ಕನಕಪುರ: ಕಳೆದ ಹತ್ತು ವರ್ಷಗಳಲ್ಲಿ ದೇಶದ ರೈತರ ನೆರವಿಗೆ ನಿಲ್ಲ ಬೇಕೆಂಬ ಸದ್ದುದೇಶದಿಂದ ನರೇಗಾ ಯೋಜನೆಯ ಜೊತೆಗೆ ನೇರವಾಗಿ ರೈತರ ಖಾತೆಗೆ ಆರು ಸಾವಿರ ರೂಪಾಯಿಗಳನ್ನು ಹಾಕುವ ಮೂಲಕ ಅವರ ಆದಾಯದ ಪ್ರಮಾಣ ಹೆಚ್ಚು ಮಾಡುವಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ರೈತ ಕಾಳಜಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಯುವ ಮುಖಂಡ ಸುನೀಲ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ನಾರಾಯಣಪುರ ಗ್ರಾಮ ಪಂಚಾಯ್ತಿಯ ನಾರಾಯಣಪುರ ಗ್ರಾಮದಲ್ಲಿ ನಡೆದ ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದ ಅವರು ಹಳ್ಳಿಗಳು ಅಭಿವೃದ್ಧಿ ಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಗಾಂಧೀಜಿ ಯವರ ಮಾತಿನಂತೆ ನಡೆದುಕೊಳ್ಳುತ್ತಿರುವ ಮೋದಿಜಿಯವರುದೇಶದ ಪ್ರತಿಯೊಂದು ಹಳ್ಳಿಗಳ ಅಭಿವೃದ್ಧಿಗಾಗಿ ನರೇಗಾ ಕಾಮಗಾರಿಯ ಹಣ ದ್ವಿಗುಣ ಮಾಡಿರುವುದಲ್ಲದೆ ಪ್ರತಿ ಸಣ್ಣ ರೈತ ಕುಟುಂಬಕ್ಕೂ ಉಪಯೋಗವಾಗಲೆಂದು ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗಳಿಗೆ ಹಾಕುತ್ತಿರುವುದು,
ಉಜ್ವಲ ಯೋಜನೆಅಡಿಯಲ್ಲಿ ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ, ಐದುಕೆ ಜಿ ಪಡಿತರ ಅಕ್ಕಿ,ಆರೋಗ್ಯ ಹಾಗೂ ಗೌರವಯುತ ಜೀವನಕ್ಕಾಗಿ ಪ್ರತಿ ಕುಟುಂಬಕ್ಕೆ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಅವರಲ್ಲಿರುವ ರೈತಪರ ಕಾಳಜಿ ಯನ್ನು ತೋರಿಸುತ್ತದೆ ಎಂದರು.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಕೈಗೊಂಡಿ ರುವ ಜನಪರ ಯೋಜನೆಗಳು ಹಾಗೂ ದೇಶ ಆರ್ಥಿಕ ವಾಗಿ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರಗಳಲ್ಲಿ ಐದನೇ ಸ್ಥಾನ ಪಡೆದು ಮುನ್ನುಗ್ಗುತ್ತಿರುವ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸುವ ಮೂಲಕ ಮೋದಿಜಿ ಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲಾಗುವುದು ಎಂದರು.
ಪಕ್ಷದ ಮುಖಂಡರಾದ ಕೆ ಎಂ ವೆಂಕಟೇಶ್, ಶಿವಮುತ್ತು, ವೆಂಕಟೇಶ್, ಪ್ರಮೀಳಾ, ಶಶಿಕಲಾ ಮುನಿಸಿದ್ದೆಗೌಡ, ರಮೇಶ್, ಮಾಯಿಗೌಡ, ಕರಿಯಪ್ಪ, ಮರಿಗೌಡ, ಶೀರೇಗೌಡ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.