ಬೆಂಗಳೂರು: ವಿಮೆ ಇಲ್ಲದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರ ಆದಿತ್ಯರನ್ನು ಕೂರಿಸಿಕೊಂಡು ಚಲಾಯಿಸುವ ಸಮಯದಲ್ಲಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಅಮರಾವತಮ್ಮ(40) ಕೆಆರ್ ಪುರಂ ಸ್ಪೆಶಾಲಿಟಿ ಹಾಸ್ಪಿಟಲ್ನಲ್ಲಿ ಮೃತಪಟ್ಟಿದ್ದು, ಈ ಸಂಬಂಧ ನ್ಯಾಯಾಲಯ ಆರೋಪಿ ಸಲೀಂ(28) ಈತನಿಗೆ 13500 ದಂಡ ಹಾಗೂ 3 ತಿಂಗಳು ಸಜೆ ಘೋಷಿಸಿರುತ್ತದೆ.
2015 ಆಗಸ್ಟ್ ತಿಂಗಳಲ್ಲಿ ರಾತ್ರಿ 7.30 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಕೆಆರ್ ಪುರ ಸಂಚಾರಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ ಪರಿಣಾಮ ನ್ಯಾಯಾಲಯ ಆರೋಪಿ ಸಲೀಂ ಮತ್ತು ವಾಹನ ಮಾಲೀಕ ರಾಣಿ ಸುಬ್ರಹ್ಮಣ್ಯಂ ರವರಿಗೂ ಸಹ ನ್ಯಾಯಾಲಯ 2000 ದಂಡ ವಿದಿಸಿ, ದಂಡ ಕಟ್ಟಲು ತಪ್ಪಿದ್ದಲ್ಲಿ 30 ದಿನಗಳ ಸಾದಾ ಜೈಲುವಾಸವನ್ನು ಘೋಷಿಸಿರುತ್ತದೆ.