ತಿ.ನರಸೀಪುರ: ನಾಗರೀಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದೆಂದು ಅಂಕನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಎನ್.ಶಿವಮಾದಯ್ಯ ತಿಳಿಸಿದರು.
ತಾಲ್ಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯತಿ ಹಿಂದಿನ ಅಧ್ಯಕ್ಷರಾದ ಡಿ ಎಂ ಸೋಮಶೇಖರ್ ರವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೆಡದ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ಎನ್. ಶಿವಮಾದಯ್ಯ ಈಗಾಗಲೇ ಬೇಸಿಗೆ ಬಿಸಿಲು ಜಾಸ್ತಿಯಾಗಿದ್ದು ಕೆರೆ ಕಟ್ಟೆಗಳು ಬತ್ತಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯ ಎದುರಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸ್ವಾಮಿಗೌಡ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚತೆ,ಬೀದಿ ದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗನ್ನು ಕಲ್ಪಿಸಬೇಕು ಹಾಗೂ ಜನರು ಅವರ ಕೆಲಸಗಳಿಗೆ ಪಂಚಾಯತಿಗೆ ಬಂದಾಗ ಅವರನ್ನು ಸೌಜನ್ಯದಿಂದ ಕಾಣಬೇಕು ಯಾವುದೇ ಕಾರಣಕ್ಕೂ ಅವರನ್ನು ಪದೆ ಪದೇ ಕಛೇರಿಗೆ ಅಲೆಸದೆ ಜರುರಾಗಿ ಅವರ ಕೆಲಸಗಳಿಗೆ ಸ್ಪಂದಿಸುವಂತೆ ಸಲಹೆ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜ್ಯೋತಿ,ಮಾಜಿ ಗ್ರಾ. ಪಂ. ಅಧ್ಯಕ್ಷ ಹಾಲಿಸದಸ್ಯ ಬಿ ಎಂ ಸೋಮ ಶೇಖರ್, ಶಿವಮ್ಮ, ಹೊಂಬಮ್ಮ, ನಿಂಗಯ್ಯ, ಜಯಲಕ್ಷ್ಮಿ,ಸವಿತಾ, ಸಂಗೀತ, ನಾಗರಾಜು, ಪುಟ್ಟಸ್ವಾಮಿ, ಪುಷ್ಪ, ಸವಿತಾ, ಚೆನ್ನಮ್ಮ,ಶಿವಮ್ಮ, ಶಂಕರ್ ಕುಮಾರ್, ಮಹೇಶ, ಮುಖಂಡರುಗಳಾದ ಕೆ ಸಿ ಮಾದೇವ್ ಮೆಣಸಿಕ್ಯಾತನಹಳ್ಳಿ ಮಹದೇವ್, ದೊರಸ್ವಾಮಿ ಮುದ್ದೇಗೌಡ, ಅಂಕನಹಳ್ಳಿ ಮಾದೇವ್ ಕರಿ ಹುರಳಿ ಕೊಪ್ಪಲು ಶಿವು, ದೊಡ್ಡ ಮುಲಗೂಡು ರಾಮಕೃಷ್ಣ, ಡಿಎಸ್ ಮಲ್ಲೇಶ್, ಅಶೋಕ್, ಪುರುಷೋತ್ತಮ್, ಮುಂತಾದವರು ಹಾಜರಿದ್ದರು.