ಬೆಂಗಳೂರು: ಮಾರತಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮೊನ್ನೆ ರಾತ್ರಿ ಲ್ಯಾಪ್ಟಾಪ್ ಕದಿಯಲ್ಲೂ ಬಂದ ಕಳ್ಳ ಮೂರನೇ ಮಾಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮಾರತಳ್ಳಿಯಲ್ಲಿರುವ ವೇಣು ಪಿಜಿ ಕಟ್ಟಡದಲ್ಲಿ ಮೊನ್ನೆ ಮಧ್ಯರಾತ್ರಿ ಎರಡನೇ ಮಹಡಿಯಲ್ಲಿ ಎರಡು ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಮೃತ ವಿಕ್ರಂ(23), ಶಂಕರ್ ಪುರ ವಿಕೋಟ ನಿವಾಸಿಯಾಗಿದ್ದು, ಮೊದಲು ಎರಡನೇ ಮಹಡಿಯಲ್ಲಿ ಎರಡು ಲ್ಯಾಪ್ಟಾಪ್ ಕಳ್ಳತನ ಮಾಡಿ ನಂತರ ಮೂರನೇ ಮಹಡಿಯಲ್ಲಿಯೂ ಲ್ಯಾಪ್ಟಾಪ್ ಕಳವು ಮಾಡಲು ಹೋದಾಗ ಪಿಜಿಯಲ್ಲಿ ಮಲಗಿರುವವರಿಗೆ ಎಚ್ಚರಿಕೆಯಾಗಿದೆ.
ಈತನು ಎಲ್ಲಿ ಸಿಕ್ಕಿ ಬೀಳುತ್ತೇನೋ ಎಂಬ ಭಯದಿಂದ ಮೂರನೇ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಕಾಂಪೌಂಡ್ಗೆ ತಲೆತಾಗಿ ಬಿದ್ದು ತೀವ್ರ ತರದ ಗಾಯಗಳಾಗಿವೆ.ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಪಿಜಿ ಮಾಲೀಕರು ದಾಖಲು ಮಾಡಿರುತ್ತಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಮಾರತಳ್ಳಿ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿರುತ್ತಾರೆ ಎಂದು ವೈಟ್ ಫೀಲ್ಡ್ ಡಿಸಿಪಿ ತಿಳಿಸಿರುತ್ತಾರೆ.