ಏನ್ಸಿಯಂಟ್ ಒಲಿಂಪಿಯಾ (ಗ್ರೀಸ್): ಪ್ಯಾರಿಸ್ ಒಲಿಂಪಿಕ್ ಕ್ರೀಡಾಜ್ಯೋತಿ ಸಂಪ್ರದಾಯದಂತೆ ದಕ್ಷಿಣ ಗ್ರೀಸ್ನ ಪುರಾತನ ಒಲಿಂಪಿಯಾದಲ್ಲಿ ಮಂಗಳವಾರ ಬೆಳಗಲ್ಪಟ್ಟಿತು.ಸೋಮವಾರದ ಪೂರ್ವಾಭ್ಯಾಸದ ವೇಳೆ ಗ್ರೀಕ್ ನಟಿ ಮೇರಿ ಮಿನಾ ಅವರು ಪ್ಯಾರಾಬೋಲಿಕ್ ಪಾಲಿಶ್ ಮಾಡಿದ ಕನ್ನಡಿಯ ನೆರವಿನಿಂದ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸಿ,
ಬಳಿಕ ಇದನ್ನು 2020ರ ಒಲಿಂಪಿಕ್ ರೋಯಿಂಗ್ ಚಾಂಪಿಯನ್ ಸ್ಟೆಫನಸ್ ನೌಸ್ಕೊಸ್ಗೆ ಹಸ್ತಾಂತರಿಸಿದ್ದರು.ಮಂಗಳವಾರ ಮೋಡ ಕವಿದ ವಾತಾವರಣ ಇದುದ್ದರಿಂದ, ಗ್ರೀಕ್ನ ಸೂರ್ಯದೇವರಾದ ಅಪೋಲೊ ಪ್ರತ್ಯಕ್ಷನಾಗಲಿಲ್ಲ. ಹೀಗಾಗಿ ಸಾಂಕೇತಿಕವಾಗಿ ಅಪೋಲೊವನ್ನು ಪ್ರಾರ್ಥಿಸಲಾಯಿತು. ಬಳಿಕ ಸೋಮವಾರದ ಅಂತಿಮ ರಿಹರ್ಸಲ್ ವೇಳೆ ಬೆಳಗಿದ ಜ್ಯೋತಿಯನ್ನೇ ರಿಲೇಗೆ ಬಳಸಿಕೊಳ್ಳಲಾಯಿತು. ಆದರೆ ಈ ಕಾರ್ಯಕ್ರಮ ಮುಗಿದ ಬಳಿಕ ಸೂರ್ಯ ಬೆಳಗಿದ!