ದೇವನಹಳ್ಳಿ: ದೇಶದಲ್ಲಿ ದಲಿತರ ದೌರ್ಜನ್ಯ ದಬ್ಬಾಳಿಕೆಗೆ ಕಡಿವಾಣ ಹಾಕಲು ಡಾ. ಬಿಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪೀಠಿಕೆಯಿಂದ ಮಾತ್ರ ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅವರು ಸಮಿತಿಯ ಪದಾಧಿಕಾ ರಿಗಳಿಗೆ ಪುನರ್ ಎಚ್ಚರಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜಾಪುರ ಜಿಲ್ಲೆ ಆಲಮಟ್ಟಿ ಡ್ಯಾಮ್ ಸಮೀಪದ ಮಂಜಪ್ಪ ಸ್ಮರಕ ಭವನದಲ್ಲಿ ಜ.20, 21 ರ ಶನಿವಾರ,ಭಾನುವಾರ ರಂದು ನಡೆಯುವ ದಲಿತ ಐಕ್ಯತೆ ಸಂಘರ್ಷ ಆರದ-ಶೋಷಿತರ ಹಣತೆ ಅದ್ಯಾಯನ ಶಿಬಿರದ ಅಂಗವಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ಪತ್ರಿಕಾ ಘೋಷ್ಠಿ ನಡೆಸಿದರು.
ಬಳಿಕ ಮಾತನಾಡಿದ ಅವರು ಆಳುವ ಸರ್ಕಾರಗಳು ದಲಿತರ ಆಶೋತ್ತರಗಳಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸು ವುದಾಗಿ ಅಧಿಕಾರಕ್ಕೆ ಬರುತ್ತಾರೆ ಆದರೆ ಅವರಲ್ಲಿ ಮುಂದುವರಿದ ಸಮುದಾಯಗಳ ಮೇಲಿನ ಕಾಳಜಿಯ ವರ ದಲಿತರ ಅಭಿವೃದ್ಧಿಯಲ್ಲ ಹಾಗಾಗಿ ಬಿಜಾಪುರ ಜಿಲ್ಲೆಯ ಆಲಮಟ್ಟಿಯ ಮಂಜಪ್ಪ ಸ್ಮಾರಕ ಭವನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಹಯೋಗದೊಂದಿಗೆ ಸಂಘರ್ಷ ಆಧಾರದ ಶೋಷಿತರ ಹಣತೆ ಅಧ್ಯಯನ ಶಿಬಿರವನ್ನು ನುರಿತ ಚಿಂತಕರಿಂದ ನಡಿಯಲಿತ್ತು ದಲಿತರ ಸರ್ವತೋಮುಖ ಅಭಿವೃದ್ಧಿ ಸಂಘಟನೆಯ ಶಕ್ತಿಯಿಂದ ಮಾತ್ರ ಸಾಧ್ಯ ನೋಂದವರ ಬೆಳಕಾಗಿ ನಿಲ್ಲುವುದೇ ದಲಿತ ಸಂಘರ್ಷ ಸಮಿತಿ ಬೆಂಗ ಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗ ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸುವಂತೆ ಮನವಿ ಮಾಡಿ ದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್, ಜಿಲ್ಲಾ ಸಂಚಾಲಕರಾದ ಹೆಚ್ ವಿ.ವೆಂಕ ಟೇಶ್, ಸಂಘಟನಾ ಸಂಚಾಲಕರಾದ ಅಂಬರೀಶ್, ಗೋವಿಂದ ರಾಜು, ಮುನಿರಾಜು, ತಾಲ್ಲೂಕು ಸಂಚಾಲಕ ನರಸಿಂಹಯ್ಯ, ಖಜಾಂಚಿ ನಾಗರಾಜ್ ಸೇರಿದಂತೆ ಹೋಬಳಿ ಮಟ್ಟದ ಪದಾದಿಕಾರಿಗಳು ಹಾಜರಿದ್ದರು.