ಅರೇಹಳ್ಳಿ: ಒಂದು ಕಡೆ ಪಡಿತರ ಚೀಟಿ ತಿದ್ದುಪಡಿಗೆ ಕ್ಯೂ ನಲ್ಲಿ ನಿಂತಿರುವ ಜನರು.. ಮತ್ತೊಂದು ಕಡೆ ಸರ್ವರ್ ಬ್ಯುಸಿ ಎಂದು ಹೇಳುತ್ತಿರುವ ಕಂಪ್ಯೂಟರ್ ಆಪರೇಟರ್ ,ಇನ್ನೊಂದು ಕಡೆ ನಿಂತು ನಿಂತು ಸುಸ್ತಾಗಿ ಮನೆಗೆ ತೆರಳುತ್ತಿದ್ದ ನಾಗರೀಕರು.
ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಬೇಲೂರು ತಾಲೂಕಿನ ವಿವಿದ ಗ್ರಾಮ್ ಓನ್ ಕೇಂದ್ರ ಹಾಗು ತಾಲೂಕು ಕಚೇರಿಯಲ್ಲಿ ಹೌದು ಇಂದು ತಹಶೀಲ್ದಾರ್ ಕಚೇರಿಗೆ ಹಾಗು ತಾಲೂಕಿನ ವಿವಿದ ಗ್ರಾಮ್ ಓನ್ ಕೇಂದ್ರಗಳಿಗೆ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಆಗಮಿಸಿದ.
ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಇ ಹಿಂದೆ ಕಳೆದ ಆರೇಲು ತಿಂಗಳಿಂದ ಸರ್ಕಾರವು ಪ್ರತಿ ಬಾರಿ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಅವಕಾಶ ಕಲ್ಪಿಸಲಾಗುತ್ತಿದ್ದರು ಕಂಪ್ಯೂಟರ್ನಲ್ಲಿ ಸರ್ವರ್ ಬ್ಯುಸಿ (ತಾಂತ್ರಿಕ ದೋಷ) ಸಮಸ್ಯೆ ಕಾಡುತ್ತಿತ್ತು,ಅದೆ ರೀತಿ ಈ ದಿನದ
ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಾಂತರ ಭಾಗದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಗೆ ಬಂದರೂ, ತಿದ್ದುಪಡಿ ಕಾರ್ಯ ಪೂರ್ಣವಾಗದೇ ನಿರಾಸೆಯಿಂದ ವಾಪಸ್ಸಾಗುವಂತಾಗಿದೆ.
ಈ ವೇಳೆ ಗ್ರಾಹಕರಾದ ಸದಾಶಿವ ಮಾತನಾಡಿ ನಾನು ಕಳೆದ ವರ್ಷದಿಂದ ಪ್ರತಿ ಬಾರಿ ಸರ್ಕಾರವು ತಿದ್ದುಪಡಿಗಾಗಿ ಅವಕಾಶ ಕಲ್ಪಿಸಿದ ಸಂದರ್ಬದಲ್ಲಿ ಹತ್ತಿರದ ಸೇವಾ ಕೇಂದ್ರಕ್ಕೆ ಹಾಗು ತಾಲೂಕು ಕೇಂದ್ರಕ್ಕೆ ಬೇಟಿ ನೀಡಿ ಗಂಟೆಗಟ್ಟಲೆ ಕಾದು ಸರ್ವರ್ ದೋಷದಿಂದ ನನ್ನ ಮಗುವನ್ನು ರೇಷನ್ ಕಾರ್ಡ್ ಗೆ ಸೇರಿಸಲು ಸಾದ್ಯವಾಗುತ್ತಿಲ್ಲ,ನನ್ನ ಹಾಗೆ ಹಲವಾರು ವೃದ್ಧರು,ಮಹಿಳೆಯರು,ಕೂಲಿ ಕೆಲಸಗಾರರು ತಮ್ಮ ಕೆಲಸ ಬಿಟ್ಟು ತಿದ್ದುಪಡಿಗಾಗಿ ಬೆಳಿಗ್ಗಿನಿಂದಲೇ ಕಾದು ಕಾದು ವಾಪಸ್ಸಾಗಿದ್ದಾರೆ .
ಆದ್ದರಿಂದ ತಿದ್ದುಪಡಿಗಾಗಿ ಸರ್ಕಾರವು ಮುಂಬರುವ ದಿನದಲ್ಲಿ ಮೂರ್ನಾಲ್ಕು ಘಂಟೆ ಸಮಯಾವಕಾಶ ನೀಡುವ ಬದಲು ವಾರಗಟ್ಟಲೆ ಅವಕಾಶ ಕಲ್ಪಿಸಿದರೆ ನನ್ನಂತೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.