ಆಸ್ಟೆçÃಲಿಯಾ ವಿರುದ್ಧದ ತವರಿನ ಸರಣಿಯಲ್ಲಿಅದ್ಭುತ ಪ್ರದರ್ಶನ ನೀಡಿದ ಭಾರತದ ಸ್ಟಾರ್ ಬ್ಯಾಟರ್ ಸ್ಮöÈತಿ ಮಂದಾನ ಐಸಿಸಿ ಮಹಿಳಾ ಏಕದಿನ ರ್ಯಾಂಕಿAಗ್ನಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರೀಗ ವೃತ್ತಿಜೀವನದ ಶ್ರೇಷ್ಠ ೮೧೮ ರೇಟಿಂಗ್ ಪಾಯಿAಟ್ಗಳನ್ನು ಕಲೆಹಾಕಿದ್ದಾರೆ.
೩ ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ ೧-೨ ರಿಂದ ಸೋತರೂ, ಮಂದಾನ ಎರಡು ಶತಕಗಳನ್ನು ಗಳಿಸಿ ಮಿಂಚಿದರು.
ಇದೇ ವೇಳೆ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಬೌಲರ್ ಗಳ ಪಟ್ಟಿಯಲ್ಲಿ ಎರಡು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ಏರಿದ್ದಾರೆ. ಸೆಪ್ಟೆಂಬರ್ ೩೦ ರಂದು ಗುವಾಹಟಿಯಲ್ಲಿ ಆರಂಭವಾಗಲಿರುವ ಮಹಿಳಾ ವಿಶ್ವಕಪ್ಗೆ ಭಾರತ ಸಿದ್ಧವಾಗುತ್ತಿರುವಾಗ ಹೊತ್ತಲ್ಲಿ ಇಬ್ಹರೂ
ಅದ್ಬುತ ಫಾರ್ಮ್ ನಲ್ಲಿರುವುದು ಭಾರತದ ಪಾಲಿಗೆ ಶುಭಸುದ್ದಿಯಾಗಿದೆ. ಆಸ್ಟೆçÃಲಿಯಾವಿರುದ್ಧ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ೫೮
ರನ್ ಗಳಿಸಿದ್ದ ಸ್ಮöÈತಿ, ಎರಡನೇ ಪಂದ್ಯದಲ್ಲಿ ೧೧೭ ರನ್ ಚಚ್ಚಿದ್ದರು. ೩ನೇ ಪಂದ್ಯದಲ್ಲಿ ೧೨೩ರನ್ ಗಳಿಸಿದ್ದ ಅವರಿಗೆ ಅರ್ಹವಾಗಿ ಸರಣಿ ಶ್ರೇಷ್ಠ
ಪ್ರಶಸ್ತಿ ಲಭಿಸಿತ್ತು.
ಭಾರತದ ಸ್ಪಿನ್ನರ್ದೀಪ್ತಿ ಶರ್ಮಾ ಆಸ್ಟೆçÃಲಿಯಾ ವಿರುದ್ಧ ಬೌಲಿಂಗ್ನಲ್ಲಿ ಶಿಸ್ತುಬದ್ಧ ಪ್ರದರ್ಶನ ನೀಡಿದ್ದಾರೆ. ಆಸ್ಟೆçÃಲಿಯಾ ವಿರುದ್ಧ ಅವರು ಸತತವಾಗಿ ಎರಡು ವಿಕೆಟ್ ಪಡೆದರು. ಇದರಿಂದ ಅವರು ೬೫೧ ಪಾಯಿಂಟ್ಗಳನ್ನು ಗಳಿಸಿದರು. ಭಾರತದ ಪ್ರಮುಖ ಸ್ಪಿನ್ ಬೌಲರ್ ಆಗಿ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ್ತಿ ಅಯಬೊಂಗ ಖಾಕಾ ಪಾಕಿಸ್ತಾನದ ವಿರುದ್ಧ ೨ ವಿಕೆಟ್ ಪಡೆದು ೩ ಸ್ಥಾನ ಮೇಲೇರಿ ೧೫ನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆAಡ್ನ ಸೋಫಿ ಎಕ್ಲೆಸ್ಟೋನ್ ೭೯೫ ಪಾಯಿಂಟ್ಗಳೊAದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಅವರು ಎರಡನೇ ಸ್ಥಾನದಲ್ಲಿರುವವರಿಗಿಂತ ೮೫ ಪಾಯಿಂಟ್ಗಳಷ್ಟು ಮುಂದಿದ್ದಾರೆ. ಇದೇ ವೇಳೆ ಆಸ್ಟೆçÃಲಿಯಾದ ತಜ್ಮಿನ್ ಬ್ರಿಟ್ಸ್ ೧೫ ಸ್ಥಾನ ಜಿಗಿದು ಆರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಸಿದ್ರಾ ಅಮಿನ್ ೧೦ ಸ್ಥಾನ ಮೇಲೇರಿ ೧೩ನೇ ಸ್ಥಾನದಲ್ಲಿದ್ದಾರೆ. ಮರಿಜಾನ್ ಕಪ್ ಅವರು ಆಲ್ ರೌಂಡರ್ಗಳ ಪಟ್ಟಿಯಲ್ಲಿ
ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.