ದೇವನಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನವನ್ನು ಸಾರ್ವಜನಿಕರು ಬಳಸಿಕೊಂಡರೆ ಆರ್ಥಿಕ ಅಭಿವೃದ್ಧಿ ಹೊಂದುವುದಕ್ಕೆ ಸಹಕಾರಿಯಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಗಂಗಾಧರ್ಮೂರ್ತಿ ಹೇಳಿದರು.
ದೇವನಹಳ್ಳಿ ತಾಲೂಕು, ನಲ್ಲೂರು ಸರ್ಕಲ್ ನಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ ಸಂಕಲ್ಪ ಯಾತ್ರೆ ಎಲ್ಲಿ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳು ಗ್ರಾಮಗಳ ಕಟ್ಟೆ ಕಡೆ ವ್ಯಕ್ತಿಗೂ ಸಿಗುವಂತೆ ಮಾಡುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ ಸಾರ್ವಜನಿಕರು ತಿಳಿದುಕೊಂಡು ನೀವು ಬೇರೆಯವರಿಗೆ ತಿಳಿಸಿದರೆ ಸರ್ಕಾರದ ಯೋಜನೆಗಳು ಪಡೆದು ಕೊಂಡಾಗ ಗ್ರಾಮಗಳ ಅಭಿವೃದ್ಧಿಯಾಗುತ್ತವೆ ಎಂದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮಧುಕರ್ ಮಾತನಾಡಿ ಕೇಂದ್ರ ಸರ್ಕಾರವು ಬ್ಯಾಂಕುಗಳ ಮುಖಾಂತರ ಹಲವಾರು ಯೋಜನೆಗಳು ಜಾರಿಗೆ ತಂದಿದ್ದಾರೆ ರೈತರಿಗೆ ಕಿಸಾನ್ ಸಮನ್ ಯೋಜನೆ ಹಾಗೂ 40ವರ್ಷದ ಒಳಗಿರುವವರಿಗೆ ಸರ್ಕಾರಿ ಉದ್ಯೋಗ ಅಲ್ಲದವರಿಗೆ ಅಟಲ್ ಬಿಹಾರಿ ಪಂಕ್ಷನ್ ಸ್ಕಿಮ್ಮ ಜಾರಿಯಲ್ಲಿದೆ ನೀವು ತಿಂಗಳ ಒಂದು ಬಾರಿ 60 ವರ್ಷ ಆಗುವವರೆಗೂ ಹಣ ಪಾವತಿಸಿದರೆ ನಿಮಗೆ 60 ವರ್ಷದ ನಂತರ ಪೆನ್ಷನ್ ಬರುತ್ತದೆ 70 ವರ್ಷದ ಒಳಗಿರುವವರೆಗೂ ಅಪಘಾತ ವಿಮೆ ಜಾರಿಯಲ್ಲಿರುತ್ತದೆ ಇದನ್ನು ಸದಾ ಉಪಯೋಗ ಪಡೆದುಕೊಳ್ಳಬೇಕು ವಿಕಸಿತ ಭಾರತದ ಸಂಕಲ್ಪ ಯಾತ್ರೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂರಾರು ಗ್ರಾಮ ಪಂಚಾಯಿತಿಗಳಲ್ಲೂ ಈ ರೀತಿ ಕಾರ್ಯಕ್ರಮ ಮಾಡಲಾಗಿದೆ ಎಂದರು.
ದೇವನಹಳ್ಳಿ ಎಸ್ಎಲ್ಎಸ್ ವಿ ಭರತ್ ಗ್ಯಾಸ್ ಮಲಿಕರಾದ ಶ್ರೇಯಸ್ ಮಾತನಾಡಿ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆ ಮುಖಾಂತರ ಹೊಸದಾಗಿ ಗ್ಯಾಸ್ ಕಲೆಕ್ಷನ್ ಪಡೆದುಕೊಳ್ಳಬಹುದು ಯಾರು ಮನೆಯಲ್ಲಿ ಗ್ಯಾಸ್ ಕಲೆಕ್ಷನ್ ಇರುವುದಿಲ್ಲ ಅಂತವರಿಗೆ ಉಜ್ವಲ್ ಯೋಜನೆ ಮುಖಾಂತರ ಪಡೆಯುವುದಕ್ಕೆ ಅವರ ಬಿಪಿಎಲ್ ಕಾರ್ಡ್ ಆಧಾರ್ ಕಾರ್ಡ್ ಎರಡು ಭಾವಚಿತ್ರ ನೀಡಿ ಪಡೆದುಕೊಳಬೇಕು .
ಈ ಯೋಜನೆ ಮೂರು ವರ್ಷದಿಂದ ಜಾರಿಯಲ್ಲಿದೆ ಕೇಂದ್ರ ಸರ್ಕಾರ ಹಳ್ಳಿಗಾಡಿನ ಪ್ರದೇಶದ ಜನರು ಒಲೆ ಉರಿಯುವುದಕ್ಕಾಗಿ ಮರ-ಗಿಡಗಳನ್ನು ಕಡೆದು ಒಲೆ ಉರಿಸುವುದಕ್ಕಾಗಿ ಆಹಾರ ಮಾಡಿಕೊಳ್ಳುವುದಕ್ಕೆ ಪರಿಸರ ಹಾಳಾಗುತ್ತದೆ ಒಲೆ ಉರಿಯುವುದು ಹೊಗೆ ಬಂದು ಮಹಿಳೆಯರಿಗೆ ಸ್ವಾಶ ಕೋಶ ತೊಂದರೆಯಾಗುತ್ತದೆ ಎಂಬ ದೃಷ್ಟಿ ಇಟ್ಟುಕೊಂಡು ಉರುವಲು ಮುಕ್ತ ಗ್ರಾಮ ಮಾಡುವುದಕ್ಕೆ ಕೇಂದ್ರ ಸರ್ಕಾರ ಯೋಜನೆಯ ತಂದಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ನಲ್ಲೂರು ಆರೋಗ್ಯ ಕೇಂದ್ರ ವೈದ್ಯರು ಮಾಹಿತಿ ನೀಡಿದರುಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮುನಿರಾಜು ಕಮಲ ನಂಜೇಗೌಡ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಶ್ರೀನಿವಾಸ್ ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳು ಇನ್ನು ಮುಂತಾದವರು ಹಾಜರಿದ್ದರು.