ರಾಮನಗರ: ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಎಲ್ಲ ಶೋಷಿತ ವರ್ಗಗಳು ಒಗ್ಗಟ್ಟಿನ ಪ್ರದರ್ಶನ ಮಾಡಿ ಕಾಂಗ್ರೆಸ್ ಪಕ್ಷ ಬೆಂಬಲಿಸುವ ತೀರ್ಮಾನ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.ನಗರದಲ್ಲಿ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ವತಿಯಿಂದ ನಡೆದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿ ರುವ ಬಿಜೆಪಿ ಸರ್ಕಾರ ಶೋಷಿತ ಸಮುದಾಯವನ್ನು ಕೀಳು ಮಟ್ಟದಲ್ಲಿ ನೋಡುತ್ತಿದೆ. ದೇಶದಲ್ಲಿ ಕೋಮುವಾದಿ ಹಾಗೂ ಶೋಷಿತ ಸಮಾಜದ ವಿರೋಧಿ ಬಿಜೆಪಿಯನ್ನು ಸೋಲಿಸಲು ರಾಮಚಂದ್ರಪ್ಪ, ಮಾವಳ್ಳಿ ಶಂಕರ್ ಹಾಗೂ ಎಲ್ಲ ಪ್ರಮುಖರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತ ಸಂವಿಧಾನದ ಉಳಿವಿಗಾಗಿ ಹೋರಾಟ ನಡೆಸುತ್ತಿರುವವರಿಗೆ ನಾವು ಸಹಕಾರ ನೀಡೋಣ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರು ಹಿಂದುಳಿದ ವರ್ಗದ ಜನರಿಗೆ ನಿವೇಶನಕ್ಕೆ ಜಾಗ ಗುರ್ತಿಸು ವುದು, ಸ್ಮಶಾನಕ್ಕೆ ಜಾಗ ಮಂಜೂರು, ನಿವೇಶನಕ್ಕೆ ಕ್ರಮ ವಹಿಸುವುದು ಸೇರಿದಂತೆ ಶೋಷಿತರ ಸಮುದಾಯದ ಸಮಸ್ಯೆಗಳ ಬಗ್ಗೆ ಗಂಬೀರವಾಗಿ ಚರ್ಚೆ ನಡೆಸಿ, ಅಜಾತ ಶತ್ರುವಾಗಿ ಶಾಶ್ವತ ಕೆಲಸಗಳನ್ನು ನಿಮ್ಮ ಸಹೋದರನಂತೆ ಕೆಲಸ ಮಾಡುತ್ತಾ, ರಾಜ್ಯದ ಜನರ ಧ್ವನಿಯಾಗುವ ಕೆಲಸ ಮಾಡುತ್ತಿರುವ ಸಂಸದರಾದ ಡಿ.ಕೆ.ಸುರೇಶ್ ಅವರನ್ನು ನಾಲ್ಕನೇ ಬಾರಿಗೆ ಆಯ್ಕೆ ಮಾಡಿಕೊಳ್ಳುವಲ್ಲಿ ನಿಮ್ಮೆಲ್ಲರ ಒಗ್ಗಟ್ಟಿನ ಸಂದೇಶ ಪ್ರಮುಖ ವಾಗಿದೆ ಎಂದರು.
ಎಂಇಐ ಮಾಜಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ.ಶೇಷಾದ್ರಿ ಮಾತನಾಡಿ ಸರ್ಕಾರ ಯಾವುದೇ ಇರಲಿ ಹಿಂದುಳಿದ ವರ್ಗದ ಶೋಷಿತ ಸಮುದಾ ಯಕ್ಕೆ ತೊಂದರೆ ಯಾದಾಗ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಒಕ್ಕೂಟದ ಪ್ರತಿನಿಧಿಗಳು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಕಾಂತರಾಜು ವರದಿ ಸ್ವೀಕಾರ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ.
ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿ ಎಂದು ಕೇಳುತ್ತಿರುವುದರ ಹಿಂದೆ ದುರುದ್ದೇಶವಿದೆ. ಅದರ ಅನುಷ್ಟಾನಕ್ಕೆ ಸಂಸತ್ತಿನಲ್ಲಿ ಮೂರನೇ ಒಂದು ಭಾಗ ಬೆಂಬಲ ಬೇಕಿರುವುದರಿಂದ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮಾತನಾಡುತ್ತಿದ್ದಾರೆ ಎಂದರು.ಸಂಸದ ಡಿ.ಕೆ.ಸುರೇಶ್ ಸೋಲಿಸಲು ಅಮಿತ್ ಷಾ ಸೇರಿ ರಾಷ್ಟ್ರಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಆಗಾಗಿ ಶೋಷಿತ ಸಮುದಾಯ ಗಳು ಒಗ್ಗಟ್ಟಾಗಿ ಸುರೇಶ್ ಬೆಂಬಲಕ್ಕೆ ನಿಲ್ಲುವ ತೀರ್ಮಾನ ಮಾಡಿ, ಬಿಜೆಪಿ ಸೋಲಿಸಲು ಪಣ ತೊಡೋಣ ಎಂದರು.
ಕರ್ನಾಟಕ ಶೋಷಿತ ವರ್ಗಗಳ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ರಾಮಚಂದ್ರಯ್ಯ, ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಿರ್ದೇಶಕ ಪರ್ವಿಜ್ ಪಾಷ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ರಂಗಪ್ಪ, ಒಕ್ಕೂಟದ ವೆಂಕಟೇಶ್, ನಾಯ್ಡು, ಆದರ್ಶ್ ಎಲ್ಲಪ್ಪ, ಸುಬ್ಬಣ್ಣ ಮತ್ತಿತರರು ಇದ್ದರು.