ಮಾಗಡಿ: ನನ್ನ ರಾಜಕೀಯು ಪುರಸಭಾ ಸದಸ್ಯನಿಂದ ಪ್ರಾರಂಭವಾಗಿದ್ದು ಇದಕ್ಕೆ ಅತಿ ಹೆಚ್ಚಿನ ಶಕ್ತಿ ತುಂಬಿದವರು ಹೊಂಬಾಳಮ್ಮನ ಪೇಟೆಯ ತಿಗಳ ಸಮುದಾಯದವರು ಎಂದು ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಹೇಳಿದರು.
ಪಟ್ಟಣದ ಹೊಂಬಾಳಮ್ಮನಪೇಟೆಯ ಕೆರೆಯ ಬಳಿಯಲ್ಲಿ ತಾಲ್ಲೂಕು ಅಗ್ನಿ ಬನ್ನಿರಾಯಸ್ವಾಮಿ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾಭಿವೃದ್ದಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಅವರು ನಾನು ಎರಡು ಭಾರಿ ಶಾಸಕನಾಗಿ ಒಂದು ಭಾರಿ ಎಂ.ಎಲ್.ಸಿ.ಯಾಗಿ ಮೂರು ಭಾರಿ ಸಂಪುಟ ದರ್ಜೆಯ ಮಂತ್ರಿಯಾಗಿ ಇಂದು ರಾಜ್ಯ ಮಟ್ಟದಲ್ಲಿ ನನ್ನ ಹೆಸರು ಇದೆ ಎಂದರೆ ಅದಕ್ಕೆ ಹೊಂಬಾಳಮ್ಮನಪೇಟೆ, ಹೊಸಪೇಟೆ, ಎನ್.ಇ.ಎಸ್.ಜನರ ಆಶೀರ್ವಾದ ಕಾರಣವಾಗಿದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು ಪುರಸಭಾಸದಸ್ಯನಿಂದ ನಾನು ಪುರಸಭಾ ಸದಸ್ಯನಾಗಿ ಅದ್ಯಕ್ಷನಾಗಲು ಮೂಲ ಕಾರಣಕರ್ತರು ಈ ಭಾಗದ ಜನರಾಗಿದ್ದಾರೆ.ಇವರ ಋಣ ತೀರಿಸಲು ಸಾದ್ಯವಿಲ್ಲ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಿಗಳ ಸಮುದಾಯವಿದೆ.ಈ ಸಮುದಾಯವು ಸಮಾಜದ ಮುನ್ನೆಲೆಗೆ ಬರಬೇಕಾದರೆ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಈ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಸಿಗಬೇಕು. ಈ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಅವರು ರಾಜ್ಯ ಸರಕಾರದಿಂದ ವಿವಿಧ ಇಲಾಖೆಗಳಲ್ಲಿ ನಾಮ ನಿರ್ದೇಶನ ಮಾಡುವ ಅವಕಾಶವಿದ್ದು ತಿಗಳ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಂಡು ಅವರಿಗೆ ರಾಜಕೀಯ ಸ್ಥಾನಮಾನ ನೀಡಲು ಮನವಿ ಮಾಡುವುದಾಗಿ ರೇವಣ್ಣ ತಿಳಿಸಿದರು.
ಎಂ.ಎಲ್.ಸಿ.ಅ.ದೇವೇಗೌಡ, ಪುರಸಭಾ ಸದಸ್ಯರಾದ ಜಯರಾಂ, ಹೊಸಪೇಟೆ ಅಶ್ವತ್, ರಾಮಣ್ಣ, ಭಾಗ್ಯಮ್ಮ, ಪುರಸಭಾ ಮಾಜಿ ಅದ್ಯಕ್ಷೆ ಜಯಲಕ್ಷ್ಮಿ ರೇವಣ್ಣ, ಮಾಜಿ ಸದಸ್ಯ ಶಂಕರ್, ಸಂಘದ ಗೌರವಾದ್ಯಕ್ಷ ರಂಗಸ್ವಾಮಯ್ಯ, ಅದ್ಯಕ್ಷ ರಂಗಪ್ಪ, ಉಪಾಧ್ಯಕ್ಷ ಗಂಗರೇವಣ್ಣ, ಪ್ರಧಾನ ಕಾರ್ಯದರ್ಶಿ ಸುರೇಶ್, ಖಜಾಂಚಿ ಪಿ.ಜಯರಾಂ, ಕಾರ್ಯದರ್ಶಿ ಶಿವಶಂಕರ್, ಕಬಡ್ಡಿ ರಮೇಶ್, ರೈತಸಂಘದ ಯುವಘಟಕದ ಅದ್ಯಕ್ಷ ರವಿಕುಮಾರ್ ಸೇರಿದಂತೆ ಮತ್ತಿತರಿದ್ದರು.