ಚಿಕ್ಕಬಳ್ಳಾಪುರ: ನಾಟಕ ಜೀವಂತ ಕಲೆ, ಅದನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನಗರಸಭೆ ಸದಸ್ಯ ಹಾಗೂ ಸಮಾಜ ಸೇವಕ ವಿ. ಸುಬ್ರಹ್ಮಣ್ಯಚಾರಿ ಹೇಳಿದರು.ಅವರು ಚಿಕ್ಕಬಳ್ಳಾಪುರ ನಗರದ ಲಕ್ಕಮ್ಮದೊಡ್ಡಮುನಿಯಪ್ಪ ಕಲ್ಯಾಣ ಮಂಟಪ ಸಮೀಪಎಲೆಪೇಟೆ ಶ್ರೀ ವಿದ್ಯಾ ಗಣಪತಿ ಗೆಳೆಯರ ಸಂಘ ಸಮಾನ ಮಸ್ಕರ ಸೇವಾ ಸಮಿತಿ ಇವರ ಆಶ್ರಯದಲ್ಲಿ ಶ್ರೀ ಗಂಗಮಾಂಭ ದೇವಾಲಯದ 62ನೇ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಹಾಸ್ಯ ಹಾಗೂ ಭಕ್ತಿ ಪ್ರಧಾನ `ಸಾಸವಲ ಚಿನ್ನಮ್ಮ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ವೃತ್ತಿ ರಂಗಭೂಮಿ ನಟರುಗಳು ಸಂಕಷ್ಟದಲ್ಲಿದ್ದಾರೆ. ಸಮಾಜ ಮತ್ತು ಸರ್ಕಾರಗಳು ರಂಗಭೂಮಿ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವ ಅಗತ್ಯ ಇದೆ. ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ರಂಗಭೂಮಿಯ ನಾಟಕ ಕಲೆಗಳು ಕಣ್ಮರೆಯತ್ತ ಸಾಗುತ್ತಿರುವುದು ದುರಂತ ಸಮಾಜವು ಈ ಜೀವಂತ ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಬೆಳಸಬೇಕೆಂದು ಮನವಿ ಮಾಡಿಕೊಂಡರು.
ಮತ್ತೋರ್ವ ನಗರಸಭೆ ಸದಸ್ಯ ಹಾಗೂ ಸಮಾನ ಮನಸ್ಕರ ಸೇವಾ ಸಮಿತಿ ಮುಖ್ಯಸ್ಥ ಹಾಗೂ ಸಮಾಜ ಸೇವಕ ಎಲೆಪೇಟೆ ಚಂದ್ರಶೇಖರ್ ಮಾತನಾಡಿ ರಂಗಭೂಮಿ ಕಲಾವಿದರ ಬದುಕು ಡೊಲಾಯಮಾನವಾಗಿದೆ ಕಲಾವಿದರು ತೆರೆಯ ಮುಂಭಾಗದಲ್ಲಿ ಇರುವಷ್ಟು ಶ್ರೀಮಂತಿಕೆ ಕೆರೆಯ ಹಿಂಭಾಗದಲ್ಲಿ ಅವರಿಲ್ಲ ನಾಟಕ ಕಲೆಯನ್ನು ಬದುಕು ರೂಡಿಸಿಕೊಳ್ಳಲು ಮುಂದೆ ನಿಂತಿರುವ ರಂಗಭೂಮಿ ಕಲಾವಿದರ ನಾಟಕ ಪ್ರದರ್ಶನಗಳ ಮೂಲಕ ಗತ ವೈಭವ ಹಾಗೂ ನಮ್ಮ ನಾಡಿನ ಸಂಸ್ಕೃತಿ ಎತ್ತಿ ಹಿಡಿಯರಿದ್ದಾರೆ ಅಲ್ಲದೆ ಮುಂದಿನ ಪೀಳಿಗೆಗೂ ಗತ ವೈಭವ ಸಾರುವ ಹಿನ್ನೆಲೆಯಲ್ಲಿ ಇವರ ಶ್ರಮ ಅಷ್ಟೇ ಇರುತ್ತದೆ.
ಇದಕ್ಕಾಗಿ ಎಲೆ ಪೇಟೆಯ ಸಮಾನ ಮನಸ್ಕರ ಸೇವಾ ಸಮಿತಿ ಹಾಗೂ ಶ್ರೀ ವಿದ್ಯಾ ಗಣಪತಿ ಗೆಳೆಯರ ಸಂಘ ಕಳೆದ ಎಂಟು ವರ್ಷಗಳಿಂದಲೂ ಜಾಲರಿ ಗಂಗಮ್ಮ ದೇವಾಲಯದ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದ ಅಂಗವಾಗಿ ನಾಟಕ ಪ್ರದರ್ಶನ ಮಾಡಿಸುವ ಮೂಲಕ ಪ್ರೇಕ್ಷಕರಿಗೆ ಭಕ್ತಿ ಹಾಗೂ ಹಾಸ್ಯ ನೀಡುವುದು ಒಂದು ಕಡೆ ಅದರೇ ಮತ್ತೊಂದು ಕಡೆ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಿದು ನಮ್ಮ ಧ್ಯೇಯವಾಗಿದೆ ಎಂದರು.
ಕಲಾವಿದರ ಪ್ರೋತ್ಸಾಹಕ್ಕೆ ಕರಗ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಕೆ ವಿ ಮಂಜುನಾಥ್, ಆನಂದ್ ರೆಡ್ಡಿಬಾಬು, 20ನೇ ವಾರ್ಡಿನ ನಗರಸಭೆ ಸದಸ್ಯರಾದ ನರಸಿಂಹಮೂರ್ತಿ, ಕಂದವಾರಪೇಟೆ ನಗರಸಭೆ ಸದಸ್ಯರಾದ ಟಿ ಅಂಬರೀಶ್, ಸಮಾಜ ಸೇವಕಿ, ಸರಸ್ವತಿ ಸಂತೋಷ್, ಲಕ್ಷ್ಮಿ ದೇವಿವೇಣುಗೋಪಾಲ್, ಸೇರಿದಂತೆ ಇತರರು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ನಾಟಕಗಳು ಸಹಕಾರಿಯಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಕಲಾವಿದರ ಉತ್ತಮ ಕಲಾಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ನಾಟಕ ಪ್ರಮುಖ ಪಾತ್ರಧಾರಿಗಳಾದ ಗಣೇಶ್ ಹಾಗೂ ಸುರೇಂದ್ರ ಅವರ ತಂಡದಲ್ಲಿ ಹತ್ತು ಜನಕ್ಕೂ ಹೆಚ್ಚು ಕಲಾವಿದರು ಇಡೀರಾತ್ರಿ ತಮ್ಮ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನ ನಕ್ಕು ನಲಿಸಿ ಭಕ್ತಿಯ ಸಿಂಚನ ಉಣಪಡಿಸುತ್ತಾ ಕಟ್ಟಿಹಾಕಿದರು.