ಬೆಂಗಳೂರು: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಜೋಡುಗಟ್ಟಿ ಗ್ರಾಮದಲ್ಲಿ ಮುನಿರಾಜು (55) ಎಂಬುವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಮೃತ ಮುನಿರಾಜುರವರು ವ್ಯವಸಾಯ ಮಾಡಿಕೊಂಡಿರುತ್ತಾರೆ.ಇತ್ತೀಚೆಗೆ ಮಗಳಿಗೆ ಮದುವೆ ಮಾಡಿದ್ದ ಹಿನ್ನೆಲೆಯಲ್ಲಿ ಮಗಳು ಮತ್ತು ಅಳಿಯನಿಗೆ ಆಗಾಗ ಗಲಾಟೆ ಆಗುತ್ತಿತ್ತು. ಸುಮಾರು ಸರಿ ಕರೆದು ಬುದ್ಧಿವಾದ ಹೇಳಿದರೂ ಮತ್ತೆ ಮತ್ತೆ ಗಲಾಟೆ ಸಂಭವಿಸುತ್ತಿತ್ತು ಎಂದು ಮೃತ ಮುನಿರಾಜು ಕಡೆಯವರು ದೂರು ದಾಖಲಿಸಿರುತ್ತಾರೆ.
ಮಗಳು ಅಳಿಯನ ಗಲಾಟೆ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿಸಿರುತ್ತಾರೆ.