ಬೆಂಗಳೂರು: ಬಸವೇಶ್ವರನಗರ ಪೊಲೀಸರು ಎನ್ ಜಿ ಸಿ ಎಸ್ ಲೇಔಟ್ ನ ಮನೆಯಲ್ಲಿ ಏಪ್ರಿಲ್ 14 ರಂದು ಕಳವಾಗಿದ್ದ ಆರೋಪದ ಮೇರೆಗೆ ಗಾಯತ್ರಿ(43), ಮತ್ತು ಆನಂದ್(32) ಕಮಲಾನಗರ ನಿವಾಸಿ, ಪಿರಿಯಾದುದಾರರ ಮನೆಯ ಕೆಲಸ ಮಾಡುತ್ತಿದ್ದವರನ್ನು ಬಂಧಿಸಿರುತ್ತಾರೆ.
ಆರೋಪಿ ಮಹಿಳೆ ಪಿರಿಯಾದುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದು ಮನೆಯಲ್ಲಿಟ್ಟಿದ್ದ ನಾಲ್ಕು ಲಕ್ಷ ರೂ ಬೆಲೆಬಾಳುವ 66 ಗ್ರಾಂ ಚಿನ್ನಾಭರಣಗಳು ಮತ್ತು 166 ಗ್ರಾಂ ಬೆಳ್ಳಿ ಆಭರಣಗಳು ಕಳವು ಮಾಡಿ ತಲೆಮರೆಸಿಕೊಂಡಿದ್ದಳು.ಈಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.