ತು ಹಿರಿಯ ನಟ ಸುರೇಶ್ ಹೆಬ್ಳಿಕರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಈ ಸುಸಂದರ್ಭದಲ್ಲಿ ಮಾಜಿ ವಿಧಾನಸಭಾ ಸದಸ್ಯ ಮೋಹನ್ ಕೊಂಡಜ್ಜಿ ಉಪಸ್ತಿತರಿದ್ದರು.
ಮುಖ್ಯ ಪಾತ್ರದಲ್ಲಿ ಆದ್ಯಾನಾಯಕ್. ಲೋಕಾಯುಕ್ತರಾಗಿ ಗಣೇಶ್ಪ್ರಭು. ಉಳಿದಂತೆ ಗೋಪಿನಾಥ್ಭಟ್, ಆನಂದ್ನಗರಕರ್, ಗೋಪಿಭಟ್, ವಿಶ್ವನಾಥ್ ಕಿಣಿ ಹಾಗೂ ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಂಗೀತ ಶ್ರೀಸುರೇಶ್, ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಕಲನ
ನಾಗೇಶ್.ಎನ್, ಸೌಂಡ್ ಇಂಜಿನಿಯರ್ ಪ್ರವೀಣ್ಜೋಗಿ ಅವರದಾಗಿದೆ. ಮೊನ್ನೆಯಷ್ಟೇ ರಾಷ್ಟç ಪ್ರಶಸ್ತಿ ಪಡೆದ ಚಿತ್ರದಲ್ಲಿ ಗುರುತಿಸಿಕೊಂಡಿದ್ದ ತಂತ್ರಜ್ಘರು ನಗ್ನಸತ್ಯದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ನಂತರ ಮಾತನಾಡಿದ ಸುರೇಶ್ ಹೆಬ್ಳಿಕರ್ ಶೀರ್ಷಿಕೆ ತುಂಬಾ ಚೆನ್ನಾಗಿದೆ. ಪ್ರಥಮ ಯಶಸ್ಸು ಇದರಲ್ಲೇ
ಸಿಕ್ಕಿದೆ. ಇದನ್ನು ಉತ್ತಮವಾಗಿ ಉಪಯೋಗಿಸಿಕೊಂಡರೆ ಕಮರ್ಷಿಯಲ್ ಆಗಿ ಸಾಧ್ಯವಾಗಿಸಬಹುದು.
ಕೊಂಕಣಿ ಸಣ್ಣ ಭಾಷೆಯಾದರೂ ಇತಿಹಾಸವಿದೆ. ಗಿರೀಶ್ಕಾರ್ನಡ್, ಯಶವಂತ್ ಚಿತ್ತಾರ, ಜಯಂತ್ ಕಾಯ್ಕಣಿ ಇಲ್ಲಿನವರೇ ಆಗಿದ್ದಾರೆ. ಸಿನಿಮಾ ಮಾಡಿ ಹೋಗೋದು ಅಲ್ಲ. ಇಂತಹ ವಿಷಯಗಳನ್ನು ಕೇಂದ್ರಿಕರಿಸುವುದು ಸೂಕ್ತ. ನೀವುಇದೆಲ್ಲಾವನ್ನು ಚಿತ್ರದಲ್ಲಿ ತೋರಿಸುತ್ತಿರಾ ಎನ್ನುವ ನಂಬಿಕೆ ಇದೆ. ಒಳ್ಳೆಯದಾಗಲಿ ಎಂದರು. ನಿರ್ದೇಶಕರು ಹೇಳುವಂತೆ ಕೆಲವು ವರ್ಷಗಳ ಹಿಂದೆ ಭೂಪಾಲ್ದಲ್ಲಿ ಮಹಿಳೆ ಮೇಲೆ ಶೋಷಣೆ ಮಾಡಿದ ಸುದ್ದಿ ಪ್ರಕಟವಾಗಿತ್ತು. ಇದರ ಒಂದು ಎಳೆಯನ್ನು ತೆಗೆದುಕೊಂಡು ಚಿತ್ರಕತೆ ಸಿದ್ದಪಡಿಸಲಾಗಿದೆ. ಸಂವಿಧಾನದಲ್ಲಿ ಕಾರ್ಯಾAಗ, ಶಾಸಕಾಂಗ, ನ್ಯಾಯಾಂಗ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸಮಾಜದಲ್ಲಿ ಹೆಣ್ಣುಮಗಳು ಹಿಂಸೆಗೆ ಗುರಿಯಾಗುತ್ತಾಳೆ. ಆಕೆ ಮೂರು ಅಂಗಗಳಿಗೂ ಹೋದರೂ ನ್ಯಾಯ ಸಿಗುವುದಿಲ್ಲ. ಮುಂದೆ ಇದರ ವಿರುದ್ದ ಹೋರಾಡಿ, ಸಮಾಜಕ್ಕೆ ಯಾವ ಎಚ್ಚರಿಕೆ ಕೊಡುತ್ತಾಳೆ ಎಂಬುದನ್ನು ಕುತೂಹಲದ ಮೂಲಕ ತೋರಿಸಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಸಿಂಕ್ ಸೌಂಡ್ದಲ್ಲಿ ಚಿತ್ರೀಕರಣ
ನಡೆಸಲಾಗುವುದು. ಕರ್ನಾಟಕದಲ್ಲಿ ಇಲ್ಲಿಯವರೆಗೂ ಇದನ್ನು ಸೇರಿಕೊಂಡು ೧೦ ಕೊಂಕಣಿ ಚಿತ್ರಗಳ ಬಂದಿದ್ದು, ಇದರಲ್ಲಿ ಐದು ನಾನು ನಿರ್ದೇಶನ ಮಾಡಿದ್ದೇನೆ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಅಂತ ರಮೇಶ್ ಕಾಮತ್ ಮಾಹಿತಿ ಹಂಚಿಕೊAಡರು.