ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಬಹು ನಿರೀಕ್ಷಿತ `ಸೆಪ್ಟೆಂಬರ್ 21′ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕ ರಲ್ಲಿ ಹೊಸ ಕುತೂಹಲ ಮೂಡಿಸಿದೆ. ಕೇವಲ 22 ವರ್ಷದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಅಲ್ಝೈಮರ್ಸ್ ಅಥವಾ ಮರೆಗುಳಿತನ ಎಂಬ ಗಂಭೀರ ವಿಷಯ ಅತ್ಯಂತ ಮೃದುವಾಗಿ ಮತ್ತು ಪರಿಣಾ ಮಕಾರಿಯಾಗಿ ತೆರೆಯ ಮೇಲೆ ತಂದಿದೆ.
ಮರೆಗುಳಿತನದ ಕಥಾಹಂದರಸಾಮಾನ್ಯವಾಗಿ ಅಲ್ಝೈಮರ್ಸ್ಬ ಗ್ಗೆ ಸಮಾಜದಲ್ಲಿ ಚರ್ಚೆಗಳಾಗುತ್ತವೆ, ಆದರೆ ಆ ಕಾಯಿಲೆಗೆ ತುತ್ತಾದವರ ಮತ್ತು ಅವರನ್ನು ಹಗಲಿರುಳು ಆರೈಕೆ ಮಾಡುವವರ ಒಳಗಿನ ತಳಮಳವನ್ನು ಈ ಚಿತ್ರದಲ್ಲಿ ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆ. ಈ ಟೀಸರ್ ಪ್ರೇಕ್ಷಕರಿಗೆ ಕೇವಲ ದೃಶ್ಯಗಳನ್ನು ತೋರಿಸುವುದಲ್ಲದೆ, ಕಳೆದುಹೋಗುತ್ತಿರುವ ನೆನಪುಗಳ ನೋವನ್ನು ಮೌನವಾಗಿ ಅನುಭವಿಸುವಂತೆ ಮಾಡುತ್ತದೆ. ಇದು ಕೇವಲ ಸಿನಿಮಾವಲ್ಲ, ಒಂದು ಭಾವನಾತ್ಮಕ ಪಯಣ ಎಂಬ ಭರವಸೆಯನ್ನು ನೀಡುತ್ತದೆ.ಚಿತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯಾ ಅವರು ಮರೆಗುಳಿತನದಿಂದ ತನ್ನ ಅಸ್ತಿತ್ವವನ್ನೇ ಮರೆಯುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಅವರಿಗೆ ಆಸರೆಯಾಗಿ ನಿಲ್ಲುವ ಪಾಲಕಿಯಾಗಿ ಪ್ರಿಯಾಂಕಾ ಉಪೇಂದ್ರ ಅದ್ಭುತವಾಗಿ ಅಭಿನಯಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ಸಂಯಮದ ಮತ್ತು ಮಾಗಿದ ಅಭಿನಯ ಎನ್ನಲಾಗುತ್ತಿದೆ. ಯಾವುದೇ ಹೆಚ್ಚಿನ ನಾಟಕೀಯತೆ ಇಲ್ಲದೆ ಅತ್ಯಂತ ನೈಜವಾಗಿ ಈ ಪಾತ್ರಗಳು ಮೂಡಿಬಂದಿವೆ.ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಮೇಕಿಂಗ್ ಶೈಲಿ ವಿಭಿನ್ನವಾಗಿದ್ದು, ಅವರು ಅನಗತ್ಯ ಅಬ್ಬರಕ್ಕೆ ಮೊರೆಹೋಗದೆ ಕಥೆಯ ಭಾವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. “ನನ್ನ ಸಿನಿಮಾ ನೋಡುವಾಗ ಪ್ರೇಕ್ಷಕರು ಅಲ್ಝೈಮರ್ಸ್ ರೋಗಿಗಳ ಕುಟುಂಬ ಅನುಭವಿಸುವ ಆ ಮೌನ ಮತ್ತು ಭಾವನಾತ್ಮಕ ತೂಕವನ್ನು ನೇರವಾಗಿ ಅನುಭವಿಸಬೇಕು ಎಂಬುದು ನನ್ನ ಹಂಬಲವಾಗಿತ್ತು” ಎಂದು ಕರೆನ್ ಅವರು ಚಿತ್ರದ ಉದ್ದೇಶವನ್ನು ಹಂಚಿಕೊAಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಪ್ರವೀಣ್ ಸಿಂಗ್ ಸಿಸೋಡಿಯಾ ಮಾತ್ರವಲ್ಲದೆ, ಹಿರಿಯ ನಟಿ ಜರೀನಾ ವಹಾಬ್, ಅಮಿತ್ ಬೆಹ್ಲ್, ಅಜಿತ್ ಶಿಧಾಯೆ, ಸಚಿನ್ ಪಟೇಕರ್ ಮತ್ತು ರಿಕಿ ರುದ್ರ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ. ಈ ಎಲ್ಲಾ ನಟರ ಉಪಸ್ಥಿತಿಯು ಚಿತ್ರಕ್ಕೆ ಹೆಚ್ಚಿನ ಗಾಂಭೀರ್ಯ ಮತ್ತು ಮೆರುಗನ್ನು ತಂದುಕೊಟ್ಟಿದೆ. ಪ್ರತಿಯೊಂದು ಪಾತ್ರವೂ ಕಥೆಯ ಓಘಕ್ಕೆ ಪೂರಕವಾಗಿ ವಿನ್ಯಾಸಗೊಂಡಿದೆ.
IಈಈI ಚಿತ್ರೋತ್ಸವದಲ್ಲಿ ಮೆಚ್ಚುಗೆ: ಈ ಚಿತ್ರವನ್ನು ಬಾಲಿವುಡ್ನ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ ಅವರ ಪತ್ನಿ ಪ್ರೀತಿ ಅಲಿ ಒಡೆತನದ ಹುಮಾರಾ ಮೂವಿ, ವಿಸಿಕಾ ಫಿಲ್ಮ್ಸ್ ಮತ್ತು ಎಫ್.ಎಂ.ಡಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿದ್ದು, ಫಿಲ್ಮ್ಸ್ ಮ್ಯಾಕ್ಸ್ ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ರಾಜ್ ಶೇಖರ್ ಅವರ ಬರಹ ಮತ್ತು ವಿನಯ್ ಚಂದ್ರ ಅವರ ಸಂಗೀತ ಚಿತ್ರಕ್ಕಿದೆ. ಅಂತಾರಾಷ್ಟ್ರೀಯ ಆಯಾಮ ನೀಡಲು ವಿದೇಶಿ ನಟ ಫ್ರೆಡೆರಿಕ್ ಡಿ ವೋಸ್ ಅವರು ಸಹ-ನಿರ್ಮಾಪಕರಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರವು ಈಗಾಗಲೇ 56ನೇ IಈಈI ಚಲನಚಿತ್ರೋತ್ಸವದ ವರ್ಕ್ ಇನ್ ಪ್ರೊಗ್ರೆಸ್ ವಿಭಾಗದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ.
`ಸೆಪ್ಟೆಂಬರ್ 21′ ಚಿತ್ರದ ಟೀಸರ್ ಬಿಡುಗಡೆ; 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ



