ತಿ.ನರಸೀಪುರ: ಸಮಾನತೆ ಹಾಗೂ ಸಮಬಾಳಿನಿಂದ ಗೌರವಯುತ ಬದುಕು ನೆಡಸಲು ಬಾಬಾ ಸಾಹೇಬರು ಕೊಟ್ಟ ಸಂವಿಧಾನವೇ ಕಾರಣ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ವಡ್ಡರ್ ತಿಳಿಸಿದರು. ತಾಲ್ಲೂಕಿನ ಹೆಮ್ಮಿಗೆ ಗ್ರಾಮ ಪಂಚಾಯತಿಗೆ ಆಗಮಿಸಿದ.
ಸಂವಿಧಾನ ಜಾಗೃತಿ ಜಾಥ ರಥವನ್ನು ಗ್ರಾ.ಪಂ.ಅಧ್ಯಕ್ಷೆ ವಸಂತ ರಾಜಶೇಖರ್ ,ಉಪಾಧ್ಯಕ್ಷ ಹೆಮ್ಮಿಗೆ ಸೋಮಣ್ಣ ಸೇರಿದಂತೆ ಗ್ರಾ.ಪಂ.ಸದಸ್ಯರು ಹಾಗೂ ವಿವಿಧ ಸಂಘಟನೆಯ ಮುಖಂಡರು ,ಶಾಲಾ ಮಕ್ಕಳು, ಶಿಕ್ಷರು,ಮಹಿಳೆಯರು ಸೇರಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಹೆಮ್ಮಿಗೆ ಗ್ರಾಮದ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನೆಡದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪರಮೋಚ್ಛ ಗ್ರಂಥ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯ ಕ್ರಮವನ್ನು ಸರ್ಕಾರ ಹಮ್ಮಿಕೊಂಡು ಆ ಮೂಲಕ ಸಂವಿಧಾನದ ಅರಿವನ್ನು ಜನರಲ್ಲಿ ಮೂಡಿಸುತ್ತಿದೆ ದೇಶದಲ್ಲಿ 400 ಕ್ಕೂ ಹೆಚ್ಚು ಜಾತಿ, ಹಲವು ಧರ್ಮ, ಹಲವಾರು ಭಾಷೆ ಇದ್ದರು ಸಹ ನಾವೇಲ್ಲರು ಒಂದೇ ಎಂಬ ಭಾವನೆ ಯೊಂದಿಗೆ ಬದಕಲು ಬಾಬಾ ಸಾಹೇಬರು ಬರೆದ ಸಂವಿಧಾನವೇ ಕಾರಣ ಎಂದರು.
ಭಾರತದ ಪ್ರಜೆಯನ್ನು ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮ ಸ್ಥಳದ ಆಧಾರಗಳ ಮೇಲೆ ತಾರತಮ್ಯ ಮಾಡುವುದು ನಿಷೇಧ ಕ್ಕೊಳಪಡಿಸಿ, ಎಲ್ಲರೂ ಶಿಕ್ಷಣ ಪಡೆದು ಘನತೆಯಿಂದ ಬದುಕುತ್ತಾ ಪರಸ್ಪರ ಪ್ರೀತಿ-ಗೌರವಗಳನ್ನು ಕೊಟ್ಟುಕೊಳ್ಳುತ್ತಾ ತನಗಿಚ್ಛೆಯಾದ ಧರ್ಮ ಅನುಸರಿಸುವ ಮೂಲಭೂತ ಹಕ್ಕು ಮನುಷ್ಯ ಬದುಕಿಗೆ ಕೊಟ್ಟದ್ದು ಹಾಗೂ ಚಾರಿತ್ರಿಕವಾಗಿ ಅನ್ಯಾಯಕ್ಕೆ ಒಳಗಾದವರನ್ನೂ ವಿಶೇಷವಾಗಿ ಮಾನ್ಯ ಮಾಡುತ್ತಾ,
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದಿಸುತ್ತಿರುವ ತಾಯಿಯೇ ಭಾರತದ ಸಂವಿಧಾನ. ಇಂತಹ ತಾಯ್ತನದ ಸಂವಿಧಾನದ ರಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರ ಪ್ರೇಮವನ್ನು ಮೆರೆದದ್ದು ನಮಗೆಲ್ಲ ಮಾದರಿಯಾಗಲೇಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ನಿಕಟ ಪೂರ್ವ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ,ಉಪಾಧ್ಯಕ್ಷ ಹೆಮ್ಮಿಗೆ ಸೋಮಣ್ಣ,ಕಾಂಗ್ರೆಸ್ ಹಿರಿಯ ಮುಖಂಡ ಹೆಮ್ಮಿಗೆ ಶೇಷಾದ್ರಿ, ಗ್ರಾ.ಪಂ ಸದಸ್ಯರಾದ ಮಹದೇವ(ಡಿ.ಎಂ.) ಕೇಶವಮೂರ್ತಿ, ಪಿಡಿಒ ಚಿದಾನಂದ,ಮಾಜಿ ಗ್ರಾ.ಪಂ. ಅಧ್ಯಕ್ಷ ರಾಜಶೇಖರ, ಅಕ್ಕೂರು ಮಹೇಶ್, ಸೇರಿದಂತೆ ಗ್ರಾ.ಪಂ. ಸದಸ್ಯರು,ವಿವಿಧ ಸಂಘಟನೆಯ ಮುಖಂಡರು,ಶಿಕ್ಷಕರು, ವಿದ್ಯಾರ್ಥಿಗಳು,ಗ್ರಾಮಸ್ಥರು ಹಾಜರಿದ್ದರು.