ಬೆಂಗಳೂರು: ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ ಗರ್ಭಿಣಿಯರ ಕುರಿತಂತೆ ಸದನದಲ್ಲಿ ಪ್ರಶ್ನಿಸಿದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ತಿಳಿಸಿದ್ದಾರೆ.
ಸದನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಮಸ್ಯೆ ಹೆಚ್ಚಾಗುತ್ತದೆ, ಅದರಲ್ಲೂ ಬೆಂಗಳೂರು ಮೊದಲನೇ ಸ್ಥಾನವನ್ನು ಹೊಂದಿದೆ. ಬಾಲ್ಯದಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಸಾಮಾಜಿಕವಾಗಿ ಅನೇಕ ಸೌಲಭ್ಯದಿಂದ ವಂಚಿತರಾಗುತ್ತಾರೆ. ಸರಿಯಾದ ಶಿಕ್ಷಣ ಇವರಿಗೆ ದೊರೆಯುವುದಿಲ್ಲ ಹಾಗೆ ಉತ್ತಮವಾದ ಉದ್ಯೋಗ ಕೂಡ ಇವರಿಗೆ ದೊರೆಯುವುದಿಲ್ಲ. ಇದು ಸಮಾಜದ ಬೆಳವಣಿಗೆಯ ಮೇಲು ಕೂಡ ನಮ್ಮ ರಾಜ್ಯದ ಮೇಲೂ ಕೂಡ ನಕಾರಾತ್ಮಕವಾಗಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಚಿವರನ್ನು ಟಿ. ಎ. ಶರವಣ ಅವರು ಒತ್ತಾಯಿಸಿದರು.