ಬೆಂಗಳೂರು: ಕಳೆದ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದ ಟಿಕೆಟ್ ಮಿಸ್ ಮಾಡಿಕೊಂಡಿರುವ ಪ್ರತಾಪ್ ಸಿಂಹ.
ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ, ಸದನದಲ್ಲಿ ಆದ ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಸ್ಮೋಕ್ ಬಾಂಬ್ ಸ್ಫೋಟಿಸಿದ್ದು, ಮೈಸೂರು ಮೂಲದವರಾಗಿದ್ದು, ಅವರಿಗೆ ಪಾಸ್ ವಿತರಿಸಿದ್ದೇ ಪ್ರತಾಪ್ ಸಿಂಹ ಎಂಬುದು ಸಾಬೀತಾಗಿತ್ತು. ಹೀಗಾಗಿ, ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಬಿಜೆಪಿ ಹೈಕಮಾಂಡ್ ನಾಯಕರು ಟಿಕೆಟ್ ನಿರಾಕರಿಸಿದ್ದರು.
೨೦೧೪ ಹಾಗೂ ೨೦೧೯ ಎರಡು ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರವನ್ನು ಪ್ರತಾಪ್ ಸಿಂಹ ಪ್ರತಿನಿಧಿಸಿದ್ದರು. ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಸುಖಾಸುಮ್ಮನೆ ಬಿಜೆಪಿ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಟಿಕೆಟ್ ಮಿಸ್ ಮಾಡಿಕೊಂಡಿದ್ದರು. ೨೦೨೪ ರಲ್ಲಿ ಎದುರಾದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಖಾಡಕ್ಕೆ ಇಳಿದಿದ್ದರು. ಸದ್ಯ ಚುನಾವಣೆಯಲ್ಲಿ ಗೆದ್ದು, ಮೈಸೂರು-ಕೊಡಗು ಸಂಸದರಾಗಿ ಯದುವೀರ್ ಒಡೆಯರ್ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಾಪ್ ಸಿಂಹ ಸದ್ಯ ಮಾಜಿ ಸಂಸದರಾಗಿದ್ದು, ಮುಂದೆ ೨೦೨೮ ರಲ್ಲಿ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಮಿಸ್ ಆದ ಬಳಿಕವೇ ಹೈಕಮಾಂಡ್ ನಾಯಕರ ಮುಂದೆ ರಾಜಕೀಯ ಭವಿಷ್ಯ ಚರ್ಚಿಸಿರುವ ಪ್ರತಾಪ್ ಸಿಂಹ ಅವರಿಗೆ ಮುಂದೆ ರಾಜ್ಯ ರಾಜಕಾರಣದಲ್ಲಿ ಅವಕಾಶ ಕೊಡುವ ಭರವಸೆ ಕೊಟ್ಟಿರುವ ಹೈಕಮಾಂಡ್ ನಾಯಕರು.
ಈ ನಿಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಆದೃಷ್ಟ ಪರೀಕ್ಷೆಗೆ ಇಳಿಯಲಿರುವ ಪ್ರತಾಪ್ ಸಿಂಹ. ತಾವು ಈ ಹಿಂದೆ ಪ್ರತಿನಿಧಿಸುತ್ತಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿರಾಜಪೇಟೆ ಅಥವಾ ಮಡಿಕೇರಿ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಮುಂದಿನ ೨೦೨೮ ರಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ನಳಿನ್ಕುಮಾರ್ ಕಟೀಲ್ ವಿಚಾರ ೨೦೦೯, ೨೦೧೪ ಹಾಗೂ ೨೦೧೯ ಮೂರು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದರಾಗಿ ಸೇವೆ.
ಜೊತೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರಿಗೆ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಟಿಕೆಟ್ ಮಿಸ್ ಆಗಿತ್ತು. ಸ್ಥಳೀಯ ಆರ್ಎಸ್ಎಸ್ ಪ್ರಮುಖರು ನಳಿನ್ಕುಮಾರ್ ಕಟೀಲ್ ಅವರನ್ನು ತಿರಸ್ಕರಿಸಿದ್ದ ಕಾರಣ, ಟಿಕೆಟ್ ಮಿಸ್ ಎಂದು ಹೇಳಲಾಗಿದ್ದು, ಸದ್ಯ ಅವರು ಕೂಡ ಹೈಕಮಾಂಡ್ ನಾಯಕರನ್ನು ಟಿಕೆಟ್ ಮಿಸ್ ಆದಾಗಲೇ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅವಕಾಶ ನೀಡುವ ಭರವಸೆ, ಅವರನ್ನು ವಿಧಾನಪರಿಷತ್ಗೆ ಆಯ್ಕೆ ಮಾಡುವ ಭರವಸೆಯನ್ನು ನೀಡಿರುವ ಹೈಕಮಾಂಡ್ ನಾಯಕರು. ಹೀಗಾಗಿ, ಬಿಜೆಪಿಯ ಮಾಜಿ ಸಂಸದರಿಬ್ಬರು ರಾಜ್ಯ ರಾಜಕಾರಣದಲ್ಲಿ ಆದೃಷ್ಟ ಪರೀಕ್ಷೆಗೆ ತೆರೆಮರೆಯಲ್ಲಿ ತಯಾರಿ ಎಂಬ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ.



