ಹೊಸ ಪ್ರತಿಭೆಗಳಿಗೆ ಅಂತಲೇ ತೆರೆದುಕೊಂಡಿರುವ ಗ್ಲೋಬಲ್ ಎಂಟರ್ಟೈನ್ಮೆಂಟ್ ನೆಟ್ವರ್ಕ್ (ಜೆನ್) ಸಂಸ್ಥೆಯು ದ ಪ್ರಸೆಂಟ್ ಸಿನಿಮಾವನ್ನು ಮೊದಲ ಹೆಜ್ಜೆಯಾಗಿ ನಿರ್ಮಾಣ ಮಾಡುತ್ತಿದೆ. ಶುಭ ಶನಿವಾರದಂದು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ನಡೆಯಿತು.
ಮಾಜಿ ಸಂಸದ ಎಲ್.ಶಿವರಾಮೇಗೌಡ ಅಳಿಯ ರಾಜೀವ್ರಾಥೋಡ್ ನಾಯಕನಾಗಿ ನಟಿಸುತ್ತಿರುವುದರಿಂದ, ಸಮಾರಂಭಕ್ಕೆ ಆಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ತುಮಕೂರು ಜಿಲ್ಲೆಯ ಯುವ ರೈತ ರಮೇಶ್ ಕ್ಯಾಮಾರಾ ಆನ್ ಮಾಡಿದರು. ಹಾಗೂ ಕ್ರೈಂ ಬ್ರಾಂಚ್ನ ಡೈನಮಿಕ್ ಪೋಲೀಸ್ ಅಧಿಕಾರಿ ಆರ್.ನವೀನ್ಕುಮಾರ್ ಅತಿಥಿಯಾಗಿ ಉಪಸ್ತಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜೆನ್ ಮಾಲೀಕ ಮತ್ತು ನಿರ್ದೇಶಕ ಶಿವಪೂರ್ಣ, ಇದೊಂದು ಮೈಥಲಾಜಿಕಲ್ ವಿಷಯಗಳನ್ನು ಒಳಗೊಂಡಿರುತ್ತದೆ. ಚಿತ್ರಕಥೆ ಸಿದ್ದಪಡಿಸಲು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಒಂದು ಆತ್ಮದ 3 ಜನ್ಮದ ಕಥೆ ಒಳಗೊಂಡಿರುತ್ತದೆ. ಪ್ರಸೆಂಟ್, ಪಾಸ್ಟ್ ಹಾಗೂ ಫ್ಯೂಚರ್ ಎಂದು ಮೂರು ಭಾಗಗಳಲ್ಲಿ ಬರಲಿದೆ. ಭಾಗ-1 ಪ್ರಸೆಂಟ್ನಲ್ಲಿ ನಡೆಯಲಿರುವ ಅಂಶಗಳನ್ನು ಹೇಳಲಾಗುತ್ತಿದೆ. ನಂತರ ಪಾಸ್ಟ್, ಫ್ಯೂಚರ್ ಟೇಕ್ ಆಫ್ ಆಗುತ್ತದೆ. ಕಾಲ್ಪನಿಕ ಆದರೂ ನೋಡುಗರಿಗೆ ಹೊಸತನ ಕೊಡಬೇಕೆಂದು ಯೋಜನೆ ಹಾಕಲಾಗಿದೆ.
ಯುವ ರೈತ ಬಂದಿದ್ದು ಖುಷಿ ತರಿಸಿದೆ. ಕಥೆಯಲ್ಲಿ ರೈತರ ಮಕ್ಕಳು ಪೋಷಕರನ್ನು ಯಾವ ರೀತಿ ಅಸಡ್ಡೆಯಿಂದ ಕಾಣುತ್ತಾರೆ ಎಂಬುದು ಬರುತ್ತದೆ. ಹೆಚ್ಚು ಭಾಗ ಬೆಂಗಳೂರು, ಉಳಿದಂತೆ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಶೇಕಡ 10ರಷ್ಟು ಗ್ರಾಫಿಕ್ಸ್ ಇರುತ್ತದೆ. ಸಿದ್ದಿ ಸಂಗೀತ, ಟಾಲಿವುಡ್ದಲ್ಲಿ ಹೆಸರು ಮಾಡಿರುವ ಹಿರಿಯ ಛಾಯಾಗ್ರಾಹಕ ಪ್ರಸಾದ್ ಪುಲಿಚರ್ಲ ನಮ್ಮ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
ಸುಪ್ರಿಂಸ್ಟಾರ್ ರಾಜೀವ್ರಾಥೋಡ್ ನಾಯಕ. ದಿಯಾ,ಮಾನಸಗೌಡ ನಾಯಕಿಯರು. ಬೇಬಿ ಆರಾಧ್ಯ. ಇವರೆಲ್ಲರೂ ಪಾತ್ರದ ಪರಿಚಯ ಮಾಡಿಕೊಂಡರು. ಖಳನಾಗಿ ರಾಬರ್ಟ್ ಉಳಿದಂತೆ ಅವಿನಾಶ್, ಶ್ರೀಧರ್, ದುಬೈ ರಫೀಕ್, ಮಂಜೇಶ್ಗೌಡ, ಸಹನ, ಭುವನ, ಮಾಧುರಿರೆಡ್ಡಿ, ಆಶಾ, ಭಾವನಾ, ಸಮೃದ್ದಿ, ಶೌರ್ಯ,ಅರುಣ್, ಮಮತ ಮುಂತಾದವರು ನಟಿಸುತ್ತಿದ್ದಾರೆ.