ಭಾರತದ ಸ್ಟಾರ್ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ ಅವರು ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ೧೨ ರನ್ ಹೊಡೆಯುತ್ತಿದ್ದತೆ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಅವರ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಅವರೀಗ ೨೦೨೫ರ ಕ್ಯಾಲೆಂಡರ್ ವರ್ಷದಲ್ಲಿ ೯೮೨ ರನ್ ಗಳಿಸಿದ್ದು ಇದು ಮಹಿಳಾ ಕ್ರಿಕೆಟರ್ ಒಬ್ಬರ ಅತ್ಯುತ್ತಮ
ಸಾಧನೆಯಾಗಿದೆ. ಇನ್ನು ಅವರು ೧೮ ರನ್ ಗಳಿಸಿದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ೧೦೦೦ ರನ್ ಗಳಿಸಿದ ಪ್ರಥಮ ಆಟಗಾರ್ತಿಯೆಂಬ ಗೌರವಕ್ಕೂ ಪಾತ್ರರಾಗಲಿದ್ದಾರೆ.
ಇನ್ನೊಂದು ಮಹತ್ವದ ಮೈಲಿಗಲ್ಲು ಕೂಡ ಸ್ಮೃತಿ ಮಂದಾನ ಅವರ ಮುಂದಿದೆ. ಇನ್ನು ಅವರು ೫,೦೦೦ ಏಕದಿನ ರನ್ಗಳನ್ನು ತಲುಪಲು ಕೇವಲ ೫೮ ರನ್ ಗಳಷ್ಟೇ ಬೇಕಿದಗೆ. ಈ ಸಾಧನೆ ಮಾಡಿದರೆ, ಅವರು ಭಾರತದ ಪರ ಮಿಥಾಲಿ ರಾಜ್ ನಂತರ ಎರಡನೇ ಆಟಗಾರ್ತಿ ಮತ್ತು ವಿಶ್ವದ ಐದನೇ ಮಹಿಳಾ ಆಟಗಾರ್ತಿಯಾಗಲಿದ್ದಾರೆ.
ಇತ್ತೀಚೆಗಷ್ಟೇ ಅವರು ಐಸಿಸಿ ಶ್ರೇಯಾಂಕದಲ್ಲೂ ಹೊಸ ಇತಿಹಾಸ ನಿರ್ಮಿಸಿದ್ದರು. ಗುರುವಾರ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಲೀಗ್ ಪಂದ್ಯದಲ್ಲಿ
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ ಅವರು ಹರ್ಮನ್ ಪ್ರೀತ್ ಕೌರ್ ಬಳಗವನ್ನು ಬ್ಯಾಟಿಂಗ್ ಗೆ ಇಳಿಸಿದರು.
ಸ್ಮೃತಿ ಮಂದಾನ ಮತ್ತು ಪ್ರತೀಕಾ ರಾವಲ್ ಅವರು ಮೊದಲ ವಿಕೆಟ್ಗೆ ೫೫ ರನ್ಗಳಿಸಿದರು. ಪ್ರತೀಕಾ ಅವರು ಆರಂಭದ ಎಸೆತದಲ್ಲೇ ಬೌಂಡರಿ ಬಾರಿಸಿ
ದಕ್ಷಿಣ ಆಫ್ರಿಕಾಗೆ ತನ್ನ ಇರಾದೆ ಸ್ಪಷ್ಟಪಡಿಸಿದರು. ಅವರು ನಿರಂತರವಾಗಿ ಆಫ್ರಿಕಾದ ಬೌಲರ್ ಗಳ ವಿರುದ್ಧ ದಂಡೆತ್ತಿ ಹೋದರು. ಮತ್ತೊಂದು ಬದಿಯಲ್ಲಿ ಸ್ಮೃತಿ ಮಂದಾನ ಅವರು ಕಷ್ಟಪಟ್ಟರೂ ಲಯಕ್ಕೆ ಮರಳುತ್ತಿದ್ದಂತೆ ಔಚಾದರು. ಅದಾಗಲೇ ಒಂದು ಸಿಕ್ಸರ್ ಹೊಡೆದಿದ್ದ ಅವರು ಎಂಲಾಬಾ ಬೌಲಿAಗ್ ನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಲಾಂಗ್ ಆನ್ ನಲ್ಲಿದ್ದ ಲೂಸ್ ಗೆ ಸುಲಭ ಕ್ಯಾಚಿತ್ತು ಔಟಾದರು. ಇದಕ್ಕೂ ಮೊದಲು ಅವರು ೩೨ ಎಸೆತದಲ್ಲಿ ೨೩ ರನ್ ಗಳಿಸಿದ್ದರು.
೨೦೨೫ ರಲ್ಲಿ ಅವರ ಒಟ್ಟಾರೆ ಪ್ರದರ್ಶನ ಅತ್ಯುತ್ತಮವಾಗಿದೆ. ೧೭ ಪಂದ್ಯಗಳಲ್ಲಿ ೯೮೨ ರನ್ ಗಳಿದ್ದಾರೆ. ಇದರಲ್ಲಿ ನಾಲ್ಕು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಇನ್ನು ಭಾರತ ತಂಡ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದು ೪ ಅಂಕಗಳೊAದಿಗೆ ೩ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಲ್ಲಿ ಪ್ರಥಮ ಸ್ಥಾನಕ್ಕೇರಲಿದ್ದಾರೆ.