ಬೆಂಗಳೂರು: ಬೆಂಗಳೂರಿನಲ್ಲಿ ಉತ್ಸಾಹಭರಿತ ವಾತಾವರಣದ ನಡುವೆ, ಎಸ್ಎಫ್ಎ ಚಾಂಪಿಯನ್ಶಿಪ್ನ ಉದ್ಘಾಟನಾ ಆವೃತ್ತಿಯು ಖೋ-ಖೋ ಸ್ಪರ್ಧೆ ಆರಂಭದೊಂದಿದೆ 11ನೇ ದಿನಕ್ಕೆ ಕಾಲಿಟ್ಟಿದೆ. ನಗರದ ಉದಯೋನ್ಮುಖ ಕ್ರೀಡಾಪಟುಗಳು ಚೆಸ್, ಬಾಸ್ಕೆಟ್ಬಾಲ್, ಫುಟ್ಬಾಲ್, ಖೋ-ಖೋ ಮತ್ತು ಇತ್ಯಾದಿ ಕ್ರೀಡೆಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ನಾಳೆ ಬೆಂಗಳೂರಿನಲ್ಲಿ ಎಸ್ಎಫ್ಎ ಚಾಂಪಿಯನ್ಶಿಪ್ನ 1ನೇ ಆವೃತ್ತಿಯ ಮುಕ್ತಾಯ ಆಗಲಿದೆ. ಮುಕ್ತಾಯ ಸಮಾರಂಭದಲ್ಲಿ ನಗರದ ‘ಕ್ರೀಡೆಯಲ್ಲಿ ನಂಬರ್ ಒನ್ ಶಾಲೆ’ ಯಾವುದು ಎಂಬುದು ಬಹಿರಂಗಗೊಳ್ಳಲಿದೆ. ಹೆಚ್ಚುವರಿಯಾಗಿ, ‘ಗೋಲ್ಡನ್ ಬಾಯ್’ ಮತ್ತು ‘ಗೋಲ್ಡನ್ ಗರ್ಲ್’ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜೊತೆಗೆ ಬಹು-ಕ್ರೀಡೆಗಳಲ್ಲಿ ಸ್ಥಾನಗಳನ್ನು ಗೆದ್ದ ಯುವ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸಲಾಗುತ್ತದೆ.
ಇಂದಿನ ದಿನದ ಮುಖ್ಯಾಂಶ ಏನೆಂದರೆ ಖೋ-ಖೋ ಸ್ಪರ್ಧೆಗಳು. ಅಂಡರ್-14 ಹುಡುಗರು ಮತ್ತು ಹುಡುಗಿಯರ ಉತ್ಸಾಹಭರಿತ ಭಾಗವಹಿಸುವಿಕೆ ಮತ್ತು ಅಂಡರ್-18 ಹುಡುಗರ ವಿಭಾಗದ ಸ್ಪರ್ಧೆಗೆ ಈ ದಿನ ಸಾಕ್ಷಿಯಾಯಿತು.ಈ ರೋಮಾಂಚಕ ಕ್ರೀಡಾ ವಾತಾವರಣದಲ್ಲಿ, ದೆಹಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಪೂರ್ವ ನಿರ್ವಿವಾದವಾಗಿ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮಿದೆ. ಆ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್, ಚೆಸ್, ಕರಾಟೆ, ಥ್ರೋಬಾಲ್ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಯಲಹಂಕದ ವಿದ್ಯಾಶಿಲ್ಪ್ ಅಕಾಡೆಮಿಯು ಬಾಸ್ಕೆಟ್ಬಾಲ್, ಈಜು, ಟೇಬಲ್ ಟೆನಿಸ್ ಮತ್ತು ವಾಲಿಬಾಲ್ನಲ್ಲಿ ಉತ್ತಮ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಜೊತೆಗೆ, ಡೆಲ್ಲಿ ಪಬ್ಲಿಕ್ ಸ್ಕೂಲ್ ಎಲೆಕ್ಟ್ರಾನಿಕ್ ಸಿಟಿ, ಬ್ಯಾಡ್ಮಿಂಟನ್, ಚೆಸ್, ಶೂಟಿಂಗ್, ಕರಾಟೆ, ಟೇಬಲ್ ಟೆನಿಸ್ ಮತ್ತು ಸ್ಪೀಡ್ಕ್ಯೂಬಿಂಗ್ನಲ್ಲಿ ಉತ್ತಮ ಸಾಧನೆಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಿದೆ. ಈ ಅಗ್ರ ಮೂರು ಶಾಲೆಗಳು ವಿವಿಧ ಕ್ರೀಡೆಗಳಲ್ಲಿ ಸಾಮೂಹಿಕವಾಗಿ ಪ್ರಾಬಲ್ಯ ಸಾಧಿಸಿವೆ, ಅಥ್ಲೆಟಿಕ್ ಶ್ರೇಷ್ಠತೆ ಮತ್ತು ಸುಸಜ್ಜಿತ ಕ್ರೀಡಾ ಸಾಧನೆಗಳೆಡೆಗಿನ ಬದ್ಧತೆಯನ್ನು ತೋರಿಸಿವೆ.