ಮಳವಳ್ಳಿ: ಪರಿಸರವನ್ನು ಸಂರಕ್ಷಣೆ ಮಾಡುವುದು ವಿಶ್ವ ಪರಿಸರ ದಿನಾಚರಣೆಯ ಉದ್ದೇಶವಾಗಿದೆ ಎಂದು ಪ್ರಾಂಶುಪಾಲರಾದ ಸುಷ್ಮಾ.ಎಂ. ಅವರು ತಿಳಿಸಿದರು.
ತಾಲ್ಲೂಕಿನ ಕುಂದೂರು ಗ್ರಾಮದಲ್ಲಿರುವ ದಿ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು. ವಿಶ್ವ ಸಂಸ್ಥೆ ಮೊದಲ ಬಾರಿಗೆ 1972 ರಲ್ಲಿ ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಆಚರಿಸುವ ಕುರಿತು ತೀರ್ಮಾನಿಸಿ ಅದರಂತೆ 1974 ಜೂನ್ 5 ರಂದು ಮೊದಲ ಬಾರಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರತಿ ವರ್ಷ ಒಂದೊಂದು ಉದ್ದೇಶಿಸವನ್ನು ಇಟ್ಟುಕೊಂಡು ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು. ನಾವು ನಮ್ಮ ಮನೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಬೇಕು. ನಮ್ಮ ಸುತ್ತಲಿನ ಉತ್ತಮ ಪರಿಸರ ನಮ್ಮ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದರು.
ಇದಕ್ಕೂ ಮೊದಲು ವಿದ್ಯಾರ್ಥಿಗಳು ತಂದಿದ್ದ ಗಿಡಗಳನ್ನು ಶಾಲೆಯ ಸಿಬ್ಬಂದಿಗಳು ಜೊತೆಗೂಡಿ ಶಾಲೆ ಆವರಣದಲ್ಲಿ ನೆಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಗುರುಮೂರ್ತಿ, ಅಧ್ಯಕ್ಷ ಕೀರ್ತಿ, ಪ್ರಾಂಶುಪಾಲೆ ಸುಷ್ಮಾ ಎಂ. ಸೇರಿದಂತೆ ಶಿಕ್ಷಕರು ಇದ್ದರು.
Leave a Review