ಬೆಂಗಳೂರು: ಪ್ರತಿಷ್ಠಿತ ಸ್ನೇಹ ಬುಕ್ ಹೌಸ್ ಹೊರತಂದಿರುವ 500ನೇ ಕೃತಿ “ಮಂದಿರವಲ್ಲೇ ಕಟ್ಟಿದೆವು” ಶ್ರೀರಾಮ ಲಲ್ಲನ ಪ್ರಾಣ ಪ್ರತಿಷ್ಠಾಪನೆಯ ಸುದಿನ ಇಂದು ಸಂಜೆ ಪತ್ರಿಕೆಯ ಕಚೇರಿಯಲ್ಲಿ ಕೃತಿಯನ್ನು ಅನಾವರಣಗೊಳಿಸಲಾಯಿತು.
1528 ರಿಂದ 2024 ರವರೆಗೆ ಅಯೋಧ್ಯ ಆಂದೋಲನ ಸುಮಾರು 496 ವರ್ಷಗಳ ರೋಚಕ ಕಥಾನಕವನ್ನು ಒಳಗೊಂಡಿರುವ ಅತ್ಯಂತ ಹೃದಯಸ್ಪರ್ಶಿ, ಭಾವನಾತ್ಮಕ ಮತ್ತು ಐತಿಹಾಸಿಕ ಘಟನೆಗಳನ್ನು ಹೊಂದಿರುವ ಕೃತಿ ಇದಾಗಿದೆ.
ಶ್ರೀ .ರಮೇಶ್ ಕುಮಾರ್ ನಾಯಕ್ ರವರು ಬರೆದಿರುವ ಈ ಕೃತಿಯಲ್ಲಿ ಭಾರತದ ಧಾರ್ಮಿಕ ವಿಚಾರಗಳನ್ನು ಒಳಗೊಂಡಂತೆ ರಾಮ ಮಂದಿರದ ಕಲ್ಪನೆ ಸಾಕಾರಗೊಳ್ಳುವ ಸುದಿನದವರೆಗೂ ಅನೇಕ ವಿಚಾರಗಳನ್ನು ಆಪ್ತವಾದ ಬರವಣಿಗೆ ಹಾಗೂ ಚಿತ್ರಪಟಗಳ ಮೂಲಕ ಸಹಿತ ಕಟ್ಟಿ ಕೊಟ್ಟಿದ್ದಾರೆ.
ಇದೊಂದು ಸಮಗ್ರ ವಿಚಾರಧಾರೆಗಳ ಕೃತಿ. ಅಬಕಾರಿ ಇಲಾಖೆಯು ಉಪಯುಕ್ತರಾದ ಡಾ. ಬಿ.ಆರ್ ಹಿರೇಮಠ್, ಇಂದು ಸಂಜೆ ಪತ್ರಿಕೆ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ .ವೈ ಪದ್ಮ ನಾಗರಾಜ್, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ.ಗುಣವಂತ ಮಂಜು ಹಾಗೂ ಸ್ನೇಹ ಬುಕ್ ಕೌಸ್ನ ಮಾಲೀಕರಾದ ಶ್ರೀಯುತ ಕೆ. ಬಿ ಪರಶಿವಪ್ಪ ರವರು ಕೃತಿಯನ್ನು ಲೋಕಾರ್ಪಣೆ ಗೊಳಿಸುವ ಮೂಲಕ ನಾಡಿನ ಸರಸ್ವತ ಲೋಕಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ.
ಪ್ರತಿಯೊಬ್ಬ ಭಾರತೀಯರ ಮನೆ ಮತ್ತು ಮನೆಗಳಲ್ಲಿ ಇಡಬಹುದಾದ ಮತ್ತು ಇರಲೇಬೇಕಾದ ಕೃತಿ ಇದಾಗಿದೆ ಎನ್ನುವ ಆಶಯ ಲೇಖಕರಾದ ಶ್ರೀ.ರಮೇಶ್ ಕುಮಾರ್ ನಾಯಕ್ ರವರದ್ದಾಗಿದೆ.