ನೆಲಮಂಗಲ: ಎತ್ತಿನ ಹೊಳೆ ಯೋಜನೆಯಿಂದ ನೆಲಮಂಗಲದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗುತ್ತದೆ. ಈ ಯೋಜನೆಗಾಗಿ ನಾವುಗಳು ಸಾಕಷ್ಟು ಶ್ರಮ ಪಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯಿಲಿ ಹೇಳಿದರು.
ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘ ನೆಲಮಂಗಲದ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಪ್ರತಿಭಾವನಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೂ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮನುಷ್ಯ ತನ್ನಷ್ಟಕ್ಕೆ ತಾನು ಬದುಕಿದರೆ ಇದ್ದು ಸತ್ತಂತೆ ಆದರೆ ಇನ್ನೊಬ್ಬರಿಗಾಗಿ ಬದುಕಿದರೆ ಅದು ಸ್ವಾರ್ಥಕತೆ. ಬೋವಿ ಸಮಾಜದ ಜನ ಶ್ರಮಜೀವಿಗಳು. ಅವರ ನಿತ್ಯ ಜೀವನದ ಬದುಕನ್ನ ನಾನು ಅರಿತುಕೊಂಡಿದ್ದೇನೆ ಬೋವಿ ಸಮಾಜದ ಮೀಸಲಾತಿ ವಿಷಯದಲ್ಲಿ ಅನೇಕ ಬಾರಿ ಕೇಂದ್ರದಲ್ಲಿ ಕೂಡ ಧ್ವನಿಯುತ್ತಿದ್ದೇನೆ .
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಾಗಿ ದೊಡ್ಡ ಮೊತ್ತವನ್ನು ನೀಡುತ್ತಿರುವ ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘ ಅಧ್ಯಕ್ಷರಾದ ಗಂಗಾಧರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಡಾ ಚೌಡಯ್ಯ, ನವರ ನೇತೃತ್ವದಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಎಂದ ಅವರು ತಮ್ಮ ತಾಯಿಯೊಂದಿಗೆ ಒಡನಾಟದ ನೆನಪುಗಳನ್ನ ಮೆಲುಕು ಹಾಕಿದರು.
ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘ ಅಧ್ಯಕ್ಷರಾದ ಗಂಗಾಧರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೀರಪ್ಪ ಮೊಯ್ಲಿ ಅವರ ಸಾಹಿತಿಕ ಬದುಕಿನ ಬಗ್ಗೆ ಮಾತನಾಡುತ್ತಾ ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘ ನಡೆದು ಬಂದ ದಾರಿಯ ಬಗ್ಗೆ ವಿವರಿಸುತ್ತಾ ಸತತ ಆರು ವರ್ಷಗಳಿಂದ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ ಎಂದರು . ಈ ಸಂಘದ ಪ್ರಧಾನ ಕಾರ್ಯದರ್ಶಿ ಡಾ ಚೌಡಯ್ಯ ಲೇಖಕರು ಎಲ್ಲರನ್ನ ಸ್ವಾಗತಿಸಿ .
ಎತ್ತಿನಹೊಳೆ ಯೋಜನೆ ಬರದ ನಾಡಿಗೆ ಬಾರಮ್ಮ ನೇತ್ರಾವತಿ ಎಂಬ ಕೃತಿಯ ಬಗ್ಗೆ ಮಾಹಿತಿ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಭೋವಿ ಸಮಾಜದ ಬಂಧುಗಳೊಂದಿಗೆ ನಾನು ಇದ್ದೇನೆ ಎಂದು ನೆಲಮಂಗಲದ ಶಾಸಕ ಎನ್ ಶ್ರೀನಿವಾಸ್ ಹೇಳಿದರು.
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು . ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನೆಲಮಂಗಲದ ಯೋಧರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು . ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ,ವಿ ನಾಗರಾಜ್, ಡಾ ಎಂ,ಟಿ ಮಲ್ಲೇಶ್ . ವಿ ರಾಜಣ್ಣ. ನಿತ್ಯಾನಂದ ಕುಮಾರ, ಎ ಗೋಪಾಲ. ಹಾಗೂ ನಾನಾ ಜಿಲ್ಲೆಗಳಿಂದ ಸಮಾಜದ ಮುಖಂಡರುಗಳು ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.